ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆಯಿಂದಾಗಿ ಅಬಕಾರಿ ಇಲಾಖೆ ಭರ್ಜರಿ ಆದಾಯ ಹರಿದು ಬಂದಿದೆ. ಮಂಗಳವಾರ ಒಂದೇ ದಿನ ಕೆಎಸ್ಬಿಸಿಎಲ್ಗೆ ಬರೋಬ್ಬರಿ 308 ಕೋಟಿ ರೂ. ಆದಾಯ ಬಂದಿದೆ.
ಡಿ.31 ರ ಮಂಗಳವಾರ ಬೆಳಗ್ಗೆಯಿಂದ ಮಧ್ಯಾಹ್ನ 2 ಗಂಟೆಯ ಅವಧಿಯಲ್ಲಿ 308 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ. ಈ ಬಾರಿ ಅಬಕಾರಿ ಇಲಾಖೆ 250 ಕೋಟಿ ರೂ. ಮದ್ಯ ಮಾರಾಟದ ಗುರಿ ಇಟ್ಟುಕೊಂಡಿತ್ತು. ಆದರೆ, ಗುರಿಯನ್ನೂ ಮೀರಿ ಈ ಬಾರಿ ಆದಾಯ ಹರಿದು ಬಂದಿದೆ.
ಹಿಂದಿನ ವರ್ಷ ಇದೇ ಅವಧಿಯಲ್ಲಿ 193 ಕೋಟಿ ರೂ. ಮದ್ಯ ಮಾರಾಟವಾಗಿತ್ತು. ಐಎಂಎಲ್- 4,83,715 ಲಕ್ಷ ಬಾಕ್ಸ್ ಮಾರಾಟದಿಂದ 250.25 ಕೋಟಿ ಆದಾಯ ಬಂದಿದೆ. ಬಿಯರ್- 2,92,339 ಲಕ್ಷ ಬಾಕ್ಸ್ ಮಾರಾಟದಿಂದ 57,75 ಕೋಟಿ ಆದಾಯ ಬಂದಿದೆ. ಒಟ್ಟು 7,76,042 ಲಕ್ಷ ಬಾಕ್ಸ್ ಮದ್ಯ ಮಾರಾಟದಿಂದ 308 ಕೋಟಿ ರೂ. ಆದಾಯ ಸಿಕ್ಕಿದೆ.
ಡಿ. 27ರ ಶುಕ್ರವಾರದಂದು ಕೂಡ ಭರ್ಜರಿಯಾಗಿ ಮದ್ಯ ಮಾರಾಟವಾಗಿದೆ. ಅಂದು 408.58 ಕೋಟಿ ರೂ. ಮದ್ಯ ಮಾರಾಟವಾಗಿದೆ.
ನಾನು ಒಬ್ಬನೇ ಸಾಕು, ಬಿಜೆಪಿ-ಜೆಡಿಎಸ್ ನಾಯಕರೆಲ್ಲರೂ ಒಟ್ಟಾಗಿ ಬನ್ನಿ: ನಾವು ಕಟ್ಟಿರುವುದು ರಿಯಲ್ ಎಸ್ಟೇಟ್ ಲೇಔಟ್ ಅಲ್ಲ, ಬುದ್ಧ ಮಂದಿರ! ಕುಮಾರಸ್ವಾಮಿ ಆರೋಪಕ್ಕೆ ದಾಖಲೆ ಸಮೇತ ಗೃಹ ಸಚಿವರ ತಿರುಗೇಟು
ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬವು ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದೆ ಎಂಬ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಆರೋಪಕ್ಕೆ ಗೃಹ ಸಚಿವ...








