ಬೋಳು ತಲೆ ಮರೆಮಾಚಿ ಮದುವೆ – ಪತಿಯ ವಿರುದ್ಧ ಪ್ರಕರಣ ದಾಖಲಿಸಿದ ಪತ್ನಿ hiding baldness
ಮುಂಬೈ, ನವೆಂಬರ್03: ಆಯುಷ್ಮಾನ್ ಖುರಾನಾ ಅವರ 2019 ರ ಚಲನಚಿತ್ರ ‘ಬಾಲಾ’ ದಲ್ಲಿ ಅಕಾಲಿಕವಾಗಿ ಕೂದಲು ಉದುರಿ ಬಕ್ಕ ತಲೆ ಉಂಟಾದಾಗ ಮದುವೆಯಾಗಲು ತನ್ನ ಪತ್ನಿಯಿಂದ ಅದನ್ನು ಮರೆಮಾಚುವ ವ್ಯಕ್ತಿಯ ಕಥೆಯಿದೆ. hiding baldness
ಈಗ, ಮುಂಬೈನಲ್ಲಿ ಅಂತಹುದೇ ಘಟನೆಯೊಂದು ನಡೆದಿದ್ದು, ಮಹಿಳೆಯೊಬ್ಬಳು ತನ್ನ ಬೋಳು ತಲೆಯನ್ನು ಮರೆಮಾಚಿದ್ದಕ್ಕಾಗಿ ತನ್ನ ಪತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾಳೆ.
27 ವರ್ಷದ ಚಾರ್ಟರ್ಡ್ ಅಕೌಂಟೆಂಟ್ ತನ್ನ 29 ವರ್ಷದ ಪತಿ ವಿರುದ್ಧ ಬೋಳು ತಲೆಯನ್ನು ಮರೆಮಾಚುವ ಮೂಲಕ ತನ್ನನ್ನು ಮೋಸ ಮಾಡಿದ್ದಾನೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾಳೆ. ಪತಿಯ ಕುಟುಂಬವೂ ಇದನ್ನು ಬಹಿರಂಗಪಡಿಸಿಲ್ಲ ಎಂದು ಆಕೆ ಆರೋಪಿಸಿದ್ದಾಳೆ.
ಮಥುರಾ ದೇವಸ್ಥಾನದಲ್ಲಿ ನಮಾಜ್ – ಪ್ರಕರಣ ದಾಖಲು
ದೂರಿನಲ್ಲಿ, ಮಹಿಳೆ ತನ್ನ ಪತಿ ವಿಗ್ ಧರಿಸುತ್ತಿದ್ದು, ಆತನ ತಲೆ ಬೋಳು ಎಂದು ತಿಳಿದಿದ್ದರೆ ಅವನನ್ನು ತಾನು ಮದುವೆಯಾಗುತ್ತಿರಲಿಲ್ಲ ಎಂದು ತಿಳಿಸಿದ್ದಾಳೆ.
ಮದುವೆಯಾದ ಒಂದು ದಿನದ ನಂತರ ತನ್ನ ಗಂಡನ ಬೋಳು ತಲೆಯ ಬಗ್ಗೆ ತಾನು ತಿಳಿದುಕೊಂಡಿದ್ದು, ತಾನು ಅತ್ತೆ ಮಾವನಲ್ಲಿ ಇದನ್ನು ಕೇಳಿದಾಗ ಅವರು ಇದು ಒಂದು ಸಣ್ಣ ವಿಷಯ ಎಂದು ಹೇಳಿದ್ದಾರೆ.
ತನ್ನ ಅತ್ತೆ ಮಾವ ಹೆಚ್ಚು ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದಾರೆ ಮತ್ತು ಪತಿ ತನ್ನ ಮೇಲೆ ಅಸ್ವಾಭಾವಿಕ ಲೈಂಗಿಕ ಕ್ರಿಯೆಗಳನ್ನು ಮಾಡಿದ್ದಾನೆ ಎಂದು ಆಕೆ ಆರೋಪಿಸಿದ್ದಾಳೆ.
ಮುಖ್ಯ ಆರೋಪಿ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ದೂರುದಾರಳನ್ನು ಈ ವರ್ಷದ ಸೆಪ್ಟೆಂಬರ್‌ನಲ್ಲಿ ವಿವಾಹವಾಗಿದ್ದನು. ನಂತರ ಆತನ ಬೋಳು ತಲೆ ಮತ್ತು ವಿಗ್ ಧರಿಸಿರುವುದನ್ನು ಮಹಿಳೆ ಪತ್ತೆ ಹಚ್ಚಿದ್ದಾಳೆ ಎಂದು ನಯಾ ನಗರ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಕೈಲಾಶ್ ಬಾರ್ವೆ ಹೇಳಿದ್ದಾರೆ.
ಪತಿ ಮತ್ತು ಅತ್ತೆ ಮಾವನ ಮೇಲೆ ಐಪಿಸಿಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಇತ್ತೀಚಿನ ಸುದ್ದಿಗಳಿಗಾಗಿ, ನಮ್ಮ ವಾಟ್ಸಾಪ್ ಗ್ರೂಪ್ ಗೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿ
https://chat.whatsapp.com/HZ6kIJcdmq8GNeQb9URf9M
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ