National Youth Day 2023 : ಹೊಸ ಕೌಶಲ್ಯಗಳನ್ನು ನಾವು ಕಲಿತುಕೊಳ್ಳಬೇಕು – ಮೋದಿ
ಹುಬ್ಬಳ್ಳಿ : 26ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ( National Youth Day 2023 ) ಭವ್ಯ ಸ್ವಾಗತ ಸಿಕ್ಕಿದೆ.. ಅವಳಿ ನಗರ ಹುಬ್ಬಳ್ಳಿ ಧಾರವಾಡದಲ್ಲಿ 5 ದಿನಗಳ ಕಾಲ ನಡೆಯಲಿರುವ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ..
ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ರೈಲ್ವೇ ನಿಲ್ದಾಣದ ವರೆಗೂ ರೋಡ್ ಶೋ ಮೂಲಕ ಬಂದ ಪ್ರಧಾನಿ ನರೇಂದ್ರ ಮೋದಿ ಅವರನ್ನ ಕಣ್ತುಂಬಿಕೊಂಡ ಜನ ಜೈ ಮೋದಿ ಎಂದು ಘೋಷಣೆ ಕೂಗಿದ್ದಾರೆ..
ಈ ವೇಳೆ ಈ ಶತಮಾನ ಭಾರತದ ಶತಮಾನ ಎಂದು ಇಡೀ ವಿಶ್ವವೇ ಹೇಳುತ್ತಿದೆ. ಈ ಕಾರಣಕ್ಕೆ ರನ್ ವೇ ಸಿದ್ದವಾಗಿದೆ. ಹೊಸ ಹೊಸ ಕೌಶಲ್ಯಗಳನ್ನು ಕಲಿತು ನೀವು ಟೇಕಾಫ್ ಆಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಯುವ ಜನತೆಗೆ ಕರೆ ನೀಡಿದ್ದಾರೆ.
ಇದೇ ವೇಳೆ ಜಗತ್ತಿಗೆ ಅನುಗುಣವಾಗಿ ನಾವು ಬದಲಾಗಬೇಕು. ಹೊಸ ಕೌಶಲ್ಯಗಳನ್ನು ನಾವು ಕಲಿತುಕೊಳ್ಳಬೇಕು. ವಿಶ್ವ ಈಗ ಬದಲಾಗುತ್ತಿದ್ದು ಆರ್ಟಿಫಿಶಿಯಲ್ ಇಂಟಲಿಜೆನ್ಸ್, ವಿಆರ್ ಟೆಕ್ನಾಲಜಿ, ಡೇಟಾ ಸೈನ್ಸ್, ಸೈಬರ್ ಸೆಕ್ಯೂರಿಟಿಯಂತಹ ಹೊಸ ಹೊಸ ವಿಷಯಗಳು ಬರುತ್ತಿವೆ. ಈಗ ಇರುವ ಉದ್ಯೋಗಗಳು ಮುಂದೆ ಇರುವುದಿಲ್ಲ. ಹೇಗೆ ಬದಲಾಗಬೇಕು ಎಂದರೆ ಮುಂದುವರಿದ ದೇಶಗಳಿಗಿಂತ 10 ಹೆಜ್ಜೆ ಮುಂದೆ ನಾವಿರಬೇಕು. ಈ ಕಾರಣಕ್ಕೆ ಪ್ರಾಯೋಗಿಕ ಮತ್ತು ಭವಿಷ್ಯದ ದೃಷ್ಟಿಯನ್ನು ನೋಡಿಕೊಂಡು ಹೊಸ ಶಿಕ್ಷಣ ನೀತಿಯನ್ನು ನಾವು ತಂದಿದ್ದೇವೆ ಎಂದರು..