ಬಹುಕೋಟಿ ಬ್ಯಾಂಕಿಂಗ್ ಹಗರಣದ ಆರೋಪಿ ನೀರವ್ ಗಡಿಪಾರಿಗೆ ಅನುಮತಿ ಕೊಟ್ಟ ಲಂಡನ್..!
ಭಾರತದ ಬಹುಕೋಟಿ ಬ್ಯಾಂಕಿಂಗ್ ಹಗರಣದ ಆರೋಪಿ ನೀರವ್ ಮೋದಿ ಸದ್ಯ ದೇಶ ಬಿಟ್ಟು ಪರಾರಿಯಾಗಿ ಲಂಡನ್ ನಲ್ಲಿದ್ದಾನೆ. ಆದ್ರೆ ಈಗ ಭಾರತಕ್ಕೆ ನೀರವ್ ಮೋದಿಯನ್ನು ಗಡಿಪಾರು ಮಾಡಲು ಬ್ರಿಟನ್ ಅನುಮತಿ ನೀಡಿದೆ. ಲಂಡನ್ ಗೃಹ ಸಚಿವಾಲಯದಿಂದ ಅನುಮತಿ ನೀಡಲಾಗಿದ್ದು, ಶೀಘ್ರವೇ ಭಾರತಕ್ಕೆ ಹಸ್ತಾಂತರಿಸಲಾಗುವುದು. ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಬಹುಕೋಟಿ ಹಗರಣದ ಆರೋಪಿಯಾಗಿರುವ ಉದ್ಯಮಿ ನೀರವ್ ಮೋದಿ ಸಾವಿರಾರು ಕೋಟಿ ರೂಪಾಯಿಗಳನ್ನ ಪಂಗನಾಮ ಹಾಕಿ ದೇಶ ಬಿಟ್ಟು ಪರಾರಿಯಾಗಿದ್ದ.
ವಂಚನೆ ಮಾಡಿ ಲಂಡನ್ ನಲ್ಲಿ ನೆಲೆಸಿರುವ ನೀರವ್ ಮೋದಿಯನ್ನು ಹಸ್ತಾಂತರಿಸಬೇಕೆಂದು ರಾಜತಾಂತ್ರಿಕ ಮಾರ್ಗಗಳ ಮೂಲಕ ಪ್ರಯತ್ನ ನಡೆಸಲಾಗಿತ್ತು. ಲಂಡನ್ ಕೋರ್ಟ್ ನಲ್ಲಿಯೂ ವಿಚಾರಣೆ ನಡೆದಿತ್ತು. ಇದೀಗ ನೀರವ್ ಮೋದಿ ಗಡಿಪಾರು ಮಾಡುವುದಕ್ಕೆ ಕಾಲ ಕೂಡಿ ಬಂದಿದೆ.