World Championship – ಮೊದಲ ಸುತ್ತಿನ ಮೊದಲ ಎಸೆತದಲ್ಲಿ ಫೈನಲ್ ತಲುಪಿದ ನೀರಜ್ ಚೋಪ್ರಾ…
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದ ನೀರಜ್ ಚೋಪ್ರಾ ಮತ್ತೊಮ್ಮೆ ಅದ್ಭುತ ಸಾಧನೆ ಮಾಡಿದ್ದಾರೆ. ಅಮೆರಿಕದ ಯುಜೀನ್ ನಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ತಲುಪಿದ್ದಾರೆ. ನೀರಜ್ ಅರ್ಹತಾ ಸುತ್ತಿನ ಮೊದಲ ಎಸೆತದಲ್ಲೇ 88.39 ಮೀಟರ್ ದೂರ ಕ್ರಮಿಸಿ ಫೈನಲ್ ಗೆ ಲಗ್ಗೆಯಿಟ್ಟಿದ್ದಾರೆ.
ನೀರಜ್ ಹೊರತಾಗಿ ಭಾರತದ ರೋಹಿತ್ ಯಾದವ್ ಕೂಡ ಫೈನಲ್ ಪ್ರವೇಶಿಸಿದ್ದಾರೆ. ರೋಹಿತ್ 80.42 ಮೀಟರ್ ದೂರ ಎಸೆದು ಅರ್ಹತೆ ಪಡೆದುಕೊಂಡಿದ್ದಾರೆ. ಈ ಸ್ಪರ್ಧೆಯ ಅಂತಿಮ ಪಂದ್ಯ ಭಾನುವಾರ ನಡೆಯಲಿದೆ. ಭಾರತದ ಅಣ್ಣು ರಾಣಿ ಈಗಾಗಲೇ ಮಹಿಳೆಯರ ವಿಭಾಗದ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
ಫೈನಲ್‌ನಲ್ಲಿ ಅಣ್ಣು ರಾಣಿ
ಭಾರತದ ಅಣ್ಣು ರಾಣಿ ಈಗಾಗಲೇ ಮಹಿಳೆಯರ ವಿಭಾಗದ ಫೈನಲ್‌ಗೆ ತಲುಪಿದ್ದಾರೆ. ಸತತ ಎರಡನೇ ಬಾರಿಗೆ ವಿಶ್ವ ಚಾಂಪಿಯನ್‌ಶಿಪ್‌ನ ಜಾವೆಲಿನ್ ಥ್ರೋನಲ್ಲಿ ಫೈನಲ್‌ಗೆ ಪ್ರವೇಶಿಸಿದ್ದಾರೆ.
https://twitter.com/i/status/1550278413226631170
ನೀರಜ್ ಚೋಪ್ರಾ ಅದ್ಭುತ ಸೀಸನ್
ನೀರಜ್ ಚೋಪ್ರಾ ಗೆ ಈ ಸೀಸನ್ ಅದ್ಭುತವಾಗಿದೆ. ಕಳೆದ ತಿಂಗಳು ಸ್ಟಾಕ್‌ಹೋಮ್‌ನಲ್ಲಿ ನಡೆದ ಪ್ರತಿಷ್ಠಿತ ಡೈಮಂಡ್ ಲೀಗ್‌ನಲ್ಲಿ ನೀರಜ್ 89.94 ಮೀಟರ್ ಜಾವೆಲಿನ್ ಎಸೆಯುವ ಮೂಲಕ ತಮ್ಮದೇ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದರು. ಇದಕ್ಕೂ ಮುನ್ನ ಫಿನ್‌ಲ್ಯಾಂಡ್‌ನಲ್ಲಿ ಪಾವೊ ನೂರ್ಮಿ ಗೇಮ್ಸ್‌ನಲ್ಲಿ ನೀರಜ್ ಚೋಪ್ರಾ 89.30 ಮೀಟರ್ ಜಾವೆಲಿನ್ ಎಸೆಯುವ ಮೂಲಕ ಬೆಳ್ಳಿ ಪದಕ ಗೆದ್ದಿದ್ದರು. ನಂತರ ಕುರ್ಟೇನ್ ಗೇಮ್ಸ್‌ನಲ್ಲಿ ತಮ್ಮ ಮೊದಲ ಪ್ರಯತ್ನದಲ್ಲೇ 86.69 ಮೀ. ದೂರ ಜಾವೆಲಿನ್ ಎಸೆಯುವ ಮೂಲಕ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದರು.








