ಸಂತೋಷ ತುಂಬಿದ ಹೊಸತನ್ನು 2021ರ ಹೊಸವರ್ಷ ಹೊತ್ತು ತರಲಿ.. New year 2021
ಮಂಗಳೂರು, ಜನವರಿ01: ಕಾಲಚಕ್ರದಲ್ಲಿ ಉರುಳುವ ಪ್ರತಿವರ್ಷದತ್ತ ಒಮ್ಮೆ ಕಣ್ಣು ಹೊರಳಿಸಿ ನೋಡಿದಾಗ, ಆದ ಸಂಕಟಗಳ ಬಗ್ಗೆ ಎದೆಯ ಮೂಲೆಯಲ್ಲಿ ವೇದನೆ, ಆಗಿರುವ ಒಳಿತುಗಳ ಬಗ್ಗೆ ಎದೆಯ ತುಂಬಾ ಸಂತೋಷದ ಭಾವನೆ… New year 2021
2020ನೇ ಇಸ್ವಿ ಈಗಾಗಲೇ ಕಾಲಗರ್ಭ ಸೇರಿದೆ. ಅದು ಮತ್ತೆಂದೂ ನಮಗೆ ಸಿಗಲಾರದು.
ಆದರೆ ಇತಿಹಾಸ ಪುಟ ಸೇರಿರುವ 2020 ಎಂಬ ವರ್ಷ ನಮ್ಮ ಮನಸ್ಸಿನಿಂದ ಅಷ್ಟು ಸುಲಭಕ್ಕೆ ಮರೆಯಾಗಲು ಸಾಧ್ಯವಿಲ್ಲ. ಏಕೆಂದರೆ ಇದು ಸಂಕಷ್ಟ, ಸವಾಲುಗಳನ್ನು ಎದುರಿಸಿದ ವರ್ಷ. ಕೊರೋನಾ ವೈರಸ್ ಎಂಬ ಸೋಂಕಿನಿಂದ ನಮ್ಮ ಬದುಕು ಬದಲಾವಣೆಗೆ ಒಗ್ಗಿಕೊಂಡ ವರ್ಷ.. 2020 ಜನವರಿಯಿಂದ ಏನೆಲ್ಲಾ ನಡೆದಿದೆ ಎಂದು ಕಣ್ಣು ಹಾಯಿಸಿದರೆ ಅಲ್ಲಿ ಬರೀ ಕಹಿ ಘಟನೆಗಳೇ , ಕಲಿತ ಪಾಠಗಳೇ ಕಾಣಿಸುತ್ತದೆ.

ಕೊರೋನಾ ವೈರಸ್ ಎಂಬ ವೈರಸ್ ತನ್ನ ರುದ್ರನರ್ತನದಿಂದ ಇಡೀ ಜಗತ್ತನ್ನೇ ಸ್ತಬ್ಧಗೊಳಿಸಿ, ಜನ ಸಮೂಹ ತಮ್ಮ ಹೆಚ್ಚಿನ ದಿನಗಳನ್ನು ಮನೆಯಲ್ಲೇ ಕಳೆಯುವಂತೆ ಮಾಡಿ ಸಹಜ ಜೀವನಕ್ಕೆ ಪರಿತಪಿಸುವಂತೆ ಮಾಡಿತು.
ಆಧುನಿಕ ಮಾನವನಿಗೆ ತಾನು ಸಾಗುತ್ತಿದ್ದ ವೇಗದ ಬದುಕಿಗೆ ಕಡಿವಾಣ ಹಾಕಿ ಕನಿಷ್ಠ ಅವಶ್ಯಕತೆಗಳನ್ನು ಪೂರೈಸಿಕೊಂಡು ಪ್ರಕೃತಿಯೊಂದಿಗೆ ಹೊಂದಿಕೊಂಡು ಬದುಕುವುದನ್ನು ಕಲಿ ಎಂಬ ಪಾಠವನ್ನು ಕಲಿಸಿತು. ನಾನು, ನನ್ನದು ಎನ್ನುವವರಿಗೆ ಜೀವನ ಇಷ್ಟೇ ಎಂಬ ಸತ್ಯವನ್ನು ಅರ್ಥ ಮಾಡಿಸಿತು.
ಈಗ ನಾವು ಹೊಸ ವರ್ಷದ ಸಂಭ್ರಮದಲ್ಲಿ ನಾವಿದ್ದೇವೆ. ಹೊಸ ವರ್ಷ ಬಂದಾಗ ಹೊಸ ನಿರೀಕ್ಷೆಗಳಿರುತ್ತದೆ. ಆದರೆ ಈ ಬಾರಿ ಪ್ರತಿ ಮನಸ್ಸು ಕೊರೋನಾ ಸಂಕಷ್ಟದಿಂದ ಹೊರಬಂದು ಸಹಜ ಸ್ಥಿತಿಗೆ ಜೀವನ ಮರಳಬಹುದು ಎಂಬ ನಿರೀಕ್ಷೆಯ ಆಶಾಕಿರಣವನ್ನು ಹೊತ್ತಿದೆ.
ಅದೃಷ್ಟ ಡ್ರಾದಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಆಯ್ಕೆ ಮಾಡಲಾಗಿದೆ ಎಂಬ ಕರೆ ಬಂದಿದೆಯೇ?
2021 ರಲ್ಲಿ ಬದುಕನ್ನು ಸರಳವಾಗಿ ಮುನ್ನಡೆಸಲು ಸಂಕಲ್ಪ ನಮ್ಮದಾಗಬೇಕಾಗಿದೆ. ಇದು ನಮಗೆ ಕೊರೋನಾ ವೈರಸ್ ಕಲಿಸಿದ ಪಾಠ. ಬದುಕಿನ ನಶ್ವರತೆಯ ಅರಿವನ್ನು ನಮಗೆ ಈ ವೈರಸ್ ಮೂಡಿಸಿದೆ. ಹಾಗಾಗಿ ಅತಿಯಾದ ನಿರೀಕ್ಷೆಗಳ ಬೆನ್ನು ಹತ್ತದೆ, ವಾಸ್ತವತೆಯನ್ನು ಅರಿತುಕೊಂಡು ಬದುಕನ್ನು ಸವಾಲಾಗಿ ಎದುರಿಸುವ ಮನೋಭಾವವನ್ನು ನಾವು ಬೆಳೆಸಿಕೊಳ್ಳಬೇಕಾಗಿದೆ.
ಹಾಗೆಯೇ ಹಸಿರೇ ಉಸಿರು..ಪ್ರಕೃತಿ ಇದ್ದರೆ ನಾವೆಲ್ಲಾ.. ಪ್ರಕೃತಿ ಮಾತೆ ಮುನಿಸಿಕೊಂಡರೆ ಅದು ವಿನಾಶದ ಸೂಚನೆ. ಈಗಾಗಲೇ ಆಕೆ ತನ್ನ ಕೋಪವನ್ನು ತೋರ್ಪಡಿಸಿದ್ದಾಳೆ. ಇನ್ನಾದರೂ ನಾವು ಎಚ್ಚೆತ್ತುಕೊಂಡು ಪರಿಸರವನ್ನು ರಕ್ಷಿಸೋಣ.. ಗಿಡಮರ ಬೆಳೆಸೋಣ.. ಮನುಕುಲವನ್ನು ಉಳಿಸೋಣ.

ಪ್ರತಿವರ್ಷವೂ ಬರುವಾಗ ಹತ್ತಾರು ರೀತಿಯ ಹೊಸತ್ತನ್ನು ಹೊತ್ತು ಬಂದರೂ, ಅದು ಎಲ್ಲಾ ವರ್ಷಗಳು ಹಳತಾಗುವುದು ಒಂದೇ ರೀತಿ.
ಆದರೂ ಬರಲಿರುವ ಹೊಸವರ್ಷದಲ್ಲಿ ಹೊಸತಿರಲಿ, ಅದರಲ್ಲಿ ಒಳಿತಿರಲಿ ಎಂದು ಆಶಿಸುವುದೇ ಒಂದು ಸಂಭ್ರಮ..
ಹಳೆಯದಕ್ಕೆ ವಿದಾಯ ಹೇಳಿ, ಹೊಸದನ್ನು ಪೂರ್ಣ ಭರವಸೆಯೊಂದಿಗೆ ಸ್ವೀಕರಿಸೋಣ.. ಕನಸು, ಮಹತ್ವಾಕಾಂಕ್ಷೆ ಹಾಗೂ ಸಂತೋಷ ತುಂಬಿದ ಹೊಸ ವರ್ಷ ನಮ್ಮ ನಿಮ್ಮೆಲ್ಲರದಾಗಿರಲಿ
ಸಾಕ್ಷಾಟಿವಿ ಓದುಗರಿಗೆಲ್ಲಾ 2021 ಹೊಸ ವರ್ಷದ ಶುಭಾಶಯಗಳು
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
https://twitter.com/SaakshaTv/status/1344696988034498560?s=19
https://twitter.com/SaakshaTv/status/1344697354536927232?s=19








