ಮೊದಲ ಸಲ ರುಪಾಯಿಯಲ್ಲೇ ತೈಲ ಬಿಲ್ ಪಾವತಿಸಿದ ಭಾರತ
India paid oil bill in rupees for the first time
ಭಾರತ ಜಗತ್ತಿನ ಮೂರನೇ ಅತೀದೊಡ್ಡ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿರುವ ಹಾಗೂ ಬಳಸುತ್ತಿರುವ ರಾಷ್ಟ್ರವಾಗಿದೆ. ಹೀಗೆ ಆಮದು ಮಾಡಿಕೊಂಡ ಕಚ್ಚಾ ತೈಲ ಭಾರತ ಡಾಲರ್ ರೂಪದಲ್ಲಿ ಹಣ ಪಾವತಿ ಮಾಡುತ್ತಿತ್ತು. ಆದರೆ ಇದೀಗ ಭಾರತ ಡಾಲರ್ ರೂಪದಲ್ಲಿ ಹಣ ಪಾವತಿ ಮಾಡದೆ, ಮೊದಲ ಬಾರಿಗೆ ಭಾರತ ರೂಪಾಯಿಯಲ್ಲಿ ಹಣ ಪಾವತಿ ಮಾಡಿದೆ.
ಹೌದು ಭಾರತ ಬಹಳ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗುತ್ತಿದೆ. ಹೀಗಾಗಿ ಡಾಲರ್ ಅವಲಂಬನೆಯನ್ನು ತಗ್ಗಿಸಿ ನಮ್ಮ ದೇಶದ ರೂಪಾಯಿಯಲ್ಲಿ ವ್ಯವಹಾರ ಮಾಡಲು ಭಾರತ ನಿರ್ಧರಿಸಿತ್ತು. ಇದರ ಮೊದಲ ಭಾಗವೆಂಬಂತೆ ಭಾರತಕ್ಕೆ ಪ್ರಮುಖ ಕಚ್ಚಾ ತೈಲ ಪೂರೈಕೆ ಮಾಡುತ್ತಿರುವ ದೇಶವಾಗಿರುವ UAE ಗೆ ಕಚ್ಚಾತೈಲ ಖರೀದಿಗೆ ಭಾರತದ ಇಂಡಿಯನ್ ಆಯಿಲ್ (IOC) ರೂಪಾಯಿಯಲ್ಲಿ ಹಣ ಪಾವತಿ ಮಾಡಿದೆ. ಈ ಮೂಲಕ ಅಮೆರಿಕದ ಅವಲಂಬನೆಯನ್ನು ಡಾಲರ್ ಮೇಲಿನ ತಪ್ಪಿಸುವ ಮಹತ್ವದ ಹೆಜ್ಜೆ ಇರಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಯುಎಇ ಭೇಟಿಯ ಸಮಯದಲ್ಲಿ ಸ್ಥಳೀಯ ಕರೆನ್ಸಿಗಳಲ್ಲೇ ವ್ಯವಹಾರ ನಡೆಸಲು ಉಭಯ ದೇಶಗಳು ಒಪ್ಪಂದ ಮಾಡಿಕೊಂಡಿದ್ದವು. ಅಲ್ಲದೇ ರಿಯಲ್ ಟೈಮ್ ಪೇಮೆಂಟ್ ಲಿಂಕ್ ಬಳಸಿ ವ್ಯವಹಾರ ನಡೆಸುವುದಕ್ಕೂ ಚಾಲನೆ ನೀಡಲಾಗಿತ್ತು.
ಹೀಗಾಗಿ ಕಳೆದ ಜುಲೈನಲ್ಲಿ ಅಬುಧಾಬಿಯ ನ್ಯಾಷನಲ್ ಆಯಿಲ್ ಕಂಪನಿಯಿಂದ ಖರೀದಿದ್ದ ಲಕ್ಷಾಂತರ ಬ್ಯಾರಲ್ ಕಚ್ಚಾತೈಲದ ಪಾವತಿಯನ್ನು ರೂಪಾಯಿ ರೂಪದಲ್ಲೇ ಪಾವತಿ ಮಾಡಿದೆ.
ಇದರ ಮೂಲಕ ಡಾಲರ್ನಲ್ಲಿ ನಡೆಯುತ್ತಿದ್ದ ವಿನಿಮಯಕ್ಕೆ ಇತಿಶ್ರೀ ಹಾಡಬಹುದಾಗಿದೆ. 2022- 23ರಲ್ಲಿ ಉಭಯ ದೇಶಗಳ ನಡುವೆ ಸುಮಾರು 4.42 ಲಕ್ಷ ಕೋಟಿ ರು.ನಷ್ಟು ವ್ಯವಹಾರ ನಡೆದಿದೆ.