ಸೌರವ್ ಗಂಗೂಲಿಯ 25 ವರ್ಷದ ದಾಖಲೆ ಪತನ- ಲಾಡ್ರ್ಸ್ ನಲ್ಲಿ ಡೆವೋನ್ ಕ್ವಾನೇಯ್ ಡಬಲ್ ಸಂಭ್ರಮ..!
ಲಾಡ್ಸ್ ್ ಮೈದಾನ.. ವಿಶ್ವ ಕ್ರಿಕೆಟ್ ನ ಕಾಶಿ ಅಂತ ಕರೆಯಲಾಗುತ್ತದೆ. ಈ ಮೈದಾನದಲ್ಲಿ ಶ್ರೇಷ್ಠ ಪ್ರದರ್ಶನ ನೀಡಿ ಕ್ರಿಕೆಟ್ ಇತಿಹಾಸದಲ್ಲಿ ಶಾಶ್ವತವಾದ ಸ್ಥಾನ ಮಾನವನ್ನು ಪಡೆದುಕೊಳ್ಳಬೇಕು ಎಂಬುದು ಪ್ರತಿಯೊಬ್ಬ ಕ್ರಿಕೆಟಿಗನ ಕನಸು.
ಹೌದು, ಆ ಕನಸನ್ನು ಈಗ ನನಸು ಮಾಡಿಕೊಂಡಿದ್ದಾರೆ ನ್ಯೂಜಿಲೆಂಡ್ ನ ಆರಂಭಿಕ ಆಟಗಾರ ಡೆವೋನ್ ಕಾನ್ವೇಯ್.
29ರ ಹರೆಯದ ಡೆವೋನ್ ಕ್ವಾನೇಯ್ ಹುಟ್ಟಿದ್ದು ದಕ್ಷಿಣ ಆಫ್ರಿಕಾದಲ್ಲಿ. ಆದ್ರೆ ಪ್ರತಿನಿಧಿಸುತ್ತಿರುವುದು ನ್ಯೂಜಿಲೆಂಡ್ ತಂಡವನ್ನು. ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಡೆವೋನ್ ಕಾನ್ವೇಯ್ ಅವರು ದ್ವಿಶತಕ ದಾಖಲಿಸಿ ಲಾಡ್ಸ್ ್ ಮೈದಾನದಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ತಾನಾಡಿರುವ ಚೊಚ್ಚಲ ಪಂದ್ಯದಲ್ಲಿ ಸೌರವ್ ಗಂಗೂಲಿಯವರ 25 ವರ್ಷಗಳ ಹಿಂದಿನ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಅಷ್ಟೇ ಅಲ್ಲ 125 ವರ್ಷಗಳ ಹಿಂದಿನ ದಾಖಲೆಯನ್ನು ಕೂಡ ಇದೀಗ ತನ್ನ ಹೆಸರಿಗೆ ಬರೆಸಿಕೊಂಡಿದ್ದಾರೆ. 125 ವರ್ಷಗಳ ಹಿಂದೆ ಅಂದ್ರೆ 1896ರಲ್ಲಿ ಇಂಗ್ಲೆಂಡ್ ನ ಆಟಗಾರ ರಂಜಿತ್ ಸಿಂಹಿಜಿ ಅವರು ಆಸ್ಟ್ರೇಲಿಯಾ ವಿರುದ್ಧ 154 ರನ್ ದಾಖಲಿಸಿದ್ದರು. ಇದು ಲಾಡ್ಸ್ ್ ಮೈದಾನದಲ್ಲಿ ಚೊಚ್ಚಲ ಪಂದ್ಯದಲ್ಲಿ ದಾಖಲಿಸಿದ್ದ ಗರಿಷ್ಠ ರನ್ ಆಗಿತ್ತು.
ಅದೇ ರೀತಿ 25 ವರ್ಷಗಳ ಹಿಂದೆ ಭಾರತದ ಸೌರವ್ ಗಂಗೂಲಿ ಅವರು ತನ್ನ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ 131 ರನ್ ದಾಖಲಿಸಿದ್ದರು. ಇದೀಗ ಈ ಎರಡು ದಾಖಲೆಗಳನ್ನು ಡೆವೊನ್ ಕಾನ್ವೇಯ್ ಅವರು ಅಳಿಸಿ ಹಾಕಿದ್ದಾರೆ. ಡೇವೊನ್ ಕಾನ್ವೇಯ್ ಅವರು 347 ಎಸೆತಗಳಲ್ಲಿ 22 ಬೌಂಡರಿ ಮತ್ತು ಒಂದು ಸಿಕ್ಸರ್ ನ ಸಹಾಯದಿಂದ ಭರ್ತಿ 200 ರನ್ ಗಳಿಸಿದ್ದಾರೆ.
ಈ ಮೂಲಕ ಲಾಡ್ಸ್ ್ ನಲ್ಲಿ ಡೇವೊನ್ ಕ್ವಾನೇಯ್ ಅವರು ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಶತಕ ದಾಖಲಿಸಿದ್ದ ಆರನೇ ಆಟಗಾರ ಎಂಬ ಗೌರವಕ್ಕೂ ಪಾತ್ರರಾಗಿದ್ದಾರೆ.
ಒಟ್ಟಿನಲ್ಲಿ ಡೆವೊನ್ ಕಾನ್ವೇಯ್ ಅವರು ಈ ಶತಕದ ಮೂಲಕ ಟೀಮ್ ಇಂಡಿಯಾಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಉತ್ತಮ ಲಯದಲ್ಲಿರುವ ಡೆವೋನ್ ಅವರು ವಿರಾಟ್ ಪಡೆಯ ಬೌಲರ್ ಗಳಿಗೆ ದುಃಸ್ವಪ್ನವಾಗಿ ಕಾಡುವ ಸಾಧ್ಯತೆಗಳೂ ಇವೆ.