ಅವಮಾನಿಸಿದ್ದ ರೈತನ ಮನೆಗೆ ಹೊಸ ಮಹೀಂದ್ರಾ ಜೀಪ್ ಕಳುಹಿಸಿದ ಕಂಪನಿ Saaksha Tv
ತಮಕೂರು: ಕೆಲ ದಿನಗಳ ಹಿಂದೆ ಮಹೀಂದ್ರಾ ವಾಹನ ಖರಿದಿಸಲು ಬಂದು ಅವಮಾನಕ್ಕೊಳಗಾದ ರೈತನ ಮನೆಗೆ ಇದೀಗ ಮಹೀಂದ್ರ ಗೂಡ್ಸ್ ವಾಹನ ಬಂದಿದೆ.
ಜನವರಿ 21 ರಂದು ರೈತ ಕೆಂಪೆಗೌಡ ಮಹೀಂದ್ರಾ ಗೂಡ್ಸ್ ವಾಹನ ಖರಿದಿಸಲು ತಮ್ಮ ಸ್ನೇಹಿತರೊಂದಿಗೆ ಶೋ ರೂಂಗೆ ಹೋಗಿದ್ದರು. ಈ ಸಮಯದಲ್ಲಿ ಶೋ ರೂಂ ಸಿಬ್ಬಂದಿ ಅವಮಾನ ಮಾಡಿದ್ದರು. ಅವಮಾನ ಮಾಡಿದ ಸಿಬ್ಬಂದಿ ಪೊಲೀಸರ ಮಧ್ಯೆ ಪ್ರವೇಶದಿಂದ ಕ್ಷಮೆ ಕೇಳಿ ವಾಹನವನ್ನು ಡೆಲೆವರಿ ಕೊಡುತ್ತೇನೆ ಎಂದು ಹೇಳಿದ್ದರು.
ಈಗ ರೈತ ಕೆಂಪೇಗೌಡಗೆ ಕಂಪನಿ ವಾಹನ ಡೆಲಿವರಿ ಮಾಡಿದೆ. ಈ ಕುರಿತು ಸ್ವತಃ ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ. ರೈತ ಕೆಂಪೇಗೌಡರು ಮಹಿಂದ್ರಾ ಗೂಡ್ಸ್ ವಾಹನ ಖರೀದಿ ಮಾಡಿದ್ದಾರೆ. ಇಂದು ಮಹೀಂದ್ರಾ ಆಟೋಮೋಟಿವ್, ಕೆಂಪೇಗೌಡರಿಗೆ ವಾಹನ ಡೆಲಿವರಿ ನೀಡಿದೆ ಎಂದು ಟ್ವೀಟ್ ಮಾಡಿದ್ದಾರೆ.
ಜನವರಿ 21ರಂದು ನಮ್ಮ ಡೀಲರ್ ಬಳಿ ಕೆಂಪೇಗೌಡ ಮತ್ತು ಆತನ ಸ್ನೇಹಿತರು ಬಂದಾಗ ನಡೆದ ಘಟನೆಗೆ ನಾವು ವಿಷಾದ ವ್ಯಕ್ತಪಡಿಸುತ್ತೇವೆ. ನಾವು ಭರವಸೆ ನೀಡಿದಂತೆ ಘಟನೆ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ. ಮಹೀಂದ್ರಾ ಆಯ್ಕೆ ಮಾಡಿದ್ದಕ್ಕಾಗಿ ನಾವು ಕೆಂಪೇಗೌಡರಿಗೆ ಧನ್ಯವಾದ ಅರ್ಪಿಸುತ್ತೇವೆ. ನಾವು ಅವರನ್ನು ಮಹೀಂದ್ರಾ ಕುಟುಂಬಕ್ಕೆ ಸ್ವಾಗತಿಸುತ್ತೇವೆ ಎಂದು ಮಹಿಂದ್ರಾ ಕಂಪನಿ ಟ್ವೀಟ್ ಮಾಡಿದೆ.