Nenapirali Prem
ರಾಜರಾಜೇಶ್ವರಿ ನಗರದಲ್ಲಿ ಉಪಚುನಾವಣೆಗೆ ಮತದಾನ ಪ್ರಕ್ರಿಯೆ ಬಿರಿಸಿನಿಂದ ನಡೆಯುತ್ತಿದೆ. ಮುಂಜಾನೆಯಿಂದಲೇ ಜನರು, ಹಾಗೂ ಸ್ಯಾಂಡಲ್ ವುಡ್ ತಾರೆಯರು ಬಂದು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಅದ್ರಂತೆ ನಟ ನೆನಪಿರಲಿ ಪ್ರೇಮ್ ಸಹ ಮತದಾನದ ಹಕ್ಕು ಚಲಾಯಿಸಿದ್ದಾರೆ. ಪತ್ನಿಯ ಜೊತೆ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿ, ಅಭಿಮಾನಿಗಳು ಸಹ ಮತದಾನ ಮಾಡುವಂತೆ ಮನವಿ ಮಾಡಿಕೊಂಡರು. ಮತದಾನ ಮಾಡಿದ ಬಳಿಕ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ಟ್ವೀಟ್ ಮಾಡಿರುವ ಪ್ರೇಮ್ ‘ನಾನು ನನ್ನ ಕುಟುಂಬದೊಂದಿಗೆ ಮತ ಚಲಾಯಿಸಿದ್ದೇನೆ. ನಮ್ಮೆಲ್ಲರ ಉತ್ತಮ ಭವಿಷ್ಯಕ್ಕಾಗಿ ನೀವು ಮತ ಚಲಾಯಿಸಿ. ಪ್ರಜಾ ಪ್ರಭುತ್ವ ಉಳಿಸಿ’ ಎಂದು ಬರೆದುಕೊಂಡಿದ್ದಾರೆ.
ಇನ್ನೂ ಮುಂಜಾನೆಯಿಂದಲೇ ಮತದಾನ ಪ್ರಕ್ರಿಯೆ ಬಿರಿಸಿನಿಂದ ಸಾಗುತ್ತಿದೆ. ನಟಿ ಅಮೂಲ್ಯ ಅವರು ತಮ್ಮ ಪತಿ ಜಗದೀಶ್ ಹಾಗೂ ಅತ್ತೆ ಮಾವನ ಜೊತೆಗೆ ಆಗಮಿಸಿ ಮತಚಲಾಯಿಸಿದ್ದಾರೆ. ಅಲ್ಲದೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿ ಕಾರುಣ್ಯ ರಾಮ್ ಹಾಗೂ ಸಹೋದರಿ ಸಹ ತಮ್ಮ ಹಕ್ಕು ಚಲಾಯಿಸಿದ್ದಾರೆ. ಆರ್ ಆರ್ ವ್ಯಾಪ್ತಿಯಲ್ಲಿನ ತಾರೆಯರು ಹಾಗೂ ರಾಜಕಾರಣಿಗಳು ಈಗಾಗಲೇ ಮತದಾನ ಮಾಡಿದ್ದಾರೆ.
Nenapirali Prem
ಒಂದೇ ಸಿನಿಮಾ , ಐವರು ಸ್ಟಾರ್ ನಿರ್ದೇಶಕರು : ಚಂದನವನದಲ್ಲಿ ವಿಭಿನ್ನ ಪ್ರಯತ್ನ..!
RR ನಗರದಲ್ಲಿ ಸಹೋದರಿ ಜೊತೆ ಬಂದು ಮತದಾನ ಮಾಡಿದ ಕಾರುಣ್ಯ ಹೇಳಿದ್ದು ಹೀಗೆ..!
RR ನಗರ ‘ಉಪಸಮರ’: ಹಕ್ಕು ಚಲಾಯಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
ಕೋಮಲ್ ಅವರ ಮುಂದಿನ ಚಿತ್ರದ ಟೈಟಲ್ ಗೂ ‘ಕೊರೊನಾ’ಗೂ ಏನ್ ಸಂಬಂಧ..!
ಸ್ಯಾಂಡಲ್ವುಡ್ ಡ್ರಗ್ಸ್ ಕೇಸ್; ನಶೆರಾಣಿ ರಾಗಿಣಿ, ಸಂಜನಾ ಜಾಮೀನು ಅರ್ಜಿ ವಜಾ
ಬೋಳು ತಲೆ ಮರೆಮಾಚಿ ಮದುವೆ – ಪತಿಯ ವಿರುದ್ಧ ಪ್ರಕರಣ ದಾಖಲಿಸಿದ ಪತ್ನಿ
ಶಿರಾದಲ್ಲಿ ಹೈಟೆಕ್ ಮತಗಟ್ಟೆ; ರೆಡ್ ಕಾರ್ಪೆಟ್ ಹಾಸಿ ಮತದಾರರಿಗೆ ಭವ್ಯ ಸ್ವಾಗತ…!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








