Newdehli : 4 ವರ್ಷದ ಬಾಲಕಿ ಅಪಹರಣ , ಅತ್ಯಾಚಾರ , ಆರೋಪಿ ಬಂಧನ
ನವದೆಹಲಿ: ನಾಲ್ಕು ವರ್ಷದ ಬಾಲಕಿಯನ್ನು (Girl) ಅಪಹರಿಸಿ (Kidnap) ಅತ್ಯಾಚಾರ ಮಾಡಿ ಪಾರ್ಕ್ ಬಳಿ ಬಿಟ್ಟು ಹೋಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ (Arrest).
ಆರೋಪಿಯನ್ನು ಅನಿಲ್ ಪಾಠಕ್ ಎಂದು ಗುರುತಿಸಲಾಗಿದೆ. ಹಿಂದಿನ ವಾರ ಹೊರ ಉತ್ತರ ದೆಹಲಿಯ ಭಾಲ್ಸ್ವಾ ಡೈರಿ ಪ್ರದೇಶದಲ್ಲಿ ಈತ ಮನೆಯ ಹೊರಗೆ ಆಟವಾಡುತ್ತಿದ್ದ ಬಾಲಕಿಯನ್ನು ಕಿಡ್ನ್ಯಾಪ್ ಮಾಡಿ ಅತ್ಯಾಚಾರವೆಸಗಿ ನಂತರ ಪಾರ್ಕ್‍ನಲ್ಲಿ ಬಿಟ್ಟುಹೋಗಿದ್ದ ಎಂಬ ವಿಷಯ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.
ಘಟನೆಯೇನು?: ದಿನಗೂಲಿ ಕಾರ್ಮಿಕನ ಮಗಳು ಮನೆಯ ಹೊರಗೆ ಆಟವಾಡುತ್ತಿದ್ದಾಗ ಅನಿಲ್ ಪಾಠಕ್ ಎಂಬಾತ ಕಿಡ್ನ್ಯಾಪ್ ಮಾಡಿದ್ದ. ಇತ್ತ ರಾತ್ರಿಯಾದರೂ ಮಗಳು ಕಾಣದೇ ಇದ್ದಕ್ಕೆ ಗಾಬರಿಗೊಂಡ ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.
ಪೊಲೀಸರು ಪ್ರಕರಣವನ್ನು ಗಂಭೀರವಾಗಿ ರಾತ್ರಿಯಿಡೀ 3 ತಂಡಗಳಾಗಿ ಬಾಲಕಿಯನ್ನು ಹುಡುಕಿದ್ದಾರೆ. ಆದರೆ ಬೆಳಗಿನ ಜಾವ ಬಾಲಕಿಯು ಪಾರ್ಕ್‍ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಬಾಲಕಿಯು ಪರೀಕ್ಷಿಸಿದಾಗ ಆಕೆಯ ಮೇಲೆ ಅತ್ಯಾಚಾರವೆಸಗಿರುವುದು ದೃಢವಾಗಿತ್ತು.
ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ್ದ ಪೊಲೀಸರಿಗೆ ಸಿಸಿಟಿವಿ (CCTV) ಕ್ಯಾಮರಾದಲ್ಲಿ ಆರೋಪಿ ಅನಿಲ್ ಪಾಠಕ್ ಬಾಲಕಿಯನ್ನು ತನ್ನ ತೋಳುಗಳಲ್ಲಿ ಹೊತ್ತೊಯ್ಯುತ್ತಿರುವುದು ಪತ್ತೆ ಆಗಿದೆ. ಈ ಹಿನ್ನೆಲೆಯಲ್ಲಿ ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು ಆರೋಪಿ ಅನಿಲ್ ಪಾಠಕ್‍ನ ವಿರುದ್ಧ ಪೊಕ್ಸೊ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದಾರೆ. ಸದ್ಯ ಬಾಲಕಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ.
Newdehli , 4 year old girl kidnapped and raped case – Accused Arrest