ಫಾಕ್ಸ್ ಸ್ಪೋಟ್ರ್ಸ್ ಕ್ರೀಡಾ ಪತ್ರಕರ್ತೆ ಈಗ ಸ್ಟಾರ್ ಸ್ಪೋಟ್ರ್ಸ್ ನಿರೂಪಕಿ
ಸೆಪ್ಟಂಬರ್ 19ರಿಂದ ನವೆಂಬರ್ 10ರವರೆಗೆ 2020ರ ಐಪಿಎಲ್ ಟೂರ್ನಿ ನಡೆಯಲಿದೆ. ಈಗಾಗಲೇ ಕಣದಲ್ಲಿರುವ ಎಂಟು ತಂಡಗಳು ಕಠಿಣ ಅಭ್ಯಾಸದಲ್ಲಿ ನಿರತವಾಗಿವೆ. ಇನ್ನೊಂದೆಡೆ ಬಿಸಿಸಿಐ ಜೈವಿಕ ಸುರಕ್ಷತೆ ಮತ್ತು ಕೋವಿಡ್ ಮಾರ್ಗಸೂಚಿಗಳ ಪ್ರಕಾರ ಟೂರ್ನಿಯನ್ನು ಆಯೋಜಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿವೆ.
ಈ ನಡುವೆ, ಬಿಸಿಸಿಐ ಪಂದ್ಯಗಳ ವೀಕ್ಷಕ ವಿವರಣೆಕಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮತ್ತೊಂದೆಡೆ ಪಂದ್ಯಗಳ ಪ್ರಸಾರದ ಹಕ್ಕನ್ನು ಪಡೆದುಕೊಂಡಿರುವ ಸ್ಟಾರ್ ಸ್ಪೋಟ್ರ್ಸ್ ವಾಹಿನಿಯೂ ಹೊಸ ನಿರೂಪಕಿಯನ್ನು ಆಯ್ಕೆ ಮಾಡಿಕೊಂಡಿದೆ.
ಆಸ್ಟ್ರೇಲಿಯಾದ ಪ್ರಮುಖ ಕ್ರೀಡಾ ಪತ್ರಕರ್ತೆ ಹಾಗೂ ನಿರೂಪಕಿಯಾಗಿರುವ ನೆರೋಲಿ ಮೆಡೋಸ್ ಅವರು ಸ್ಟಾರ್ ಸ್ಟೋಟ್ರ್ಸ್ ಜೊತೆ ಒಪ್ಪಂದವನ್ನು ಮಾಡಿಕೊಂಡಿದ್ದಾರೆ. ಐಪಿಎಲ್ ಟೂರ್ನಿಗೆ ನಿರೂಪಕಿಯಾಗಿರುವ ಮೆಡೋಸ್ ಅವರು ಈ ಹಿಂದೆ ಆಸ್ಟ್ರೇಲಿಯಾದ ಫಾಕ್ಸ್ ಸ್ಟೋಟ್ರ್ಸ್ ವಾಹಿನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಫಾಕ್ಸ್ ಸ್ಪೋಟ್ರ್ಸ್ ಸಂಸ್ಥೆಗೆ ರಾಜೀನಾಮೆ ನೀಡಿರುವ ಮೆಡೋಸ್ ಅವರು ಯುಎಇ ಐಪಿಎಲ್ ನಲ್ಲಿ ತನ್ನ ಮಾತು ಮತ್ತು ಹಾಟ್ ಲುಕ್ ನಿಂದ ಕ್ರಿಕೆಟ್ ಅಭಿಮಾನಿಗಳನ್ನು ಮೋಡಿ ಮಾಡಲಿದ್ದಾರೆ.
ಎರಡು ತಿಂಗಳು ದೇಶವನ್ನು ಬಿಡಲು ಭಯವಾಗುತ್ತಿದೆ. ಆದ್ರೆ ಮತ್ತೆ ಕೆಲಸಕ್ಕೆ ಸೇರಿಕೊಳ್ಳುತ್ತಿದ್ದೇನೆ ಎಂಬ ಖುಷಿ ಇದೆ. ಮುಖ್ಯವಾಗಿ ಐಪಿಎಲ್ ನಂತಹ ಟೂರ್ನಿಯಲ್ಲಿ ಕಾರ್ಯ ನಿರ್ವಹಿಸುವುದು ಹೆಮ್ಮೆಯ ಸಂಗತಿ. ಈ ಟೂರ್ನಿಯಲ್ಲಿ ಕಾರ್ಯನಿರ್ವಹಿಸುವುದನ್ನು ಎದುರು ನೋಡುತ್ತಿರುವುದಾಗಿ ಮೆಡೋಸ್ ಹೇಳಿಕೊಂಡಿದ್ದಾರೆ.
ಮೆಡೋಸ್ ಅವರು ಈ ಹಿಂದೆ ಅಮೆರಿಕಾದ ಸೂಪರ್ ಬೌಲ್ ನಲ್ಲಿ ನಿರೂಪನೆ ಮಾಡಿದ್ದರು. ಫುಟ್ ಬಾಲ್ ಮತ್ತು ಕ್ರಿಕೆಟ್ ಆಟದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡಿದ್ದಾರೆ.
ಇಂದಿರಾ ಕ್ಯಾಂಟೀನ್ನಲ್ಲಿ 7 ಕೋಟಿ ರೂ. ವಂಚನೆ: ಬಿಬಿಎಂಪಿ ಉಪ ಆರೋಗ್ಯಾಧಿಕಾರಿ ಅಮಾನತು
ಬೆಂಗಳೂರು, ಮೇ 17: ದಕ್ಷಿಣ ವಲಯದ ಇಂದಿರಾ ಕ್ಯಾಂಟೀನ್ನಲ್ಲಿ ಭಾರಿ ಹಣಕಾಸು ಅವ್ಯವಹಾರದ ಆರೋಪದ ಮೇಲೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಉಪ ಆರೋಗ್ಯಾಧಿಕಾರಿ ಡಾ....