ಇದು ನೆರೆಹೊರೆಯವರ ಕ್ರಿಕೆಟ್ ಕಥೆ… ಆಸ್ಟ್ರೇಲಿಯಾ – ನ್ಯೂಜಿಲೆಂಡ್ ಫೈನಲ್ ಹಾದಿ..!

1 min read
aron finch kane williamson t-20 wolrdcup 2021 saakshatv

ಇದು ನೆರೆಹೊರೆಯವರ ಕ್ರಿಕೆಟ್ ಕಥೆ… ಆಸ್ಟ್ರೇಲಿಯಾ – ನ್ಯೂಜಿಲೆಂಡ್ ಫೈನಲ್ ಹಾದಿ..!

aron finch kane williamson t-20 wolrdcup 2021 saakshatvಆಸ್ಟ್ರೇಲಿಯಾ ಮತ್ತು ನ್ಯೂಜಿಲಂಡ್ ತಂಡಗಳು ಐಸಿಸಿ ಟಿ20ಯ ಫೈನಲ್ನಲ್ಲಿ ಜಿದ್ದಾಜಿದ್ದಿ ನಡೆಸಲು ಸಜ್ಜಾಗಿವೆ. ಆದರೆ ಈ ಎರಡೂ ತಂಡಗಳು ಸೂಪರ್ 12 ಹಾಗೂ ಸೆಮಿಫೈನಲ್ನಲ್ಲಿ ಭಾರೀ ಜಿದ್ದಾಜಿದ್ದಿ ನಡೆಸಿದ್ದವು. ಘಟಾನುಘಟಿ ತಂಡಗಳಿಗೆ ನೀರು ಕುಡಿಸಿದ್ದವು. ಸೆಮಿಫೈನಲ್ನಲ್ಲಂತೂ ಫೆವರೀಟ್ ಎನಿಸಿದವರನ್ನೇ ಮನೆಗಟ್ಟಿ ಅಂತಿಮ ಸಮರಕ್ಕೆ ಸಜ್ಜಾಗಿವೆ.
ಆಸ್ಟ್ರೇಲಿಯಾ ಆಟ
1. ದಕ್ಷಿಣ ಆಫ್ರಿಕಾ ವಿರುದ್ಧ 5 ವಿಕೆಟ್ ಜಯ
2. ಶ್ರೀಲಂಕಾ ವಿರುದ್ಧ 7 ವಿಕೆಟ್ ಜಯ
3. ಇಂಗ್ಲೆಂಡ್ ವಿರುದ್ಧ 8 ವಿಕೆಟ್ ಸೋಲು
4. ಬಾಂಗ್ಲಾದೇಶ ವಿರುದ್ಧ 8 ವಿಕೆಟ್ ಜಯ
5. ವೆಸ್ಟ್ ಇಂಡೀಸ್ ವಿರುದ್ಧ 8 ವಿಕೆಟ್ ಜಯ
ಆಸ್ಟ್ರೇಲಿಯಾ ಸೂಪರ್ 12ರಲ್ಲಿ 5 ಪಂದ್ಯಗಳಲ್ಲಿ ನಾಲ್ಕು ಗೆಲುವು ಮತ್ತು ಒಂದು ಸೋಲು ಕಂಡಿತ್ತು. ಇಂಗ್ಲೆಂಡ್ ವಿರುದ್ಧದ ಹೀನಾಯ ಸೋಲು ಕಾಂಗರೂಗಳಿಗೆ ಪಾಠ ಕಲಿಸಿತ್ತು. ಗ್ರೂಪ್ ಆಫ್ ಡೆತ್ ಅಂತಲೇ ಕರೆಸಿಕೊಂಡಿದ್ದ ಗ್ರೂಪ್ 1ರಲ್ಲಿ ರನ್ ರೇಟ್ ಆಧಾರದಲ್ಲಿ ಸೆಮಿಫೈನಲ್ ಪ್ರವೇಶಿಸಿತು. ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯಾ ಟೂರ್ನಿಯ ಹಾಟ್ ಫೆವರೀಟ್ ಪಾಕಿಸ್ತಾವನ್ನೇ 5 ವಿಕೆಟ್ಗಳಿಂದ ಬಗ್ಗು ಬಡಿದು ಪ್ರಶಸ್ತಿಯ ಹೊಸ್ತಿಲಲ್ಲಿದೆ.
ನ್ಯೂಜಿಲೆಂಡ್ ಓಟ
ಪಾಕ್ ವಿರುದ್ಧ 5 ವಿಕೆಟ್ ಸೋಲು
ಭಾರತ ವಿರುದ್ಧ 5 ವಿಕೆಟ್ ಜಯ
ಸ್ಕಾಟ್ಲೆಂಡ್ ವಿರುದ್ಧ 16 ರನ್ ಜಯ
ನಮಿಬಿಯಾ ವಿರುದ್ಧ 52 ರನ್ ಜಯ
ಅಫ್ಘಾನಿಸ್ತಾನ ವಿರುದ್ಧ 8 ವಿಕೆಟ್ ಜಯ
ನ್ಯೂಜಿಲೆಂಡ್ ಪಾಕ್ ವಿರುದ್ಧದ ಸೋಲಿನೊಂದಿಗೆ ಟೂರ್ನಿ ಆರಂಭಿಸಿತ್ತು. ಆದರೆ ಟೀಮ್ ಇಂಡಿಯಾದ ವಿರುದ್ಧದ ಗೆಲುವು ಕಿವೀಸ್ಗೆ ಹೊಸ ಆರಂಭ ನೀಡಿತು. ನಂತರ ಎಲ್ಲೂ ತಿರುಗಿ ನೋಡದ ಕಿವೀಸ್ ಈಗ ಪ್ರಶಸ್ತಿಯ ಕನಸು ಕಾಣುತ್ತಿದೆ. ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ತಂಡವನ್ನೇ ಹೊಸಕಿ ಹಾಕಿದ ನ್ಯೂಜಿಲೆಂಡ್ ಚೊಚ್ಚಲ ಟಿ20 ಪ್ರಶಸ್ತಿಯ ಕನಸಿನಲ್ಲಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd