ಅಂಬಾನಿ ಮನೆಯ ಅಡ್ರಸ್ ಕೇಳಿದ ಮೂವರು ಅರೆಸ್ಟ್..!!
ನವದೆಹಲಿ : ಪ್ರಮುಖ ಕೈಗಾರಿಕೋದ್ಯಮಿ ಮತ್ತು ರಿಲಯನ್ಸ್ ಗ್ರೂಪ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ನಿವಾಸ ಆಂಟಿಲಿಯಾ ವಿಳಾಸ ಕೇಳಿದ ಮೂವರು ಅನುಮಾನಿತರನ್ನು ನ್ಯೂ ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಟ್ಯಾಕ್ಸಿ ಚಾಲಕ ನೀಡಿದ ಸಾಕ್ಷ್ಯದ ಪ್ರಕಾರ, ಸ್ಥಳೀಯ ಆಜಾದ್ ಮೈದಾನ ಪೆÇಲೀಸರು ತಕ್ಷಣ ಎಚ್ಚೆತ್ತುಕೊಂಡು, ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ, ನ್ಯೂ ಮುಂಬೈನಲ್ಲಿ ಆ ಮೂವರನ್ನು ವಶಕ್ಕೆ ಪಡೆಯಲಾಗಿದೆ.
ಸೋಮವಾರ, ಅಂಬಾನಿ ವಾಸವಾಗಿರುವ ಆಂಟಿಲಿಯಾ ಭವನ ಎಲ್ಲಿದೆ ಎಂದು ಖಿಲ್ಲಾ ಕೋರ್ಟ್ ಬಳಿ ನೀಲಿ ಕಾರಲ್ಲಿ ಬಂದ ಇಬ್ಬರು ತಮ್ಮನ್ನು ಕೇಳಿದ್ದಾರೆ ಎಂದು ಟ್ಯಾಕ್ಸಿ ಚಾಲಕರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಟ್ಯಾಕ್ಸಿ ಡ್ರೈವರ್ ನೀಡಿದ ಮಾಹಿತಿ ಮೇರೆಗೆ ಪೊಲೀಸರು ಅವರನ್ನು ಹೊಸ ಮುಂಬೈನಲ್ಲಿ ಬಂಧಿಸಿದ್ದಾರೆ. ಆದರೆ, ಆ ಮೂವರು ಗುಜರಾತ್ಗೆ ಸೇರಿದವರು ಎಂದು ಗುರುತಿಸಲಾಗಿದೆ. ಇವರು ಮುಂಬೈ ಪ್ರವಾಸಕ್ಕೆ ಬಂದಿರುವುದಾಗಿ ತಿಳಿಸಿದು ಬಂದಿದೆ. ಗೂಗಲ್ ಮ್ಯಾಪ್ ಕೆಲಸ ಮಾಡದ ಕಾರಣ ಅಂಟಿಲಿಯಾ ವಿಳಾಸ ಕೇಳಿರುವುದಾಗಿ ಪಪೊಲೀಸ್ ವಿಚಾರಣೆಯಲ್ಲಿ ತಿಳಿದುಬಂದಿದೆ. ಇದರ ಹಿಂದೆ ಯಾವುದೇ ವಿಧ್ವಂಸಕ ಉದ್ದೇಶ ಇರಲಿಲ್ಲ ಎಂದು ಪೆÇಲೀಸರು ತಿಳಿಸಿದ್ದಾರೆ.