ಕೊರೊನಾದ ಹೊಸ ರೂಪಾಂತರ ತಳಿ ಪತ್ತೆ : ಇದು ಡೆಲ್ಟಾಗಿಂತ ಡೇಂಜರ್ – ಯಾವುದೇ ಲಸಿಕೆಯಿಂದಲೂ ಈ ತಳಿಯಿಂದ ರಕ್ಷಣೆ ಸಾಧ್ಯವಿಲ್ಲ..!
ಇನ್ನೇನು ಕೊರೊನಾ 2ನೇ ಅಲೆ ತಗ್ಗಿತು ಆತಂಕ ಪಡೋ ಅಗತ್ಯ ಏನೂ ಇಲ್ಲ ಅಂತ ಜನರು ನಿಟ್ಟುಸಿರು ಬಿಡುತ್ತಿರುವ ಹೊತ್ತಲ್ಲೇ ಮತ್ತೆ ಕೋವಿಡ್ ಹಾವಳಿ ಹೆಚ್ಚಾಗತೊಡಗಿದೆ.. ಡೆಲ್ಟಾ ರೂಪಾಂತರವೇ ಹೆಚ್ಚು ಶಕ್ತಿಶಾಲಿ ಅನ್ನೋ ಹೊತ್ತಲ್ಲೇ ಅದಕ್ಕಿಂತಲೂ ಹೆಚ್ಚು ಶಕ್ತಿಶಾಲಿ ಅಂದ್ರೆ ಲಸಿಕೆಯ ಪರಿಣಾಮವೂ ಬೀರದ ಹೊಸ ರೂಪಾಂತರ ತಳಿಯು ದಕ್ಷಿಣ ಆಫ್ರಿಕಾ ಸೇರಿದಂತೆ ಕೆಲ ದೇಶಗಳಲ್ಲಿ ಪತ್ತೆಯಾಗಿದೆ. ಈ ತಳಿಯು ಇತರ ತಳಿಗಳಿಗಿಂತ ಹೆಚ್ಚು ವೇಗದಲ್ಲಿ ಹರಡುವ ಸಾಮರ್ಥ್ಯ ಹೊಂದಿದೆ ಎನ್ನಲಾಗ್ತಿದೆ. ಜತೆಗೆ ಈಗ ಇರುವ ಯಾವುದೇ ಲಸಿಕೆಯು ಈ ತಳಿಯ ವಿರುದ್ಧ ರಕ್ಷಣೆ ನೀಡುವುದಿಲ್ಲ ಎಂಬ ಕಳವಳಕಾರಿ ಸಂಗತಿಯನ್ನ ದಕ್ಷಿಣ ಆಫ್ರಿಕಾದ ಅಧ್ಯಯನವೊಂದು ಹೇಳಿದೆ.
ಸಿ.1.2 ಎಂಬ ಹೆಸರಿನ ಈ ತಳಿಯು ಮೇ ತಿಂಗಳಿನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಪತ್ತೆಯಾಗಿದೆ ಎಂದು ಸಾಂಕ್ರಾಮಿಕ ರೋಗಗಳ ರಾಷ್ಟ್ರೀಯ ಸಂಸ್ಥೆ ಮತ್ತು ಕುಝುಲು ನ್ಯಾಟಲ್ ರೀಸರ್ಚ್ ಇನ್ನೊವೇಶನ್ ಅಂಡ್ ಸೀಕ್ವೆನ್ಸ್ ಪ್ಲಾಟ್‌ಫಾರ್ಮ್ ಹೇಳಿದೆ. ಇನ್ನೂ ಕೋವಿಡ್ ತವರು ಚೀನಾ, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೊ, ಮಾರಿಷಸ್, ಇಂಗ್ಲೆಂಡ್, ನ್ಯೂಜಿಲೆಂಡ್, ಪೋರ್ಚುಗಲ್ ಮತ್ತು ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಈ ತಳಿ ಕಂಡುಬಂದಿದೆ ಎಂದು ಅಧ್ಯಯನ ತಿಳಿಸಿದೆ.
ಕೊರೊನಾ ರಿಪೋರ್ಟ್ : ಕಳೆದ 24 ಗಂಟೇಲಿ 30,941 ಕೇಸ್ ಪತ್ತೆ
ಈ ತಳಿಯ ರೂಪಾಂತರದ ವೇಗವೂ ಹೆಚ್ಚಾಗಿದ್ದು, ಒಂದು ವರ್ಷದಲ್ಲಿ 41ಕ್ಕೂ ಹೆಚ್ಚು ಬಾರಿ ರೂಪಾಂತರಗೊಂಡಿದೆ. ಇತರ ತಳಿಗಳ ರೂಪಾಂತರಕ್ಕೆ ಹೋಲಿಸಿದರೆ ಇದು ದುಪ್ಪಟ್ಟು. ವೈರಾಣುವಿನ ಸಂರಚನೆಯಲ್ಲಿ ಆಗುವ ಬದಲಾವಣೆಯಿಂದಾಗಿ ದೇಹದಲ್ಲಿ ರೂಪುಗೊಂಡಿರುವ ಪ್ರತಿಕಾಯಗಳ ರಕ್ಷಣೆಯು ವ್ಯಕ್ತಿಗೆ ದೊರೆಯುವುದಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ.