ಎಂ.ಜಿ ರಸ್ತೆ, ಕಮರ್ಷಿಯಲ್ ಸ್ಟ್ರೀಟ್‍ನಲ್ಲಿ ನ್ಯೂಇಯರ್ ಸೆಲಬ್ರೇಷನ್‍ಗೆ ಬ್ರೇಕ್
ಬೆಂಗಳೂರು: ಹೊಸ ವರ್ಷಾಚರಣೆಗೆ ದಿನಗಣನೆ ಆರಂಭವಾಗಿದ್ದು, ಇನ್ನು ಕೇವಲ ಮೂರು ದಿನಗಳು ಮಾತ್ರ ಬಾಕಿ ಇರುವಾಗಲೇ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಟಫ್ ರೂಲ್ಸ್ ಜಾರಿಗೆ ತರಲಾಗಿದೆ.
ಬೆಂಗಳೂರು ನಗರದಲ್ಲಿ ಹೊಸ ವರ್ಷಕ್ಕೆ ಕಠಿಣ ಗೈಡ್‍ಲೈನ್ಸ್ ಪ್ರಕಟಿಸಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಡಿಸೆಂಬರ್ 31ರ ಸಂಜೆ 6 ಗಂಟೆಯಿಂದ ಜನವರಿ 1ರ ಬೆಳಿಗ್ಗೆ 6 ಗಂಟೆವರೆ ಸುಮಾರು 12 ಗಂಟೆಗಳ ಕಾಲ ನಗರದಲ್ಲಿ ಕಲಂ 144 ಅನ್ವಯ ನಿಷೇಧಾಜ್ಞೆ ವಿಧಿಸಲಾಗಿದೆ.
ಬೆಂಗಳೂರು ನಗರದ ಯಾವುದೇ ಸಾರ್ವಕನಿಕ ಹಾಗೂ ಬಹಿರಂಗ ಪ್ರದೇಶಗಳಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಲಾಗಿದ್ದು, ಯಾರೂ ಕೂಡ ನ್ಯೂಇಯರ್ ವೆಲ್‍ಕಮ್ ಮಾಡಲು ರಸ್ತೆಗೆ ಬರುವಂತಿಲ್ಲ. ಜನರು ರಸ್ತೆಗೆ ಬರುವುದನ್ನು ತಡೆಯಲು ಭದ್ರತೆಗಾಗಿ 1ಒ ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗುವುದು ಎಂದು ಕಮಲ್ ಪಂತ್ ತಿಳಿಸಿದ್ದಾರೆ.
ಹೊಸ ವರ್ಷದ ಗೈಡ್‍ಲೈನ್ಸ್‍ನಲ್ಲೇನಿದೆ..
* ಸಾರ್ವಜನಿಕ ಸ್ಥಳಗಳಲ್ಲಿ ವರ್ಷಾಚರಣೆ ನಿಷೇಧ
* ಐದಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ
* ಪಬ್, ಬಾರ್, ರೆಸ್ಟೋರೆಂಟ್ ಓಪನ್ ಇರುತ್ತೆ
* ಮನೆ, ಅಪಾರ್ಟ್‍ಮೆಂಟ್, ಕಾಂಪ್ಲೆಕ್ಸ್‍ಗಳಲ್ಲಿ ಪಾರ್ಟಿ ಮಾಡಬಹುದು
* ಪಬ್, ಬಾರ್‍ಗಳು ನಿಗಧಿಪಡಿಸಿದ ಸಮಯದವರೆಗೆ ಓಪನ್
* ಕ್ಲಬ್, ರೆಸಾರ್ಟ್‍ಗಳಲ್ಲಿ ನ್ಯೂಇಯರ್ ಪಾರ್ಟಿ ಬಂದ್
* ಪಬ್‍ಗಳಲ್ಲಿ ಈವೆಂಟ್, ಯಾವುದೇ ಶೋ ನಡೆಸುವಂತಿಲ್ಲ
* ವಿಶೇಷ ಡಿಜೆ ವ್ಯವಸ್ಥೆ ಮಾಡುವಂತಿಲ್ಲ
* ವೀಲಿಂಗ್, ಡ್ರ್ಯಾಗ್ ರೇಸ್‍ಗೆ ಕಡಿವಾಣ
* ಮೆಟ್ರೋ ರೈಲುಗಳ ಸಂಚಾರದ ಬಗ್ಗೆ ಬಿಎಂಆರ್‍ಸಿಎಲ್ ನಿರ್ಧಾರ
* ಎಂಜಿ ರಸ್ತೆ, ಕಮರ್ಷಿಯಲ್ ಸ್ಟ್ರೀಟ್, ಚರ್ಚ್ ಸ್ಟ್ರೀಟ್,
ಕೋರಮಂಗಲ, ಇಂದಿರಾನಗರಗಳಲ್ಲಿ ಓಪನ್ ಸೆಲಬ್ರೇಷನ್ ಬಂದ್
ಹೊಸವರ್ಷದ ಮಾರ್ಗಸೂಚಿಗಳು ಬೆಂಗಳೂರು ನಗರ ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಿಗೆ ಬಹುತೇಕ ಒಂದೇ ತೆರನಾಗಿದ್ದರೂ, ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಎಸ್ಪಿಗಳು ಸ್ಥಳೀಯವಾಗಿ ಪ್ರತ್ಯೇಕ ಮಾರ್ಗಸೂಚಿಗಳನ್ನು ಪ್ರಕಟಿಸಲಿದ್ದಾರೆ.
ರಸ್ತೆ, ಪಾರ್ಕ್ ಹೊರತುಪಡಿಸಿ ಖಾಸಗಿ ಸ್ಥಳಗಳಲ್ಲಿ ಹೊಸವರ್ಷ ಆಚರಣೆಗೆ ಅವಕಾಶ ನೀಡಲಾಗಿದೆ. ಪಬ್, ಈವೆಂಟ್, ಮ್ಯೂಸಿಕಲ್ ಶೋ ನಡೆಸುವಂತಿಲ್ಲ ಹಾಗೂ ಕ್ಲಬ್, ರೆಸಾರ್ಟ್‍ಗಳಲ್ಲಿ ಜನರು ಸೇರುವ ಪಾರ್ಟಿ, ವಿಶೇಷ ಡಿಜೆ ವ್ಯವಸ್ಥೆ ಮಾಡುವಂತಿಲ್ಲ. ಹೊಟೇಲ್‍ಗಳಲ್ಲಿ ಕೋವಿಡ್ ಮಾರ್ಗಸೂಚಿ ಪಾಲಿಸಬೇಕಿದೆ.
ಬೆಂಗಳೂರು ನಗರದಲ್ಲಿ ಡಿಸೆಂಬರ್ 31ರ ರಾತ್ರಿ ಅನವಶ್ಯಕ ಸಂಚಾರಕ್ಕೆ ಯಾವುದೇ ಅವಕಾಶವಿಲ್ಲ. ವ್ಹೀಲಿಂಗ್, ಡ್ರ್ಯಾಗ್ ರೇಸ್‍ಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಿಯಮ ಮೀರಿ ಸಂಚಾರ ಮಾಡಿದರೆ, ವಾಹನ ಜಪ್ತಿ ಮಾಡಲಾಗುವುದು. ಡಿಜೆ ಹಾಗೂ ಯಾವುದೇ ಸಂಗೀತ ಕಾರ್ಯಕ್ರಮಗಳಿಗೆ ಅವಕಾಶ ನೀಡಲಾಗುವುದಿಲ್ಲ. ಆದರೆ, ಅಪಾರ್ಟ್‍ಮೆಂಟ್‍ಗಳು, ಕಾಂಪ್ಲೆಕ್ಸ್, ಖಾಸಗಿ ಕ್ಲಬ್ ಗಳಲ್ಲಿ ಕಾರ್ಯಕ್ರಮಕ್ಕೆ ಅವಕಾಶ ಇದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸ್ಪಷ್ಟಪಡಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel