ದೆಹಲಿ : ಪ್ರತಿಭಟನೆ ವೇಳೆ ಟ್ರ್ಯಾಕ್ಟರ್ ಪಲ್ಟಿ : ಓರ್ವ ಸಾವು
ನವದೆಹಲಿ: ಕೇಂದ್ರದ ಕೃಷಿ ಕಾಯ್ದೆಗಳನ್ನ ವಿರೋಧಿಸಿ ಇಂದು ದೆಹಲಿಯಲ್ಲಿ ರೈತರು ನಡೆಸುತ್ತಿರುವ ಟ್ರ್ಯಾಕ್ಟರ್ ರ್ಯಾಲಿ ಪರಿಣಾಮ ಗಲಭೆ ಸೃಷ್ಟಿಯಾಗಿದೆ. ಪರಿಸ್ಥಿತಿ ಪೊಲೀಸರ ನಿಯಂತ್ರಣ ತಪ್ಪಿದ್ದು, ಉಗ್ರ ಸ್ವರೂಪ ಪಡೆದಿದೆ. ಇದರ ನಡುವೆ ಡಿಡಿಯು ಮಾರ್ಗ್ ಬಳಿ ಟ್ರ್ಯಾಕ್ಟರ್ವೊಂದು ಪಲ್ಟಿಯಾಗಿ ಓರ್ವ ವ್ಯಕ್ತಿ ಸಾವನ್ನಪ್ಪಿರೋದು ತಿಳಿದುಬಂದಿದೆ.
ಅನ್ನದಾತರ ಟ್ರ್ಯಾಕ್ಟರ್ ರ್ಯಾಲಿ ತಡೆಯಲು ನಗರದ ಪ್ರಮುಖ ದಿಕ್ಕುಗಳಲ್ಲಿ ‘ಖಾಕಿ ಚಕ್ರವ್ಯೂಹ’
ಹಿಂಸಾಚಾರದ ಹಿನ್ನೆಲೆ, ಪೂರ್ವ ಮತ್ತು ಈಶಾನ್ಯ ದೆಹಲಿಯಿಂದ ಕೇಂದ್ರ ದೆಹಲಿಗೆ ಹೋಗುವ ಎಲ್ಲಾ ರಸ್ತೆಗಳನ್ನು ಪೊಲೀಸರು ಬಂದ್ ಮಾಡಿದ್ದಾರೆ. ಈ ರಸ್ತೆಯಲ್ಲಿ ಯಾವುದೇ ವಾಹನಗಳು ಹೋಗದಂತೆ ತಡೆದಿದ್ದಾರೆ. ದೆಹಲಿಯ ಬಹುತೇಕ ಮೆಟ್ರೋ ನಿಲ್ದಾಣಗಳ ಗೇಟ್ಗಳನ್ನ ಕ್ಲೋಸ್ ಮಾಡಲಾಗಿದೆ. ಇಂದು ಗಣರಾಜ್ಯೋತ್ಸವದ ಪರೇಡ್ ಮುಗಿದ ಬಳಿಕ 12 ಗಂಟೆಯಿಂದ 5 ಗಂಟೆವರೆಗೆ ಱಲಿ ನಡೆಸಲು ದೆಹಲಿ ಪೊಲೀಸರು ರೈತರಿಗೆ ಷರತ್ತುಬದ್ಧ ಅನುಮತಿ ನೀಡಿದ್ದರು. ಆದ್ರೆ ಕೆಲವು ರೈತರು ನಿಗದಿತ ಸಮಯಕ್ಕೂ ಮುನ್ನವೇ ಱಲಿ ಆರಂಭಿಸಿ, ದೆಹಲಿ ಪ್ರದೇಶಿಸಲು ಪೊಲೀಸರ ಬ್ಯಾರಿಕೇಡ್ಗಳನ್ನ ಉರುಳಿಸಿ ಮುಂದೆ ಸಾಗಿದ್ರು.
ರಣಾಂಗಣವಾಯ್ತು ರಾಷ್ಟ್ರ ರಾಜದಾನಿ : ಕೆಂಪುಕೋಟೆ ಪ್ರವೇಶಿಸಿ ಧ್ವಜ ಹಾರಿಸಿದ ರೈತರು : video
ಅಲ್ಲದೆ ದೆಹಲಿ ಐಟಿಓದಲ್ಲಿ ಬಸ್ವೊಂದನ್ನ ಧ್ವಂಸ ಮಾಡಿದ್ದಾರೆ. ಮೊದಲೇ ನಿಗದಿಯಾಗಿದ್ದ ರೂಟ್ ಮ್ಯಾಪ್ ಉಲ್ಲಂಘಿಸಿದ್ದಾರೆ. ಹೀಗಾಗಿ ಪೊಲೀಸರು ಲಾಠಿ ಚಾರ್ಜ್ ಮತ್ತು ಅಶ್ರುವಾಯು ಪ್ರಯೋಗ ನಡೆಸಿದ್ದಾರೆ. ಘರ್ಷಣೆ ವೇಳೆ ಹಲವಾರು ಪೊಲೀಸರು ಕೂಡ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ರೈತರು ಬ್ಯಾರಿಕೇಡ್ಗಳನ್ನ ತಳ್ಳಿ, ಪೊಲೀಸರೊಂದಿಗೆ ಗಲಾಟೆ ನಡೆಸಿ ಮುಂದೆ ಸಾಗಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತ ಕೆಲವೆಡೆ ರೈತರು ಪೊಲೀಸರನ್ನೇ ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ ನಡೆಸಿದ್ರೆ, ಮತ್ತೊಂದೆಡೆ ಬ್ಯಾರಿಕೇಟ್ ಗಳನ್ನ ಮುರಿದು ಧ್ವಂಸಗೊಳಿಡಿದ್ದಾರೆ. ಬಸ್ ಗಳ ಗಾಜುಗಳನ್ನ ಪುಡಿ ಪುಡಿ ಮಾಡಿಹಾಕಿದ್ದಾರೆ.
ಪೊಲೀಸರನ್ನೇ ಅಟ್ಟಾಡಿಸಿ ಹೊಡೆದ ಪ್ರತಿಭಟನಾಕಾರರು : VIDEO
ನಮ್ಮ ಪ್ರತಿಭಟನೆ ವೇಳೆ ನಡೆದ ಗಲಭೆಗೂ ನಮಗೂ ಸಂಬಂಧವಿಲ್ಲ: ಭಾರತೀಯ ಕಿಸಾನ್ ಸಂಘ..!
ದಿಲ್ಲಿ ಟ್ರ್ಯಾಕ್ಟರ್ ದಂಗೆ : ಭುಗಿಲೆದ್ದ ರೈತರು, ರಣರಂಗವಾದ ರಾಜಧಾನಿ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








