ಐಪಿಎಲ್ ಮೆಗಾ ಆಕ್ಷನ್ ಗೆ ಹೊಸ ರೂಲ್ಸ್

1 min read
IPL

IPL ಮೆಗಾ ಆಕ್ಷನ್ಗೆ ಮುಂಚೆ ರೂಲ್ ಫಿಕ್ಸ್, ಫ್ರಾಂಚೈಸಿಗಳಿಗೆ 90 ಕೋಟಿ ಬಜೆಟ್

IPL ಮೆಗಾ ಆಕ್ಷನ್ಗೆ ಫ್ರಾಂಚೈಸಿಗಳಿ ಸಜ್ಜಾಗುತ್ತಿದೆ. ಅಹಮದಾಬಾದ್ ಮತ್ತು ಲಖ್ನೋ ಫ್ರಾಂಚೈಸಿಗಳು ಹೊಸದಾಗಿ ಸೇರ್ಪಡೆಗೊಂಡ ಬಳಿಕ ಆಟಗಾರರ ಮೆಗಾ ಹರಾಜು ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿದೆ. ಈಗಿರುವ 8 ಫ್ರಾಂಚೈಸಿಗಳಿಗೆ ಅನ್ವಯವಾಗುವ ಆಟಗಾರರ ರಿಟೈನ್ ನಿಯಮ, ಒಟ್ಟು ಪರ್ಸ್ ಮೊತ್ತ ಹಾಗೂ ಹರಾಜು ನೀತಿಯನ್ನು ರೂಪಿಸಿದೆ. ಆಟಗಾರರ ಮೆಗಾ ಹರಾಜಿಗೂ ಮುನ್ನ ಹಳೆಯ 8 ಫ್ರಾಂಚೈಸಿಗಳು 4 ಆಟಗಾರರನ್ನು ಉಳಿಸಿಕೊಳ್ಳಬಹುದು. ಹೊಸ 2 ಫ್ರಾಂಚೈಸಿಗೆ 3 ಆಟಗಾರರನ್ನು ಆಯ್ಕೆ ಮಾಡುವ ಅವಕಾಶ ನೀಡಲಾಗುತ್ತದೆ. ಆದರೆ ಫ್ರಾಂಚೈಸಿಗಳು ಕೈ ಬಿಟ್ಟ ಮತ್ತು ಪೂಲ್ನಲ್ಲಿರುವ ಆಟಗಾರರನ್ನು ಹೊಸ ಫ್ರಾಂಚೈಸಿಗಳು ಖರೀದಿ ಮಾಡಬೇಕಿದೆ.

ಮೆಗಾ ಹರಾಜಿನಲ್ಲಿ ಫ್ರಾಂಚೈಸಿಗಳು ಒಟ್ಟಾರೆ 90 ಕೋಟಿ ರೂಪಾಯಿ ಖರ್ಚು ಮಾಡಬಹುದು. ಆದರೆ ಫ್ರಾಂಚೈಸಿಗಳು ಆಟಗಾರರನ್ನು ಉಳಿಸಿಕೊಂಡರೆ ಈ ಪರ್ಸ್ ಕಡಿಮೆ ಆಗಲಿದೆ. ಹಳೆಯ ಫ್ರಾಂಚೈಸಿಗಳು ನವೆಂಬರ್ 1 ರಿಂದ 30ರ ಒಳಗೆ ಆಟಗಾರರ ರಿಟೈನ್ ಪಟ್ಟಿಯನ್ನು ಸಲ್ಲಿಸಬೇಕಿದೆ.

ಹಳೆಯ 8 ಫ್ರಾಂಚೈಸಿಗಳು ಗರಿಷ್ಠ 4 ಆಟಗಾರರನ್ನು ಉಳಸಿಕೊಳ್ಳಬಹುದು. ಮೂವರು ಭಾರತೀಯ ಆಟಗಾರರು + ಒಬ್ಬ ವಿದೇಶಿ ಆಟಗಾರ ಅಥವಾ ಇಬ್ಬರು ಭಾರತೀಯ ಆಟಗಾರರು + ಇಬ್ಬರು ವಿದೇಶಿ ಆಟಗಾರರನ್ನು ಉಳಿಸಿಕೊಳ್ಳುವ ಆಯ್ಕೆ ಇರಲಿದೆ. ಇನ್ನು ಹೊಸ ಫ್ರಾಂಚೈಸಿಗಳಿಗೆ ಇಬ್ಬರು ಭಾರತೀಯ ಆಟಗಾರರು+ ಒಬ್ಬ ವಿದೇಶಿ ಆಟಗಾರನನ್ನು ನೇರವಾಗಿ ಆಯ್ಕೆ ಮಾಡುವ ಅವಕಾಶ ಇರಲಿದೆ.

IPL saaksha tv

ಆಟಗಾರರನ್ನು ಉಳಿಸಿಕೊಳ್ಳಲು ಕೂಡ ಮೊತ್ತ ನಿಗದಿ ಮಾಡಿದೆ. ಅದರಂತೆ ಒಟ್ಟು 90 ಕೋಟಿ ಮೊತ್ತದಿಂದ ಆಟಗಾರರ ರಿಟೈನ್ಗಾಗಿ 42 ಕೋಟಿ ನೀಡಲಾಗುತ್ತದೆ. ಇಲ್ಲಿ ಒಂದು ತಂಡವು ನಾಲ್ವರನ್ನು ಉಳಿಸಿಕೊಳ್ಳಲು ಬಯಸಿದರೆ 42 ಕೋಟಿ ರೂ. ವ್ಯಯಿಸಬೇಕಾಗುತ್ತದೆ. ಒಂದು ವೇಳೆ ಮೂವರನ್ನು ಮಾತ್ರ ಉಳಿಸುವುದಾದರೆ 33 ಕೋಟಿ ರೂ. ನೀಡಬೇಕಾಗುತ್ತದೆ. ಇನ್ನು ಇಬ್ಬರು ಆಟಗಾರರನ್ನು ಉಳಿಸಿಕೊಂಡರೆ 24 ಕೋಟಿ. ರೂ ನೀಡಬೇಕು. ಒಂದು ವೇಳೆ ಒಬ್ಬ ಆಟಗಾರನನ್ನು ಮಾತ್ರ ಉಳಿಸಿಕೊಂಡರೆ 14 ಕೋಟಿ. ರೂ ನೀಡಬೇಕಾಗುತ್ತದೆ. ಇದಾಗ್ಯೂ ರಾಷ್ಟ್ರೀಯ ತಂಡದಲ್ಲಿ ಆಡದ ಆಟಗಾರನನ್ನು ಉಳಿಸಿಕೊಂಡರೆ 4 ಕೋಟಿ ರೂ. ನೀಡಬೇಕು ಎಂದು ಷರತ್ತು ವಿಧಿಸಲಾಗಿದೆ. ಅದರಂತೆ ಆಟಗಾರರ ರಿಟೈನ್ ವೇತನ ಮೊತ್ತ ಹೀಗಿದೆ.

4 ಆಟಗಾರರನ್ನು ಉಳಿಸಿಕೊಂಡರೆ…
ಮೊದಲ ಆಟಗಾರನಿಗೆ 16 ಕೋಟಿ ರೂ.
2ನೇ ಆಟಗಾರನಿಗೆ 12 ಕೋಟಿ ರೂ.
3ನೇ ಆಟಗಾರನಿಗೆ 8 ಕೋಟಿ ರೂ.
4ನೇ ಆಟಗಾರನಿಗೆ 6 ಕೋಟಿ ರೂ. ನೀಡಬೇಕು. ಅದರಂತೆ ಒಟ್ಟು ಮೊತ್ತ 42 ಕೋಟಿ ವ್ಯಯಿಸಬೇಕಾಗುತ್ತದೆ.

3 ಆಟಗಾರರನ್ನು ಉಳಿಸಿಕೊಂಡರೆ…
ಮೊದಲ ಆಟಗಾರನಿಗೆ 15 ಕೋಟಿ ರೂ.
2ನೇ ಆಟಗಾರನಿಗೆ 11 ಕೋಟಿ ರೂ.
3ನೇ ಆಟಗಾರನಿಗೆ 7 ಕೋಟಿ ರೂ. ನೀಡಬೇಕು. ಅದರಂತೆ ಒಟ್ಟು ಮೊತ್ತ 33 ಕೋಟಿ ರೂ. ವ್ಯಯಿಸಬೇಕು.

2 ಆಟಗಾರರನ್ನು ಉಳಿಸಿಕೊಂಡರೆ …
ಮೊದಲ ಆಟಗಾರನಿಗೆ 14 ಕೋಟಿ ರೂ.
2ನೇ ಆಟಗಾರನಿಗೆ 10 ಕೋಟಿ ರೂ. ನೀಡಬೇಕು. ಅದರಂತೆ ಒಟ್ಟು ಮೊತ್ತ 24 ಕೋಟಿ ರೂ. ನೀಡಬೇಕಾಗುತ್ತದೆ.
ಇನ್ನು ಒಬ್ಬ ಆಟಗಾರನನ್ನು ಮಾತ್ರ ಉಳಿಸಿಕೊಂಡರೆ 14 ಕೋಟಿ ರೂ. ನೀಡಬೇಕಾಗುತ್ತದೆ. ಒಟ್ಟನಲ್ಲಿ ಐಪಿಎಲ್ ಹರಾಜಿನ ಲೆಕ್ಕ ಆಟಕ್ಕೂ ಮುನ್ನ ಕುತೂಹಲ ಕೆರಳಿಸಿರುವುದು ನಿಜ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd