ಮಾಸ್ಕ್ ಧರಿಸದವರಿಗೆ ತಕ್ಕ ಪಾಠ ಕಲಿಸಿದ ಕಿಲಾಡಿ ಕುಳ್ಳ
ಕೊರೊನಾ ವ್ಯಾಕ್ಸಿನ ಬಂದ ಬಳಿಕ ಜನರು ಕೊರೊನಾ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಳ್ಳುತ್ತಿಲ್ಲ. ಎಷ್ಟೋ ಮಂದಿ ಮಾಸ್ಕ್ ಧರಿಸದೇ ಅಸಡ್ಡೆ ತೋರಿಸುತ್ತಿದ್ದಾರೆ.
ಇಂತಹ ವ್ಯಕ್ತಿಗಳಿಗೆ ನ್ಯೂಯಾರ್ಕ್ ನಲ್ಲಿ ವ್ಯಕ್ತಿವೊಬ್ಬ ಸಖತ್ತಾಗಿಯೇ ಬುದ್ಧಿ ಕಲಿಸುತ್ತಿದ್ದಾನೆ.
ಹೌದು..! ನ್ಯೂಯಾರ್ಕ್ ನ ರೈಲಿನಲ್ಲಿ ಮಾಸ್ಕ್ ಧರಿಸದೇ ಇರುವವರಿಗೆ ವ್ಯಕ್ತಿಯೊಬ್ಬ ಚೌಕಿ ವೇಷಧರಿಸಿ ಕಿರುಕುಳ ನೀಡುವ ಮೂಲಕ ತಕ್ಕ ಪಾಠ ಕಲಿಸಿದ್ದಾನೆ.
ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ಕುಳ್ಳಗಿರುವ ವ್ಯಕ್ತಿ ಕಿತ್ತಳೆ ಬಣ್ಣದ ವಿಗ್ ಮತ್ತು ಬ್ರೈಟ್ ಕಲರ್ ಟಾಪ್ ಧರಿಸಿದ್ದು ಮಾಸ್ಕ್ ಧರಿಸದೇ ಇರುವ ಮಹಿಳೆಗೆ ಹೆದರಿಸಿದ್ದಾನೆ.
ಆತ ಮಹಿಳೆಯ ಕಾಲಿಗೆ ಕಚ್ಚಿದಂತೆ ಕಾಣಿಸುತ್ತದೆ. ಆತನ ವರ್ತನೆಗೆ ಬೆದರಿದ ಮಹಿಳೆ ಆತನನ್ನು ದೂಡುತ್ತಾಳೆ. ಕೊನೆಗೆ ಆತ ಮಹಿಳೆಯನ್ನ ತೆರಳಲು ಬಿಟ್ಟು ಬಳಕ ಮುಂದಿನ ಬೋಗಿದೆ ಓಡಿ ಹೋಗುತ್ತಾನೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel