ಉತ್ತರಪ್ರದೇಶದಲ್ಲಿ ಹೃದಯವಿದ್ರಾವಕ ಘಟನೆ – ಆಕ್ಸಿಜನ್ ಕೊರತೆಯಿಂದ ನವಜಾತ ಶಿಶುಗಳು ಬಲಿ
ದೇಶಾದ್ಯಂತ ಜನ ಕೋವಿಡ್ ಹಾವಳಿಯಿಂದ ಆತಂಕಕ್ಕೆ ಒಳಗಾಗಿದ್ದಾರೆ. ಎಷ್ಟೋ ಕಡೆ ಹಾಸಿಗೆ ಬೆಡ್ ಸಿಗದೇ ಸೋಂಕಿತರು ನರಳಿ ನರಳಿ ಪ್ರಾಣ ಬಿಡ್ತಿದ್ದಾರೆ. ಎಲ್ಲಿ ನೋಡಿದ್ರೂ ಸಾವು ನೋವುಗಳೇ ಸಂಭವಿಸುತ್ತಿವೆ. ಇತ್ತ ಬೆಡ್ ಕೊರತೆ ಆಕ್ಸಿಜನ್ ಕೊರತೆಯಿಂದಾಗಿ ಅನೇಕ ಸೋಂಕಿತರು ಮೃತಪಟ್ಟಿದ್ದಾರೆ.
ಆದ್ರೆ ಉತ್ತರಪ್ರದೇಶದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಆಕ್ಸಿಜನ್ ಕೊರತೆಯಿಂದಾಗಿ ನವಜಾತ ಅವಳಿ ಜವಳಿ ಮಕ್ಕಳು ಅಸುನೀಗಿವೆ. ಆಕ್ಸಿಜನ್ ಕೊರತೆಯಿಂದಾಗಿ ನವಜಾತ ಶಿಶುಗಳು ಮೃತಪಟ್ಟಿರುವ ಘಟನೆ ಉತ್ತರಪ್ರದೇಶದ ಬಾರ್ಬಂಕಿಯಲ್ಲಿನ ಆಸ್ಪತ್ರೆಯೊಂದರಲ್ಲಿ ನಡೆದಿದೆ.ಆಸ್ಪತ್ರೆಗಳಲ್ಲಿ ಆಮ್ಲಜನಕ ಖಾಲಿಯಾಗಿರವ ಬಗ್ಗೆ ಆಸ್ಪತ್ರೆ ಮೊದಲೆ ತಿಳಿಸಿತ್ತು.
ಆದರೆ ಸರ್ಕಾರ ಮಾತ್ರ ಆಕ್ಸಿಜನ್ ಪೂರೈಕೆ ಮಾಡಿರಲಿಲ್ಲ. ಅವಳಿ ಮಕ್ಕಳು ನಿನ್ನೆ ರಾತ್ರಿ ಜನಿಸಿದ್ದವು. ಶಿಶುಗಳಿಗೆ ಆಮ್ಲಜನಕದ ಅವಶ್ಯಕತೆ ಇತ್ತು. ಆದರೆ ಆಮ್ಲಜನಕವನ್ನು ಪೂರೈಕೆ ಮಾಡಲು ಆಗದೆ ಇರುವ ಕಾರಣ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ.
ಕೊರೊನಾ ಹೆಚ್ಚಳ : ಮೇ 3 ರವರೆಗೂ ಮತ್ತೆ ಲಾಕ್ ಡೌನ್
ಸೋಂಕಿತ ತಾಯಿ ಮುಖ ನೋಡಲು ಬಿಟ್ಟಿಲ್ಲ ಎಂದು ಯುವಕ ಆತ್ಮಹತ್ಯೆಗೆ ಯತ್ನ








