IPL 2023 – ಮುಂಬೈ ಮತ್ತು ಪಂಜಾಬ್ ತಂಡಗಳಿಗೆ ಹೊಸ ಕೋಚ್ ನೇಮಕ….
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಮುಖ್ಯ ಕೋಚ್ ಆಗಿ ಟ್ರೆವರ್ ಬೇಲಿಸ್ ಅವರನ್ನ ಪ್ರಾಂಚೈಸಿ ನೇಮಕ ಮಾಡಿದೆ. ಅನಿಲ್ ಕುಂಬ್ಳೆ ಅವರಿಂದ ತೆರವಾದ ಸ್ಥಾನಕ್ಕೆ ಬೇಲಿಸ್ ಆವರನ್ನ ಆಯ್ಕೆ ಮಾಡಲಾಗಿದೆ.
ಭಾರತ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ ನೇತೃತ್ವದಲ್ಲಿ ಪಂಜಾಬ್ ತಂಡ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿತ್ತು. ಹಾಗಾಗಿ ಒಪ್ಪಂದ ಮುಗಿದ ನಂತರ ನವೀಕರಿಸದೇ, ಪಂಜಾಬ್ ಹೊಸ ಕೋಚ್ ಕಡೆ ಮುಖ ಮಾಡಿದೆ.
” ಪಂಜಾಬ್ ಕಿಂಗ್ಸ್‌ನ ಮುಖ್ಯ ಕೋಚ್ ಆಗಿ ನೇಮಕಗೊಂಡಿರುವುದು ನನಗೆ ಗೌರವ ತಂದಿದೆ” ಪಂಜಾಬ್ ಕಿಂಗ್ಸ್ ತಂಡ ಯಶಸ್ಸಿನ ಹಸಿವಿರುವ ಫ್ರಾಂಚೈಸಿಯಾಗಿದ್ದು ಪ್ರತಿಭಾವಂತ ಆಟಗಾರರಿಂದ ತುಂಬಿರುವ ಈ ತಂಡದೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ. ಎಂದು ಬೇಲೀಸ್ ಹೇಳಿದ್ದಾರೆ
ಬೇಲಿಸ್ ಅತ್ಯಂತ ಅನುಭವಿ ತರಬೇತುದಾರರಾಗಿದ್ದು, ಅವರ ನೇತೃತ್ವದಲ್ಲಿಯೇ ಇಂಗ್ಲೆಂಡ್ 2019 ರಲ್ಲಿ ಏಕದಿನ ವಿಶ್ವಕಪ್ ಗೆದ್ದಿತು. ಕೋಲ್ಕತ್ತಾ ನೈಟ್ ರೈಡರ್ಸ್ 2012 ಮತ್ತು 2014 ರಲ್ಲಿ ಬೇಲಿಸ್ ನೇತೃತ್ವದಲ್ಲಿ ಐಪಿಎಲ್ ಟೋಫ್ರಿ ಮುಡಿಗೆರಿಸಿಕೊಂಡಿತ್ತು. ಜೊತೆಗೆ ಸಿಡ್ನಿ ಸಿಕ್ಸರ್ ತಂಡವನ್ನ ಬಿಗ್ ಬ್ಯಾಷ್ ಲೀಗ್ ಪ್ರಶಸ್ತಿಗೆ ಮುನ್ನಡೆಸುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು.
ಮಾರ್ಕ್ ಬೌಚರ್ ಮುಂಬೈನ ಹೆಡ್ ಕೋಚ್
ಇದಕ್ಕೂ ಮೊದಲು, ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ 2023 ರಿಂದ ದಕ್ಷಿಣ ಆಫ್ರಿಕಾದ ಮಾಜಿ ವಿಕೆಟ್ ಕೀಪರ್ ಮಾರ್ಕ್ ಬೌಚರ್ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಿದೆ. ಮುಂಬೈ ನ ಹಾಲಿ ಕೋಚ್ ಆಗಿದ್ದ ಮಹೇಲಾ ಜಯವರ್ಧನೆ ಅವರು ರಿಲಯನ್ಸ್ ನ ಗ್ಲೋಬಲ್ ಆಫ್ ಪರ್ಫಾರ್ಮೆನ್ಸ್ ಮುಖ್ಯಸ್ಥರಾಗಿ ನೇಮಕಗೊಂಡ ಹಿನ್ನಲೆಯಲ್ಲಿ ಅವರ ಸ್ಥಾನವನ್ನ ಬೌಚರ ತುಂಬಲಿದ್ದಾರೆ.
ಮುಂಬೈ ಕೋಚ್ ಆಗಿ ಆಯ್ಕೆ ಆದ ನಂತರ ಮಾತನಾಡಿದ ಮಾರ್ಕ್ ಬೌಚರ್, ‘ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿರುವುದು ಗೌರವ ಮತ್ತು ಸೌಭಾಗ್ಯ. ಮುಂಬೈ ಇಂಡಿಯನ್ಸ್‌ನ ಸಾಧನೆಗಳು ವಿಶ್ವದಾದ್ಯಂತ ಯಶಸ್ವಿ ಕ್ರಿಕೆಟ್ ಫ್ರಾಂಚೈಸಿಯನ್ನಾಗಿ ಮಾಡಿದೆ. ಅಲ್ಲದೇ ಮುಂಬರುವ ಪ್ರತಿಯೊಂದು ಸವಾಲಿಗೂ ನಾನು ಸಿದ್ಧ ಎಂದು ತಿಳಿಸಿದ್ದಾರೆ.