New Year : ಹೊಸ ವರ್ಷದ ಆಚರಣೆ ವೇಳೆ ಯುವಕ ಕಟ್ಟಡದಿಂದ ಬಿದ್ದು ಸಾವು…
ಹೊಸ ವರ್ಷದ ಪಾರ್ಟಿ ವೇಳೆ ಕುಡಿದು ಕಟ್ಟಡದಿಂದ ಬಿದ್ದು ಯವಕ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೃತ ಯುವಕನನ್ನ ಒರಿಸ್ಸಾ ಮೂಲದ ಬಾಪಿ (30) ಅಂತ ಗುರುತಿಸಿಲಾಗಿದೆ.
ಕಾಮಾಕ್ಷಿಪಾಳ್ಯದ ಕೊಟ್ಟಿಗೆಪಾಳ್ಯದಲ್ಲಿ ಈ ಘಟನೆ ನಡೆದಿದೆ. ಎಣ್ಣೆ ನಶೆಯಲ್ಲಿ ಯವಕ ಒಂದು ಕಟ್ಟಡದಿಂದ ಮತ್ತೊಂದು ಕಟ್ಟಡಕ್ಕೆ ಜಿಗಿಯುವ ಪ್ರಯತ್ನ ಮಾಡಿದ್ದಾನೆ ಈ ವೇಳೆ ಆಯತಪ್ಪಿ ಬಿದ್ದು ಯುವಕ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಮೃತ ಬಾಪಿ ತನ್ನ ಗೆಳೆಯರ ಜೊತೆ ಮೂರು ಅಂತಸ್ತಿನ ಕಟ್ಟಡದ ಮೇಲೆ ಪಾರ್ಟಿ ಮಾಡುತ್ತಿದ್ದರು. ಪಾರ್ಟಿ ಮಾಡುತ್ತಿದ್ದ ಪಕ್ಕದ ಕಟ್ಟಡದಲ್ಲಿಯೇ ಬಾಪಿ ವಾಸವಾಗಿದ್ದ. ಈ ಕಟ್ಟಡದಿಂದ ಮತ್ತೊಂದು ಕಟ್ಟಡಕ್ಕೆ ಹೋಗಲು ದಾರಿ ಮಾಡಿಕೊಂಡಿದ್ದ. ಕಿಟಕಿಯ ಕಿಂಡಿಯಿಂದಲೇ ಬಾಪಿ ಒಂದು ಕಟ್ಟಡದಿಂದ ಮತ್ತೊಂದು ಕಟ್ಟಡಕ್ಕೆ ಹೋಗುತ್ತಿದ್ದ ಎಂದು ತಿಳಿದು ಬಂದಿದೆ.
ಮೃತ ಬಾಪಿ ನಗರದ ಕಾಟನ್ ಬಾಕ್ಸ್ ತಯಾರಿ ಮಾಡುವ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
New Year: A young man fell from a building and died during the New Year celebrations.