ಉತ್ತರ ಕೊರಿಯಾದಲ್ಲಿ ಹೊಸ ಕಾನೂನು – ಮಕ್ಕಳನ್ನು ಸರಿಯಾಗಿ ಬೆಳೆಸಲು ವಿಫಲರಾದ ಪೋಷಕರಿಗೆ ದಂಡ !
ಉತ್ತರ ಕೊರಿಯಾದಲ್ಲಿ ದಕ್ಷಿಣ ಕೊರಿಯಾದ ಉತ್ಪನ್ನಗಳು, ಚಲನಚಿತ್ರಗಳು ಮತ್ತು ಮಾಹಿತಿಗಳಿಗೆ ನಿರ್ಬಂಧಗಳನ್ನು ಹೇರಿ ಮರೆಮಾಡಲಾಗಿದೆ. ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜೊಂಗ್ ಉನ್ ಈಗ ಅಂತಹ ಮಾಹಿತಿಯನ್ನು ತಡೆಯುುವ ಪ್ರಯತ್ನಗಳನ್ನು ಇನ್ನಷ್ಟು ಚುರುಕುಗೊಳಿಸಿದ್ದಾರೆ.
ಕಳೆದ ವರ್ಷದ ಕೊನೆಯಲ್ಲಿ, ಉತ್ತರ ಕೊರಿಯಾ ಸಹ ಪ್ರತಿಗಾಮಿ ಸಿದ್ಧಾಂತವನ್ನು ನಿಗ್ರಹಿಸಲು ಕಾನೂನನ್ನು ಜಾರಿಗೆ ತಂದಿತು. ದಕ್ಷಿಣ ಕೊರಿಯಾದ ಉಚ್ಚಾರಣೆಯಲ್ಲಿ ಮಾತನಾಡಲು ಪ್ರಯತ್ನಿಸಿದರೆ ಎರಡು ವರ್ಷಗಳು, ಪ್ರತಿಸ್ಪರ್ಧಿ ದಕ್ಷಿಣ ಕೊರಿಯಾದ ಪುಸ್ತಕವನ್ನು ಓದಲು ಮತ್ತು ಚಲನಚಿತ್ರವನ್ನು ವೀಕ್ಷಿಸಿದರೆ 15 ವರ್ಷಗಳ ಕಠಿಣ ಶಿಕ್ಷೆಯನ್ನು ಅದು ಒದಗಿಸುತ್ತದೆ.
ಎಲ್ಲಾ ಉದ್ಯೋಗಿಗಳಿಗೆ ವಾರಕ್ಕೆ ನಾಲ್ಕು ದಿನಗಳ ಕೆಲಸ ಮತ್ತು ಮೂರು ದಿನಗಳ ವೇತನ ಸಹಿತ ರಜೆ ?
ಇಷ್ಟು ಮಾತ್ರವಲ್ಲ, ತಮ್ಮ ಮಕ್ಕಳನ್ನು ಸರಿಯಾಗಿ ಬೆಳೆಸುವಲ್ಲಿ ವಿಫಲರಾದ ಪೋಷಕರಿಗೆ 111 ರಿಂದ 222 ಡಾಲರ್ ದಂಡ ವಿಧಿಸಲಾಗುತ್ತದೆ. ವಿದೇಶಿ ವಸ್ತುಗಳನ್ನು ವಿತರಿಸುವ ಅಥವಾ ಮಾರಾಟ ಮಾಡುವವರಿಗೆ ಮರಣದಂಡನೆಯನ್ನು ವಿಧಿಸುವ ಹೊಸ ಕಾನೂನು ಸಹ ಅಲ್ಲಿ ಜಾರಿಯಲ್ಲಿದೆ.
ಉತ್ತರ ಕೊರಿಯಾದ ಕಾಳಜಿಗೆ ಭಯವೂ ಒಂದು ಕಾರಣ. 2019 ರಲ್ಲಿ 200 ಮಂದಿ ಪರಾರಿಯಾದವರ ತನಿಖೆಯು ಅವರಲ್ಲಿ 90 ಪ್ರತಿಶತದಷ್ಟು ಜನರು ವಿದೇಶಿ ಅಥವಾ ದಕ್ಷಿಣ ಕೊರಿಯಾದ ಚಾನೆಲ್‌ಗಳನ್ನು ವೀಕ್ಷಿಸಿದ್ದಾರೆ ಎಂದು ತೋರಿಸಿದೆ. ವಿಶೇಷವೆಂದರೆ, ದಕ್ಷಿಣ ಕೊರಿಯಾದ ನಾಟಕ ‘ಕ್ರಾಶ್ ಲ್ಯಾಂಡಿಂಗ್ ಆನ್ ಯು’ ಉತ್ತರ ಕೊರಿಯನ್ನರಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ಇದು ಉತ್ತರ ಕೊರಿಯಾದ ಜೀವನದ ನೇರ ಚಿತ್ರಣವನ್ನು ಹೊಂದಿದೆ. ಉತ್ತರ ಕೊರಿಯಾದ ಅಧಿಕಾರಿಗಳು ಇದು ಕಿಮ್‌ನ ಚಿತ್ರಣಕ್ಕೆ ಕಳಂಕವಾಗುತ್ತಿದೆ ಎಂದು ಭಾವಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಅಣಬೆ ( ಮಶ್ರೂಮ್)ಯ ಆರೋಗ್ಯ ಮತ್ತು ಸೌಂದರ್ಯ ಪ್ರಯೋಜನಗಳು https://t.co/n3OfpyYFxv
— Saaksha TV (@SaakshaTv) February 3, 2021
ಬದುಕುವ ಭರವಸೆ ಕಳೆದುಕೊಂಡಿದ್ದೆವು. ಅಷ್ಟರಲ್ಲಿ ಫೋನ್ ನೆಟ್ವರ್ಕ್ ಭರವಸೆ ಮೂಡಿಸಿತು – ಹಿಮನದಿ ಸ್ಫೋಟದಲ್ಲಿ ಬದುಕುಳಿದವರ ಮಾತುಗಳು https://t.co/nl9jZLsZ9A
— Saaksha TV (@SaakshaTv) February 9, 2021