ಅಕ್ಟೋಬರ್ 25ಕ್ಕೆ ಹೊಸ ಐಪಿಎಲ್ ತಂಡಗಳ ಹೆಸರು ಬಹಿರಂಗ.!
ಐಪಿಎಲ್ 15ನೇ ಆವೃತ್ತಿಯಲ್ಲಿ 8 ತಂಡಗಳ ಬದಲು 10 ತಂಡಗಳು ಪಾಲ್ಗೊಳ್ಳುವುದು ಖಚಿತವಾಗುತ್ತಿದ್ದಂತೆ ಹೊಸ ಚರ್ಚೆಗಳು ಆರಂಭವಾಗಿದೆ.
ಯಾವ ನಗರಕ್ಕೆ ಫ್ರಾಂಚೈಸಿ ಸಿಗಲಿದೆ ಅನ್ನುವ ಕುತೂಹಲ ಹೆಚ್ಚಿದೆ. ಈ ಮಧ್ಯೆ ಬಿಸಿಸಿಐ ಅಕ್ಟೋಬರ್ 25ರಂದು ಹೊಸ ಫ್ರಾಂಚೈಸಿಗಳ ಹೆಸರನ್ನು ಬಹಿರಂಗ ಪಡಿಸಲಿದೆ. ಅಕ್ಟೋಬರ್ನಲ್ಲಿ ಆರಂಭವಾಗುವ ಬಿಡ್ನಲ್ಲಿ ಫ್ರಾಂಚೈಸಿಗಳು ತಮ್ಮ ಬಿಡ್ ಮೊತ್ತವನ್ನು ಸಲ್ಲಿಸಲು ಅವಕಾಶವಿದೆ.
ಇದೆಲ್ಲದರ ನಡುವೆ ಈಗ ನಡೆಯುತ್ತಿರುವ ಐಪಿಎಲ್-2021 ಲೀಗ್ ನ ಕೊನೆಯ ಎರಡು ಪಂದ್ಯಗಳು ಏಕಕಾಲದಲ್ಲಿ ನಡೆಯಲಿವೆ ಎಂದು ಬಿಸಿಸಿಐ ಘೋಷಿಸಿದೆ.
ಐಪಿಎಲ್ ನ ಗ್ರೂಪ್ ಫೇಸ್ ನಲ್ಲಿ ಇದೇ ಮೊದಲ ಬಾರಿಗೆ ಏಕಕಾಲದಲ್ಲಿ 2 ಪಂದ್ಯಗಳು ನಡೆಯುತ್ತಿವೆ ಎಂದು ಬಿಸಿಸಿಐ ತಿಳಿಸಿದೆ.
ಈ ಹಿಂದೆ ನಿಗದಿಯಾಗಿದ್ದರ ಪ್ರಕಾರ ಹೈದರಾಬಾದ್ ಸನ್ ರೈಸರ್ಸ್-ಮುಂಬೈ ಇಂಡಿಯನ್ಸ್ ಪಂದ್ಯ ಮಧ್ಯಾಹ್ನ 3:30 ಕ್ಕೆ ನಡೆಯಬೇಕಿತ್ತು.
ಅದೇ ದಿನದಂದು ಆರ್ ಸಿಬಿ-ದೆಹಲಿ ಕ್ಯಾಪಿಟಲ್ ಗಳ ನಡುವಿನ ಪಂದ್ಯ ಸಂಜೆ 7:30 ಕ್ಕೆ ನಡೆಯಬೇಕಿತ್ತು. ಈಗ ಬದಲಾದ ವೇಳಾಪಟ್ಟಿಯಲ್ಲಿ ಎರಡೂ ಪಂದ್ಯಗಳುಪ್ ಸಂಜೆ 7:30 ಕ್ಕೆ ನಡೆಯಲಿದೆ ಎಂದು ಬಿಸಿಸಿಐ ಹೇಳಿದೆ.
ಈ ವರೆಗೂ ಯಾವುದೇ ತಂಡ ಪ್ಲೇ-ಆಫ್ಸ್ ನಲ್ಲಿ ಸ್ಥಾನವನ್ನು ಭದ್ರಪಡಿಸಿಕೊಳ್ಳದ ಕಾರಣ ಈ ಟೂರ್ನಮೆಂಟ್ ನಿರ್ಣಾಯಕ ಹಂತದಲ್ಲಿರಲಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಪ್ಲೇ ಆಫ್ಸ್ ಪ್ರವೇಶಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆ ಪಡೆಯುವ ಅವಕಾಶವಿತ್ತಾದರೂ ಕೋಲ್ಕತ್ತ ವಿರುದ್ಧದ ಸೋಲಿನಿಂದ ಅದು ಸಾಧ್ಯವಾಗಲಿಲ್ಲ.
ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುಂದಿನ ಪಂದ್ಯದಲ್ಲಿ ಗೆದ್ದರೆ ಪ್ಲೇ-ಆಫ್ ಗೆ ಆಯ್ಕೆಯಾಗಲಿದೆ. ಆದರೆ ಕೊನೆಯ ಪಂದ್ಯದ ವೇಳೆ ರನ್ ರೇಟ್ ಹಾಗೂ ಪ್ಲೇ-ಆಫ್ಗೆ ಪ್ರವೇಶಿಸುವ ತಂಡಗಳ ಲೆಕ್ಕಾಚಾರ ನಡೆಯುವುದರಿಂದ ಕೊನೆಯ ದಿನ ಪಂದ್ಯಗಳನ್ನು ಒಟ್ಟಿಗೆ ನಡೆಸಲು ಬಿಸಿಸಿಐ ತೀರ್ಮಾನಿಸಿದೆ.









