ನೀಲಿ ಚಿತ್ರ ತಾರೆ ಅಮೆರಿಕ ಜೆಸ್ಸಿ ಜೇನ್ ತನ್ನ ಬಾಯ್ ಫ್ರೆಂಡ್ ಜೊತೆ ಶವವಾಗಿ ಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಹೆಚ್ಚಿನ ಮಾದಕವಸ್ತು ಸೇವನೆಯಿಂದಾಗಿ ಜೇನ್ ಹಾಗೂ ಬಾಯ್ ಫ್ರೆಂಡ್, ನಟ ಬ್ರೆಟ್ ಹ್ಯಾಸೆನ್ಮುಲ್ಲರ್ ಶವವಾಗಿ ಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. 43ರ ವಯಸ್ಸಿನ ಜೆಸ್ಸಿ ಜೇನ್ ತನ್ನ ಬಾಯ್ ಫ್ರೆಂಡ್ ಮನೆಯಲ್ಲಿಯೇ ವಾಸಿಸುತ್ತಿದ್ದರು. ಸದ್ಯ ಶವ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗುತ್ತಿದೆ.
2003ರಲ್ಲಿ ನೀಲಿ ಚಿತ್ರದ ಮೂಲಕ ಗುರುತಿಸಿಕೊಂಡಿದ್ದ ಜಸ್ಸಿ, ದುಬಾರಿ ವೆಚ್ಚದ ಸಿನಿಮಾಗಳಲ್ಲಿಯೂ ನಟಿಸಿದ್ದರು. ಹೀಗಾಗಿ ಜನಪ್ರಿಯತೆಯನ್ನು ಕೂಡ ಗಳಿಸಿದ್ದರು. ಇವರು ನಡೆಸುತ್ತಿದ್ದ ಮಿಡ್ ನೈಟ್ ಕಾರ್ಯಕ್ರಮ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಸದ್ಯ ಇವರ ಸಾವಿನಿಂದಾಗಿ ಅಭಿಮಾನಿಗಳು ಶಾಕ್ ಆಗಿದ್ದಾರೆ.