‘ಬದಲಾವಣೆ ಮಾಡದೇ ಇರಲು ‘ಕೃಷಿ ಕಾಯ್ದೆ’ಗಳೇನು ಧಾರ್ಮಿಕ ಗ್ರಂಥಗಳಲ್ಲ’ : ಅಬ್ದುಲ್ಲಾ
ನವದೆಹಲಿ : ವಿವಾದಾತ್ಮಕ ಕೃಷಿ ಕಾಯ್ದೆಗಳನ್ನ ರದ್ದುಗೊಳಿಸುವಂತೆ ರಾಷ್ಟ್ರ ರಾಜಧಾನಿಯಲ್ಲಿ ರೈತರು 70 ಕ್ಕೂ ಹೆಚ್ಚು ದಿನಗಳಿಂದಲೂ ಹೋರಾಟ ನಡೆಸುತ್ತಿದ್ದಾರೆ. ಆದ್ರೆ ಕೇಂದ್ರ ಸರ್ಕಾರ ಮಾತ್ರ ಕಾಯ್ದೆಗಳ ರದ್ದುವಿಕೆ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಇದೇ ವಿಚಾರವಾಗಿ ಲೋಕಸಭೆಯಲ್ಲಿ ಮಕಾತನಾಡಿರೋ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರು, ಬದಲಾವಣೆ ಮಾಡಲು ಸಾಧ್ಯವೇ ಇಲ್ಲ ಎನ್ನುವುದಕ್ಕೆ ಇವೇನು ಧಾರ್ಮಿಕ ಗ್ರಂಥಗಳೇನಲ್ಲ ಎಂದಿದ್ದು, ರೈತರೊಂದಿಗೆ ಮಾತುಕತೆ ನಡೆಸಿ, ಸರ್ಕಾರ ಶೀಘ್ರವೇ ಒಂದು ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಪಿ.ಟಿ ಉಷಾ ದಾಖಲೆ ಮುರಿದ ಕೊಡಗಿನ ಕುವರಿ
ಲೋಕಸಭೆಯಲ್ಲಿ ರೈತರ ಪ್ರತಿಭಟನೆ ಕುರಿತು ಪ್ರಸ್ತಾಪ ಮಾಡಿದ ಅವರು, ‘ರೈತರ ಕುರಿತು ನಾನು ಈ ಮನವಿ ಮಾಡುತ್ತಿದ್ದೇನೆ. ನೀವು ಪರಿಚಯಿಸಿರುವ ಈ ಕೃಷಿ ಕಾಯ್ದೆಗಳು ಬದಲಾವಣೆಯನ್ನೇ ಮಾಡಲು ಸಾಧ್ಯವಾಗದ ಧಾರ್ಮಿಕ ಗ್ರಂಥಗಳಲ್ಲ. ಬದಲಾವಣೆ ಮಾಡಬಾರದು ಎಂದೇನೂ ಇಲ್ಲ. ನಾವು ಕಾನೂನನ್ನು ರೂಪಿಸಿದ್ದೇವೆ. ರೈತರಿಗೆ ಅದು ಬೇಡವೆಂದರೆ, ಅವರೊಂದಿಗೆ ಏಕೆ ನೀವು ಸೂಕ್ತ ರೀತಿ ಮಾತನಾಡುತ್ತಿಲ್ಲ. ನಿಮ್ಮ ಮುಂದೆ ಕೈಕಟ್ಟಿ ಕೇಳಿಕೊಳ್ಳುತ್ತೇನೆ. ನಮ್ಮ ಪ್ರತಿಷ್ಠೆ ಮೇಲೆ ನಾವು ನಿಲ್ಲಬಾರದು. ಇದು ನಮ್ಮ ದೇಶ. ಈ ದೇಶಕ್ಕೆ ನಾವೆಲ್ಲರೂ ಸೇರಿದ್ದೇವೆ. ನಾವು ಈ ದೇಶದಲ್ಲಿದ್ದ ಮೇಲೆ ಇಲ್ಲಿರುವ ಎಲ್ಲರನ್ನೂ ಗೌರವಿಸುವುದು ನಮ್ಮ ಕರ್ತವ್ಯ. ಹೀಗಾಗಿ ಒಂದು ಪರಿಹಾರ ಕಂಡುಕೊಳ್ಳಿ’ ಎಂದು ಮನವಿ ಮಾಡಿದ್ದಾರೆ.
ಕೊಡಗು : ಬೈಕ್ ಕಳವು ಸಿಸಿ ಕ್ಯಾಮೆರಾದಲ್ಲಿ ಸೆರೆ
ಭಾರತೀಯರಲ್ಲಿ ಹೆಚ್ಚಿನವರು ಕೋವಿಡ್ -19 ವಿರುದ್ಧದ ಲಸಿಕೆಗಾಗಿ 500 ರೂ. ಪಾವತಿಸಲು ಸಿದ್ಧ
ತುಮಕೂರು | 2ಎ ಮೀಸಲಾತಿ ವಿಚಾರವಾಗಿ ನಿರ್ಣಾಯಕ ಸಭೆ
ಚಾಮರಾಜನಗರ | ಕೆ.ಗುಡಿ ಸಫಾರಿ ರಸ್ತೆಯಲ್ಲಿ ಹುಲಿಗಳ ದರ್ಶನ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel