Covid19 : ದಕ್ಷಿಣ ಆಫ್ರಿಕಾದ ಬಾವಲಿಗಳಲ್ಲಿ ಹೊಸ ವೈರಸ್ NeoCov ಪತ್ತೆ..!
ಕೊರೊನಾ ವೈರಸ್ ಸಂಬಂಧಿಸಿದಂತಹದ್ದೇ ನಿಯೋಕೋವ್ ಎಂಬ ಹೊಸ ವೈರಸ್ ಅನ್ನ ಆಫ್ರಿಕಾದ ಬಾವಲಿಗಳಲ್ಲಿ ಪತ್ತೆ ಹಚ್ಚಲಾಗಿರೋದಾಗಿ ಚೀನಾದ ವುಹಾನ್ ವಿಜ್ಞಾನಿಗಳು ತಿಳಿಸಿದ್ದಾರೆ.. ಇದು SARs-CoV-2 ಅಥವಾ ಅದರ ರೂಪಾಂತರವಲ್ಲ. ಇದು MERS ಕೊರೊನಾವೈರಸ್‌ಗೆ ಸಂಬಂಧಿಸಿದೆ. ಅಲ್ಲದೇ ಈ ವೈರಸ್ ರೂಪಾಂತರಗೊಂಡಿದ್ದೇ ಆದಲ್ಲಿ ಮುಂಬರುವ ದಿನಗಳಲ್ಲಿ ಮನುಷ್ಯರಿಗೆ ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸಲಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
neocov – south africa – new virus founded by chaina scientists
ಮಿಡಲ್ ಈಸ್ಟ್ ರೆಸ್ಪಿರೇಟರಿ ಸಿಂಡ್ರೋಮ್ ಎಂಬ ಉಸಿರಾಟ ತೊಂದರೆ ಕಾಯಿಲೆಗೆ ಕಾರಣವಾಗುವ ವೈರಸ್ ಗೆ ಇರುವಂತಹ ಗುಣಲಕ್ಷಣಗಳನ್ನೇ ನಿಯೊಕೋವ್ ವೈರಾಣು ಹೊಂದಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಈ ವೈರಸ್ ಕುರಿತು ಹೆಚ್ಚಿನ ಅಧ್ಯಯನದ ಅಗತ್ಯ ಇದೆ ಎಂದಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಈ ವೈರಸ್ ರೂಪಾಂತರಗೊಳ್ಳುವ ಸಾಮರ್ಥ್ಯವನ್ನು ಹೊಂದಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.. ಅಲ್ಲದೇ ಇದು ಎಷ್ಟು ಅಪಾಯಕಾರಿ ಎಂಬುದನ್ನ ತಿಳಿಯಲು ಮತ್ತಷ್ಟು ಅಧ್ಯಯನದ ಅಗತ್ಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
Karnataka | ಕೋವಿಡ್ ನಿಯಮ ಸಡಿಲಿಕೆ.. ಯಾವುದಕ್ಕೆ ನಿರ್ಬಂಧ.. ಯಾವುದಕ್ಕೆ ಇಲ್ಲ..?