ADVERTISEMENT
Monday, May 25, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಹೊಸವರ್ಷಕ್ಕೆ ಗೈಡ್‍ಲೈನ್ಸ್: ಮನೇಲಿ ನ್ಯೂಇಯರ್ ಪಾರ್ಟಿ ಓಕೆ, ಬಾರ್, ಪಬ್ ಓಪನ್, ಕ್ಲಬ್-ರೆಸಾರ್ಟ್ ಪಾರ್ಟಿಗೆ ಕೊಕ್ಕೆ..!

Kariyappa N by Kariyappa N
December 28, 2020
in Newsbeat, Samagra karnataka, ರಾಜ್ಯ
new year
Share on FacebookShare on TwitterShare on WhatsappShare on Telegram

ಎಂ.ಜಿ ರಸ್ತೆ, ಕಮರ್ಷಿಯಲ್ ಸ್ಟ್ರೀಟ್‍ನಲ್ಲಿ ನ್ಯೂಇಯರ್ ಸೆಲಬ್ರೇಷನ್‍ಗೆ ಬ್ರೇಕ್
ಬೆಂಗಳೂರು: ಹೊಸ ವರ್ಷಾಚರಣೆಗೆ ದಿನಗಣನೆ ಆರಂಭವಾಗಿದ್ದು, ಇನ್ನು ಕೇವಲ ಮೂರು ದಿನಗಳು ಮಾತ್ರ ಬಾಕಿ ಇರುವಾಗಲೇ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಟಫ್ ರೂಲ್ಸ್ ಜಾರಿಗೆ ತರಲಾಗಿದೆ.

new year
ಬೆಂಗಳೂರು ನಗರದಲ್ಲಿ ಹೊಸ ವರ್ಷಕ್ಕೆ ಕಠಿಣ ಗೈಡ್‍ಲೈನ್ಸ್ ಪ್ರಕಟಿಸಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಡಿಸೆಂಬರ್ 31ರ ಸಂಜೆ 6 ಗಂಟೆಯಿಂದ ಜನವರಿ 1ರ ಬೆಳಿಗ್ಗೆ 6 ಗಂಟೆವರೆ ಸುಮಾರು 12 ಗಂಟೆಗಳ ಕಾಲ ನಗರದಲ್ಲಿ ಕಲಂ 144 ಅನ್ವಯ ನಿಷೇಧಾಜ್ಞೆ ವಿಧಿಸಲಾಗಿದೆ.

Related posts

ಕಾಂಗ್ರೆಸ್ ಎಂದರೆ ಆಧುನಿಕ ಮುಸ್ಲಿಂ ಲೀಗ್: ಸತ್ತವರಿಂದಲೂ ಲೂಟಿ ಮಾಡುತ್ತಿದೆ ದರೋಡೆಕೋರ ಸರ್ಕಾರ : ಪ್ರಲ್ಹಾದ್ ಜೋಶಿ ವಾಗ್ದಾಳಿ

ಕಾಂಗ್ರೆಸ್ ಅಸ್ತಿತ್ವಕ್ಕೇ ಸಂಚಕಾರ ತಂದಿದೆಯೇ ಕಾಕ್ರೋಚ್ ಜನತಾ ಪಾರ್ಟಿ? : ಪ್ರಲ್ಹಾದ್ ಜೋಶಿ

May 25, 2026
ಇದು ತೊಗಲುಗೊಂಬೆ ಸರ್ಕಾರ, ಪಾಪದ ವ್ಯವಸ್ಥೆಗೆ ಪ್ರಾಯಶ್ಚಿತ ಕಾದಿದೆ : ವಿ.ಸೋಮಣ್ಣ

ಇದು ತೊಗಲುಗೊಂಬೆ ಸರ್ಕಾರ, ಪಾಪದ ವ್ಯವಸ್ಥೆಗೆ ಪ್ರಾಯಶ್ಚಿತ ಕಾದಿದೆ : ವಿ.ಸೋಮಣ್ಣ

May 25, 2026

new year
ಬೆಂಗಳೂರು ನಗರದ ಯಾವುದೇ ಸಾರ್ವಕನಿಕ ಹಾಗೂ ಬಹಿರಂಗ ಪ್ರದೇಶಗಳಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಲಾಗಿದ್ದು, ಯಾರೂ ಕೂಡ ನ್ಯೂಇಯರ್ ವೆಲ್‍ಕಮ್ ಮಾಡಲು ರಸ್ತೆಗೆ ಬರುವಂತಿಲ್ಲ. ಜನರು ರಸ್ತೆಗೆ ಬರುವುದನ್ನು ತಡೆಯಲು ಭದ್ರತೆಗಾಗಿ 1ಒ ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗುವುದು ಎಂದು ಕಮಲ್ ಪಂತ್ ತಿಳಿಸಿದ್ದಾರೆ.

ಹೊಸ ವರ್ಷದ ಗೈಡ್‍ಲೈನ್ಸ್‍ನಲ್ಲೇನಿದೆ..
* ಸಾರ್ವಜನಿಕ ಸ್ಥಳಗಳಲ್ಲಿ ವರ್ಷಾಚರಣೆ ನಿಷೇಧ
* ಐದಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ
* ಪಬ್, ಬಾರ್, ರೆಸ್ಟೋರೆಂಟ್ ಓಪನ್ ಇರುತ್ತೆ
* ಮನೆ, ಅಪಾರ್ಟ್‍ಮೆಂಟ್, ಕಾಂಪ್ಲೆಕ್ಸ್‍ಗಳಲ್ಲಿ ಪಾರ್ಟಿ ಮಾಡಬಹುದು
* ಪಬ್, ಬಾರ್‍ಗಳು ನಿಗಧಿಪಡಿಸಿದ ಸಮಯದವರೆಗೆ ಓಪನ್
* ಕ್ಲಬ್, ರೆಸಾರ್ಟ್‍ಗಳಲ್ಲಿ ನ್ಯೂಇಯರ್ ಪಾರ್ಟಿ ಬಂದ್
* ಪಬ್‍ಗಳಲ್ಲಿ ಈವೆಂಟ್, ಯಾವುದೇ ಶೋ ನಡೆಸುವಂತಿಲ್ಲ
* ವಿಶೇಷ ಡಿಜೆ ವ್ಯವಸ್ಥೆ ಮಾಡುವಂತಿಲ್ಲ
* ವೀಲಿಂಗ್, ಡ್ರ್ಯಾಗ್ ರೇಸ್‍ಗೆ ಕಡಿವಾಣ
* ಮೆಟ್ರೋ ರೈಲುಗಳ ಸಂಚಾರದ ಬಗ್ಗೆ ಬಿಎಂಆರ್‍ಸಿಎಲ್ ನಿರ್ಧಾರ
* ಎಂಜಿ ರಸ್ತೆ, ಕಮರ್ಷಿಯಲ್ ಸ್ಟ್ರೀಟ್, ಚರ್ಚ್ ಸ್ಟ್ರೀಟ್,
ಕೋರಮಂಗಲ, ಇಂದಿರಾನಗರಗಳಲ್ಲಿ ಓಪನ್ ಸೆಲಬ್ರೇಷನ್ ಬಂದ್

ಹೊಸವರ್ಷದ ಮಾರ್ಗಸೂಚಿಗಳು ಬೆಂಗಳೂರು ನಗರ ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಿಗೆ ಬಹುತೇಕ ಒಂದೇ ತೆರನಾಗಿದ್ದರೂ, ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಎಸ್ಪಿಗಳು ಸ್ಥಳೀಯವಾಗಿ ಪ್ರತ್ಯೇಕ ಮಾರ್ಗಸೂಚಿಗಳನ್ನು ಪ್ರಕಟಿಸಲಿದ್ದಾರೆ.

new year
ರಸ್ತೆ, ಪಾರ್ಕ್ ಹೊರತುಪಡಿಸಿ ಖಾಸಗಿ ಸ್ಥಳಗಳಲ್ಲಿ ಹೊಸವರ್ಷ ಆಚರಣೆಗೆ ಅವಕಾಶ ನೀಡಲಾಗಿದೆ. ಪಬ್, ಈವೆಂಟ್, ಮ್ಯೂಸಿಕಲ್ ಶೋ ನಡೆಸುವಂತಿಲ್ಲ ಹಾಗೂ ಕ್ಲಬ್, ರೆಸಾರ್ಟ್‍ಗಳಲ್ಲಿ ಜನರು ಸೇರುವ ಪಾರ್ಟಿ, ವಿಶೇಷ ಡಿಜೆ ವ್ಯವಸ್ಥೆ ಮಾಡುವಂತಿಲ್ಲ. ಹೊಟೇಲ್‍ಗಳಲ್ಲಿ ಕೋವಿಡ್ ಮಾರ್ಗಸೂಚಿ ಪಾಲಿಸಬೇಕಿದೆ.
ಬೆಂಗಳೂರು ನಗರದಲ್ಲಿ ಡಿಸೆಂಬರ್ 31ರ ರಾತ್ರಿ ಅನವಶ್ಯಕ ಸಂಚಾರಕ್ಕೆ ಯಾವುದೇ ಅವಕಾಶವಿಲ್ಲ. ವ್ಹೀಲಿಂಗ್, ಡ್ರ್ಯಾಗ್ ರೇಸ್‍ಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಿಯಮ ಮೀರಿ ಸಂಚಾರ ಮಾಡಿದರೆ, ವಾಹನ ಜಪ್ತಿ ಮಾಡಲಾಗುವುದು. ಡಿಜೆ ಹಾಗೂ ಯಾವುದೇ ಸಂಗೀತ ಕಾರ್ಯಕ್ರಮಗಳಿಗೆ ಅವಕಾಶ ನೀಡಲಾಗುವುದಿಲ್ಲ. ಆದರೆ, ಅಪಾರ್ಟ್‍ಮೆಂಟ್‍ಗಳು, ಕಾಂಪ್ಲೆಕ್ಸ್, ಖಾಸಗಿ ಕ್ಲಬ್ ಗಳಲ್ಲಿ ಕಾರ್ಯಕ್ರಮಕ್ಕೆ ಅವಕಾಶ ಇದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸ್ಪಷ್ಟಪಡಿಸಿದ್ದಾರೆ.

 

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: bangalore cityguidlineskamal panthnew yearno celebrationsPolice Commissioner
ShareTweetSendShare
Join us on:

Related Posts

ಕಾಂಗ್ರೆಸ್ ಎಂದರೆ ಆಧುನಿಕ ಮುಸ್ಲಿಂ ಲೀಗ್: ಸತ್ತವರಿಂದಲೂ ಲೂಟಿ ಮಾಡುತ್ತಿದೆ ದರೋಡೆಕೋರ ಸರ್ಕಾರ : ಪ್ರಲ್ಹಾದ್ ಜೋಶಿ ವಾಗ್ದಾಳಿ

ಕಾಂಗ್ರೆಸ್ ಅಸ್ತಿತ್ವಕ್ಕೇ ಸಂಚಕಾರ ತಂದಿದೆಯೇ ಕಾಕ್ರೋಚ್ ಜನತಾ ಪಾರ್ಟಿ? : ಪ್ರಲ್ಹಾದ್ ಜೋಶಿ

by Shwetha
May 25, 2026
0

ಹುಬ್ಬಳ್ಳಿ: ಕಾಕ್ರೋಚ್ ಜನತಾ ಪಾರ್ಟಿ ಎಂಬ ವಿವಾದಾತ್ಮಕ ಹೆಸರಿನ ವಿಚಾರವಾಗಿ ಈಗ ರಾಜಕೀಯ ವಲಯದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಈ ಹೊಸ ಬೆಳವಣಿಗೆಯಿಂದ ಬಿಜೆಪಿ ವಿಚಲಿತವಾಗಿದೆ ಎಂಬ...

ಇದು ತೊಗಲುಗೊಂಬೆ ಸರ್ಕಾರ, ಪಾಪದ ವ್ಯವಸ್ಥೆಗೆ ಪ್ರಾಯಶ್ಚಿತ ಕಾದಿದೆ : ವಿ.ಸೋಮಣ್ಣ

ಇದು ತೊಗಲುಗೊಂಬೆ ಸರ್ಕಾರ, ಪಾಪದ ವ್ಯವಸ್ಥೆಗೆ ಪ್ರಾಯಶ್ಚಿತ ಕಾದಿದೆ : ವಿ.ಸೋಮಣ್ಣ

by Shwetha
May 25, 2026
0

ತುಮಕೂರು: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ಒಂದು ತೊಗಲುಗೊಂಬೆ ಸರ್ಕಾರವಾಗಿದೆ. ಈ ಸರ್ಕಾರ ಯಾವಾಗ ತೊಲಗುತ್ತದೋ ಗೊತ್ತಿಲ್ಲ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ...

ದಕ್ಷಿಣದ ಹೆಬ್ಬಾಗಿಲು ಕರ್ನಾಟಕದ ಮೇಲೆ ಬಿಜೆಪಿ ಹೈಕಮಾಂಡ್ ಹದ್ದಿನ ಕಣ್ಣು;ಯಡಿಯೂರಪ್ಪ ನಿವಾಸದಲ್ಲಿ ಹೈಕಮಾಂಡ್ ರಣತಂತ್ರ: ರಾಜ್ಯ ಬಿಜೆಪಿಗೆ ಹೊಸ ಕಳೆ ತಂದ ನಿತಿನ್ ನಬಿನ್ ಭೇಟಿ

ದಕ್ಷಿಣದ ಹೆಬ್ಬಾಗಿಲು ಕರ್ನಾಟಕದ ಮೇಲೆ ಬಿಜೆಪಿ ಹೈಕಮಾಂಡ್ ಹದ್ದಿನ ಕಣ್ಣು;ಯಡಿಯೂರಪ್ಪ ನಿವಾಸದಲ್ಲಿ ಹೈಕಮಾಂಡ್ ರಣತಂತ್ರ: ರಾಜ್ಯ ಬಿಜೆಪಿಗೆ ಹೊಸ ಕಳೆ ತಂದ ನಿತಿನ್ ನಬಿನ್ ಭೇಟಿ

by Shwetha
May 25, 2026
0

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿದ್ದ ಮಂದಗತಿಯ ರಾಜಕಾರಣಕ್ಕೆ ಈಗ ಹೊಸ ಚೈತನ್ಯ ತುಂಬುವ ಕೆಲಸ ಆರಂಭವಾಗಿದೆ. ಪಕ್ಷದ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರ...

ಸೂರ್ಯ ಔಟ್, ಹೊಸ ನಾಯಕ ಇನ್?ರೇಸ್‌ನಲ್ಲಿರುವ ಆ 5 ಸ್ಟಾರ್ ಆಟಗಾರರು ಯಾರು?

ಸೂರ್ಯ ಔಟ್, ಹೊಸ ನಾಯಕ ಇನ್?ರೇಸ್‌ನಲ್ಲಿರುವ ಆ 5 ಸ್ಟಾರ್ ಆಟಗಾರರು ಯಾರು?

by Shwetha
May 25, 2026
0

ಬೆಂಗಳೂರು: ಭಾರತೀಯ ಟಿ20 ಕ್ರಿಕೆಟ್ ತಂಡದಲ್ಲಿ ಈಗ ದೊಡ್ಡ ಮಟ್ಟದ ಬದಲಾವಣೆಯ ಗಾಳಿ ಬೀಸುತ್ತಿದೆ. ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟುವ ಮಿಸ್ಟರ್ 360 ಖ್ಯಾತಿಯ ಸೂರ್ಯಕುಮಾರ್...

ಕಾಂಗ್ರೆಸ್ ಎಂದರೆ ಆಧುನಿಕ ಮುಸ್ಲಿಂ ಲೀಗ್: ಸತ್ತವರಿಂದಲೂ ಲೂಟಿ ಮಾಡುತ್ತಿದೆ ದರೋಡೆಕೋರ ಸರ್ಕಾರ : ಪ್ರಲ್ಹಾದ್ ಜೋಶಿ ವಾಗ್ದಾಳಿ

ಕಾಂಗ್ರೆಸ್ ಎಂದರೆ ಆಧುನಿಕ ಮುಸ್ಲಿಂ ಲೀಗ್: ಸತ್ತವರಿಂದಲೂ ಲೂಟಿ ಮಾಡುತ್ತಿದೆ ದರೋಡೆಕೋರ ಸರ್ಕಾರ : ಪ್ರಲ್ಹಾದ್ ಜೋಶಿ ವಾಗ್ದಾಳಿ

by Shwetha
May 25, 2026
0

ಹುಬ್ಬಳ್ಳಿ: ರಾಜ್ಯ ಕಾಂಗ್ರೆಸ್ ಸರ್ಕಾರವು ಮತಬ್ಯಾಂಕ್ ರಾಜಕಾರಣಕ್ಕಾಗಿ ಉಗ್ರವಾದಿ ಪ್ರವೃತ್ತಿಯ ಶಕ್ತಿಗಳಿಗೆ ಬೆಂಬಲ ನೀಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತೀವ್ರವಾಗಿ ಕಿಡಿಕಾರಿದ್ದಾರೆ. ಗಲಭೆಕೋರರ ಮೇಲಿನ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram