ಆರ್‍ಎಸ್‍ಎಸ್ ಅನ್ನು ಟೀಕಿಸುವ ಕಾಂಗ್ರೆಸ್ಸಿಗರು ನೆಹರೂಗಿಂತ ಮೇಲಿನವರಾ..?

1 min read

ಆರ್‍ಎಸ್‍ಎಸ್ ಅನ್ನು ಟೀಕಿಸುವ ಕಾಂಗ್ರೆಸ್ಸಿಗರು ನೆಹರೂಗಿಂತ ಮೇಲಿನವರಾ..?

ಉಡುಪಿ : ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಆರ್ ಎಸ್ ಎಸ್ ಸಂಘಟನೆಯನ್ನು ಹೊಗಳಿದ್ದರು.

ಈಗ ಆರ್ ಎಸ್ ಎಸ್ ಅನ್ನು ಟೀಕಿಸುವ ಕಾಂಗ್ರೆಸ್ ನಾಯಕರು ನೆಹರೂಗಿಂತ ಮೇಲಿನವರಾ ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಪ್ರಶ್ನಿಸಿದ್ದಾರೆ.

ಸಚಿವರು ಇಂದು ಸಂವಿಧಾನ ದಿನಾಚರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತದ ಮಾಜಿ ಪ್ರಧಾನಿ ನರೇಂದ್ರ ಮೋದಿ ಆರ್ ಎಸ್ ಎಸ್ ರಾಷ್ಟ್ರಪ್ರೇಮಿ ಸಂಘಟನೆ ಎಂದು ಬಣ್ಣಿಸಿದ್ದರು.

Nehru saaksha tv

ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಆರ್‍ಎಸ್‍ಎಸ್‍ಗೆ ಅವಕಾಶ ಕೊಟ್ಟಿದ್ದರು. ಈಗ ಆರ್‍ಎಸ್‍ಎಸ್ ಅನ್ನು ಟೀಕಿಸುವ ಕಾಂಗ್ರೆಸ್ ನಾಯಕರು ನೆಹರೂಗಿಂತ ಮೇಲಿನವರಾ ಎಂದು ಗುಡುಗಿದರು.

ಇನ್ನು ಭಾರತೀಯ ಜನತಾ ಪಾರ್ಟಿಯನ್ನ ಬೈಯ್ಯೋದೇ ಕಾಂಗ್ರೆಸ್ ಪಕ್ಷದ ಅಜೆಂಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಬಗ್ಗೆ ನಮಗೆ ಭಾವುಕತೆಯಿದೆ.

ಪರಿಷತ್ ಚುನಾವಣೆ ಟಿಕೆಟ್ ಹಂಚಿಕೆಯಲ್ಲಿ ಬಿಜೆಪಿ ಸಾಮಾಜಿಕ ನ್ಯಾಯಕ್ಕೆ ಅನುಗುಣವಾಗಿ ಪಟ್ಟಿ ಸಿದ್ಧಪಡಿಸಿದೆ. ಅಸ್ಪೃಶ್ಯತೆ ತೊಡೆದು ಹಾಕುವ ಸವಾಲು ನಮ್ಮ ಮುಂದೆ ಇದೆ ಎಂದರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd