New Zealand PM: ನ್ಯೂಜಿಲೆಂಡ್ ಪ್ರಧಾನಿ ಹುದ್ದೆಗೆ ರಾಜಿನಾಮೆ ಘೋಷಿಸಿದ ಜಸಿಂಡಾ ಅರ್ಡೆರ್ನ್…
ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆರ್ನ್ ಸಂಚಲನಾತ್ಮಕ ನಿರ್ಧಾರ ಕೈಗೊಂಡಿದ್ದಾರೆ. ಮುಂದಿನ ತಿಂಗಳ ಮೊದಲ ವಾರದಲ್ಲಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಲೇಬರ್ ಪಕ್ಷದ ಸದಸ್ಯರ ಸಭೆಯಲ್ಲಿ ಈ ವಿಷಯವನ್ನ ಘೋಷಿಸಿದ್ದಾರೆ.
ಅರ್ಡೆರ್ನ್ ಅವರು 2017 ರಿಂದ ನ್ಯೂಜಿಲೆಂಡ್ ನ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಮೂರು ವರ್ಷಗಳ ನಂತರ (2020 ರಲ್ಲಿ) ಅವರು ಲೇಬರ್ ಪಕ್ಷದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿ ಮತ್ತೊಮ್ಮೆ ಪ್ರಧಾನಿಯಾಗಿ ಆಯ್ಕೆಯಾದರು.
ಆದರೇ ಕಳೆದ ಕೆಲವು ದಿನಗಳಿಂದ ಅವರು ತಮ್ಮ ಛಾಪನ್ನ ಕಳೆದುಕೊಂಡಿದ್ದಾರೆ. ಈ ಕುರಿತು ಮಾತನಾಡಿದ ಜಸಿಂಡಾ “ಲೇಬರ್ ಪಕ್ಷದ ನಾಯಕಿಯಾಗಿ ಮುಂದುವರಿಯುವ ಸಾಮರ್ಥ್ಯ ತನಗಿದೆ ಎಂದು ಈ ಹಿಂದೆ ಅನಿಸಿತ್ತು, ಆದರೆ ಇನ್ನು ಮುಂದೆ ಆ ರೀತಿ ಭಾವಿಸಿಲ್ಲ. ನನಗೆ ಪ್ರಧಾನಿ ಹುದ್ದೆಯ ಜವಾಬ್ದಾರಿ ಗೊತ್ತಿದೆ, ಆದರೆ ಅವರಿಗೆ ನ್ಯಾಯ ಕೊಡಿಸುವ ಶಕ್ತಿ ಇಲ್ಲ ಎಂದು ಹೇಳಿದ್ದಾರೆ.
ರಾಜೀನಾಮೆ ಹಿಂದೆ ಯಾವುದೇ ರಾಜಕೀಯ ಅಂಶವಿಲ್ಲ, ವಿಶೇಷ ಕಾರಣವಿಲ್ಲ, ಮನುಷ್ಯ ಎಂಬ ಕಾರಣಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಪ್ರತಿಕ್ರಿಯಿಸಿರುವುದು ಗಮನಾರ್ಹ. ನ್ಯೂಜಿಲೆಂಡ್‌ನಲ್ಲಿ ಮುಂದಿನ ಸಾರ್ವತ್ರಿಕ ಚುನಾವಣೆ ಇದೇ ಅಕ್ಟೋಬರ್ 14 ರಂದು ನಡೆಯಲಿದ್ದು, ಅಲ್ಲಿಯವರೆಗೆ ಸಂಸದರಾಗಿ ಮುಂದುವರಿಯುವುದಾಗಿ ಅವರು ಹೇಳಿದ್ದಾರೆ.
ಮುಂದಿನ ಚುನಾವಣೆಯಲ್ಲಿ ತಮ್ಮ ಪಕ್ಷ ಸೋಲುತ್ತದೆ ಎಂದು ಭಾವಿಸಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ಯಾರೂ ಭಾವಿಸಬಾರದು ಮುಂದಿನ ಚುನಾವಣೆಯಲ್ಲೂ ತಮ್ಮ ಪಕ್ಷವೇ ಗೆಲ್ಲುವ ವಿಶ್ವಾಸವಿದೆ ಎಂದರು. ಮುಂದಿನ ತಿಂಗಳು 7 ರಿಂದ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಜಾರಿಯಾಗಲಿದೆ ಎಂದು ತಿಳಿಸಿದರು. ಇದೇ 22ರಂದು ಲೇಬರ್ ಪಕ್ಷದ ನೂತನ ನಾಯಕರ ಆಯ್ಕೆಗೆ ಚುನಾವಣೆ ನಡೆಯಲಿದೆ ಎಂದು ತಿಳಿಸಿದರು. ರಾಜೀನಾಮೆ ಹಿಂದೆ ಯಾವುದೇ ರಹಸ್ಯವಿಲ್ಲ ಎಂದರು. ಮುಂದಿನ ಚುನಾವಣೆಯಲ್ಲಿ ಗೆಲ್ಲಬೇಕಾದರೆ ಹೊಸ ಜನ ಬೇಕು ಎಂದರು.
New Zealand PM: Jacinda Ardern announced her resignation as the Prime Minister of New Zealand…








