ನೇಪಾಳ: 20 ಸಚಿವರ ನೇಮಕ ಅಸಿಂಧುಗೊಳಿಸಿದ ಸುಪ್ರೀಂಕೋರ್ಟ್
ನೇಪಾಳ : ನೇಪಾಳದಲ್ಲಿ 20 ಸಚಿವರ ನೇಮಕವನ್ನು ಅಲ್ಲಿನ ಸರರ್ವೋಚ್ಛ ನ್ಯಾಯಾಲಯವು ಅಸಿಂಧುಗೊಳಿಸಿದೆ.. ಹೌದು ಅಲ್ಲಿನ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಅವರು 20 ಜನ ಸಚಿವರನ್ನು ನೇಮಕ ಮಾಡಿರುವುದು ಅಸಾಂವಿಧಾನಿಕ ಎಂದು ನೇಪಾಳ ಸುಪ್ರೀಂಕೋರ್ಟ್ ತೀರ್ಪು ನೀಡಿದೆ.
ಸಂಸತ್ ವಿಸರ್ಜನೆಗೊಳಿಸಿದ ನಂತರ ಪ್ರಧಾನಿ ಒಲಿ ಅವರು 2 ಬಾರಿ ಮಾಡಿದ್ದ ಸಂಪುಟ ವಿಸ್ತರಣೆ ಅಸಿಂಧುಗೊಂಡಂತಾಗಿದೆ. ಇದರೊಂದಿಗೆ ನೇಪಾಳದಲ್ಲಿ ಉದ್ಭವಿಸಿರುವ ರಾಜಕೀಯ ಬಿಕ್ಕಟ್ಟು ಈಗ ಮತ್ತಷ್ಟೂ ಜಟಿಲಗೊಂಡಂತಾಗಿದೆ.
ಮುಂಬೈ ದಾಳಿಯ ರೂವಾರಿ ಉಗ್ರ ಹಫೀಸ್ ಸಯೀದ್ ಮನೆ ಬಳಿ ಭಾರೀ ಸ್ಫೋಟ – ಇಬ್ಬರು ಬಲಿ
ಮುಖ್ಯನ್ಯಾಯಮೂರ್ತಿ ಚೋಳೇಂದ್ರ ಶಂಷೇರ್ ರಾಣಾ ಹಾಗೂ ನ್ಯಾಯಮೂರ್ತಿ ಪ್ರಕಾಶಕುಮಾರ್ ಧುಂಗಾನಾ ಅವರಿರುವ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ. ಈಗ, ಪ್ರಧಾನಿ ಒಲಿ ಸೇರಿದಂತೆ ಐವರು ಸಚಿವರು ಸಂಪುಟದಲ್ಲಿ ಉಳಿದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇಲ್ಲಿನ ರಾಜಕೀಯ ಬಿಕ್ಕಟ್ಟು ಯಾವು ತಿರುವು ಪಡೆದುಕೊಳ್ಳಲಿದೆ ಅನ್ನೋದನ್ನ ಕಾದು ನೋಡ್ಬೇಕಿದೆ…
ಭಾರತದಲ್ಲಿ ನಿಷೇಧವಾಗುತ್ತಾ ವಾಟ್ಸಾಪ್..!
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.








