26ನೇ ಬಾರಿಗೆ ಮೌಂಟ್  ಎವರೆಸ್ಟ್ ಏರಿ ವಿಶ್ವದಾಖಲೆ ಬರೆದ ಕಾಮಿ ರೀಟಾ ಶೆರ್ಪಾ….

1 min read

26ನೇ ಬಾರಿಗೆ ಮೌಂಟ್  ಎವರೆಸ್ಟ್ ಏರಿ ವಿಶ್ವದಾಖಲೆ ಬರೆದ ಕಾಮಿ ರೀಟಾ ಶೆರ್ಪಾ….

ನೇಪಾಳದ ಪ್ರಸಿದ್ಧ ಪರ್ವತಾರೋಹಿ ಕಾಮಿ ರೀಟಾ ಶೆರ್ಪಾ 26 ನೇ ಬಾರಿಗೆ ವಿಶ್ವದ ಅತಿ ಎತ್ತರದ ಶಿಖರವಾದ ಮೌಂಟ್ ಎವರೆಸ್ಟ್ ಏರಿ  ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. 11 ಸದಸ್ಯರ ರೋಪ್ ಫಿಕ್ಸಿಂಗ್ ತಂಡವನ್ನು ಮುನ್ನಡೆಸುತ್ತಿರುವ ಕಾಮಿ ರೀಟಾ ಮತ್ತು ಅವರ ತಂಡ ನಿನ್ನೆ ಮೌಂಟ್ ಎವರೆಸ್ಟ್ ಏರಿ  ಅವರದೇ ಹಿಂದಿನ ವಿಶ್ವ ದಾಖಲೆಯನ್ನ ಮುರಿದಿದ್ದಾರೆ.

ಎವರೆಸ್ಟ್ ಏರಿದ ನಂತರ, ಕಮಿ ರೀಟಾ ನೇತೃತ್ವದ ರೋಪ್ ಫಿಕ್ಸಿಂಗ್ ತಂಡವು ಯಶಸ್ವಿಯಾಗಿ ಮೇಲಿನಿಂದ ಬೇಸ್ ಕ್ಯಾಂಪ್‌ಗೆ ಇಳಿಯುತ್ತಿದೆ.

ಎವರೆಸ್ಟ್ ಕ್ಲೈಂಬಿಂಗ್ ಸೀಸನ್ ಹತ್ತಿರ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ, ನೂರಾರು ಪರ್ವಾತಾರೋಹಿಗಳು ಆಗಮಿಸುತ್ತಿದ್ದಾರೆ, ಕಾಮಿ ರೀಟಾ ಮತ್ತು ಅವರ ತಂಡವ ಪರ್ವತಾರೋಹಣದ ಹಗ್ಗಗಳನ್ನ ಸರಿಪಡಿಸಲು ಎವರೆಸ್ಟ್‌ನ ತುದಿ ತಲುಪಿದ್ದಾರೆ, ಇದರಿಂದ ನಂತರ ಪರ್ವತ ಏರುವವರಿಗೆ ಸುಲಭವಾಗಲಿದೆ.

ನೇಪಾಳದ ಸೋಲುಖುಂಬು ಜಿಲ್ಲೆಯಲ್ಲಿ 1970 ರಲ್ಲಿ ಜನಿಸಿದ ಅವರು ಮೇ 1994 ರಲ್ಲಿ ಎವರೆಸ್ಟ್ ಅನ್ನು ಮೊದಲ ಬಾರಿಗೆ ಏರಿದರು. 1950 ರಲ್ಲಿ ಎವರೆಸ್ಟ್ ಅನ್ನು ವಿದೇಶಿ ಪರ್ವತಾರೋಹಿಗಳಿಗೆ ತೆರೆದ ನಂತರ ಅವರ ತಂದೆ ಮೊದಲ ವೃತ್ತಿಪರ ಶೆರ್ಪಾ ಮಾರ್ಗದರ್ಶಕರಲ್ಲಿ ಒಬ್ಬರಾಗಿದ್ದರು. ಅವರ ಸಹೋದರ ಸಹ ಮಾರ್ಗದರ್ಶಕರಾಗಿದ್ದು, ಎವರೆಸ್ಟ್ ಅನ್ನು 17 ಬಾರಿ ಏರಿದ್ದಾರೆ.

ನೇಪಾಳದ ಪ್ರವಾಸೋದ್ಯಮ ಇಲಾಖೆಯ ಪ್ರಕಾರ, ಈ ಋತುವಿನಲ್ಲಿ 316 ಜನರು ಎವರೆಸ್ಟ್ ಅನ್ನು ಏರಲು ಅರ್ಜಿ ಸಲ್ಲಿಸಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd