ಪ್ಯಾರಿಸ್: ಚಿನ್ನದ ಹುಡುಗ ನೀರಜ್ ಚೋಪ್ರಾ (Neeraj Chopra) ಮೊದಲ ಪ್ರಯತ್ನದಲ್ಲೇ ಪ್ಯಾರಿಸ್ ಒಲಿಂಪಿಕ್ಸ್ (Paris Olympics) ನಲ್ಲಿ ಫೈನಲ್ ಗೆ ಎಂಟ್ರಿ ಕೊಟ್ಟಿದ್ದಾರೆ.
ಮೊದಲ ಎಸೆತದಲ್ಲಿಯೇ ದೂರ ಎಸೆಯುವ ಮೂಲಕ ಅವರು ಪುರುಷರ ಜಾವೆಲಿನ್ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಮಂಗಳವಾರ ಪುರುಷರ ಜಾವೆಲಿನ್ ಥ್ರೋ ಅರ್ಹತಾ ಸುತ್ತಿನಲ್ಲಿ 89.34 ಮೀ ಎಸೆದು ನೀರಜ್ ಫೈನಲ್ ಗೆ ಎಂಟ್ರಿ ಕೊಟ್ಟಿದ್ದಾರೆ. ವಿಶ್ವ ಚಾಂಪಿಯನ್ ಮೇನಲ್ಲಿ ನಡೆದ ದೋಹಾ ಡೈಮಂಡ್ ಲೀಗ್‌ನಲ್ಲಿ 88.36 ಮೀ. ಎಸೆದಿದ್ದರು.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ 87.58 ಮೀಟರ್ ಜಾವೆಲಿನ್ ಎಸೆದು ನೀರಜ್ ಚಿನ್ನ ಜಯಿಸಿದ್ದರು. ಆದರೆ, ಈಗ 89 ಮೀಟರ್ ಗಿಂತಲೂ ದೂರ ಎಸೆದು ಚಿನ್ನದ ಭರವಸೆ ಮೂಡಿಸಿದ್ದಾರೆ.