ಬರ್ರೆನ್: ಚಿನ್ನದ ಹುಡುಗ ಭಾರತದ ಜಾವೆಲಿನ್ ಥ್ರೋ ಸ್ಪರ್ಧಿ ನೀರಜ್ ಚೋಪ್ರಾ (Neeraj Chopra) ಡೈಮಂಡ್ ಲೀಗ್ ನಲ್ಲಿ ಚಿನ್ನದ ಪದಕ ಗೆದ್ದು ಮತ್ತೆ ಮಿಂಚಿದ್ದಾರೆ.
ಒಲಿಂಪಿಕ್ಸ್ ನಂತರವೂ ಉತ್ತಮ ಫಾರ್ಮ್ ನಲ್ಲಿರುವ ನೀರಜ್ ಚೋಪ್ರಾ, ಡೈಮಂಡ್ ಲೀಗ್ (Lausanne Diamond League) ಸ್ಪರ್ಧೆಯಲ್ಲಿಯೂ ಚಿನ್ನಕ್ಕೆ ಕೊರಳೊಡ್ಡಿದ್ದಾರೆ. ಹಿಂದೆ ದೋಹಾ ಡೈಮಂಡ್ ಲೀಗ್ನಲ್ಲಿ ಗೆದ್ದಿದ್ದ ನೀರಜ್ ಚೋಪ್ರಾ, ಡೈಮಂಡ್ ಲೀಗ್ನಲ್ಲಿ ಸತತ 2ನೇ ಗೆಲುವು ಸಾಧಿಸಿದ್ದಾರೆ.
ಗಾಯದ ಹಿನ್ನೆಲೆಯಲ್ಲಿ ನೀರಜ್ ಯಾವುದೇ ಟೂರ್ನಿಯಲ್ಲಿ ಭಾಗವಹಿಸಿರಲಿಲ್ಲ. ಸದ್ಯ ಗುಣಮುಖರಾಗಿ ಡೈಮಂಡ್ ಲೀಗ್ ನಲ್ಲಿ ಭಾಗವಹಿಸಿ ಚಿನ್ನಕ್ಕೆ ಕೊರಳೊಡ್ಡಿದ್ದಾರೆ. ಸ್ವಿಡ್ಜರ್ಲ್ಯಾಂಡ್ನ ಲೌಸನ್ನೆಯಲ್ಲಿ ನಡೆದ ಲೀಗ್ ಫೈನಲ್ನಲ್ಲಿ 87.66 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ (Javelin Throw) ಮೀಲಕ ಅಗ್ರಸ್ಥಾನದಲ್ಲಿ ಉಳಿದುಕೊಂಡರು. ನೀರಜ್ ತಮ್ಮ ಕೊನೆಯ ಪ್ರಯತ್ನದಲ್ಲಿ 87.66 ಮೀಟರ್ ದೂರ ಜಾವೆಲಿನ್ ಥ್ರೋ ಮಾಡುವ ಅಗ್ರಸ್ಥಾನ ಉಳಿಸಿಕೊಂಡರು. ಜರ್ಮನಿಯ ಜೂಲಿಯನ್ ವೆಬರ್ ಮತ್ತು ಜಕುಬ್ ವಡ್ಲೆಜ್ ತಮ್ಮ ಕೊನೆಯ ಪ್ರಯತ್ನಗಳಲ್ಲಿ ಕ್ರಮವಾಗಿ 87.03 ಮೀ ಹಾಗೂ 86.13 ಮೀ ದಾಖಲಿಸಿ 2 ಮತ್ತು 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.








