ಭಾರತಕ್ಕೆ ಹಸ್ತಾಂತರ ಪ್ರಶ್ನಿಸಿ ಬ್ರಿಟನ್ ಹೈಕೋರ್ಟ್ ಗೆ ನೀರವ್ ಮೋದಿ ಸಲ್ಲಿಸಿದ್ದ ಅರ್ಜಿ ವಜಾ
ದೇಶದ ಪಂಜಾಬ್ ನ್ಯಾಷನಲ್ ನ್ಯಾಷನಲ್ ಬ್ಯಾಂಕ್ ಗೆ ಸಾವಿರಾರು ಕೋಟಿ ಪಂಗನಾಮ ಹಾಕಿ ವಿದೇಶಕ್ಕೆ ಫಲಾಯನ ಮಾಡಿದ್ದ ನೀರವ್ ಮೋದಿಯನ್ನ ಭಾರತಕ್ಕೆ ಹಸ್ತಾಂತರಿಸುವಂತೆ ಬ್ರಿಟನ್ ಸ್ಥಳೀಯ ಕೋರ್ಟ್ ಆದೇಶ ಹೊರಡಿಸಿತ್ತು.. ಇದನ್ನ ಪ್ರಶ್ನಿಸಿ ಉದ್ಯಮಿ ನೀರವ್ ಮೋದಿ ಸಲ್ಲಿಸಿದ್ದ ಅರ್ಜಿಯನ್ನು ಇದೀಗ ಬ್ರಿಟನ್ ನ ಹೈಕೋರ್ಟ್ ವಜಾಗೊಳಿಸಿದೆ.
ಬ್ರಿಟನ್‌ನ ಕಾನೂನಿನಡಿ, ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಮೌಖಿಕ ಮೇಲ್ಮನವಿ ಸಲ್ಲಿಸಲು ಈಗ ನೀರವ್ ಮೋದಿಗೆ 5 ದಿನಗಳ ಕಾಲಾವಕಾಶ ಸಿಗಲಿದೆ.
ಇನ್ನೂ ಒಂದು ವೇಳೆ ನೀರವ್ ಮೋದಿ ಮೇಲ್ಮನವಿ ಸಲ್ಲಿಸಿದರೆ, ಆ ಅರ್ಜಿಯನ್ನು ಪುರಸ್ಕರಿಸದಂತೆ ಹೈಕೋರ್ಟ್‌ನಲ್ಲಿ ವಾದ ಮಂಡಿಸುವುದಾಗಿ ಭಾರತ ಸರ್ಕಾರದ ಪರ ವಾದ ಮಂಡಿಸುತ್ತಿರುವ ಕ್ರೌನ್ ಪ್ರಾಸಿಕ್ಯೂಷನ್ ಸರ್ವೀಸ್ (ಸಿಪಿಎಸ್) ಸಂಸ್ಥೆ ಹೇಳಿದೆ.
ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸುವಂತೆ ವೆಸ್ಟ್‌ಮಿನ್ ಸ್ಟರ್ ನ್ಯಾಯಾಲಯ ಫೆಬ್ರುವರಿಯಲ್ಲಿ ಆದೇಶಿಸಿತ್ತು. ನಂತರ, ಅವರ ಹಸ್ತಾಂತರಕ್ಕೆ ಬ್ರಿಟನ್‌ನ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಏಪ್ರಿಲ್‌ನಲ್ಲಿ ಆದೇಶಿಸಿದ್ದರು. ಈ ಆದೇಶ ಪ್ರಶ್ನಿಸಿ ನೀರವ್ ಮೋದಿ ಪರ ವಕೀಲರು ಮೇಲ್ಮನವಿ ಸಲ್ಲಿಸಿದ್ದರು.








