‘ಪಡಿತರ ಅಂಗಡಿಗಳು ಕೊರೊನಾ ಹಾಟ್ ಸ್ಪಾಟ್’ ಮನೆ ಬಾಗಿಲಿಗೆ ಪಡಿತರ ಪೂರೈಕೆ ಯೋಜನೆ ಅನುಷ್ಠಾನಕ್ಕೆ ತರಬೇಕು – ಕೇಜ್ರಿವಾಲ್
ನವದೆಹಲಿ: ದೇಶಾದ್ಯಂತ ಕೋವಿಡ್ 2ನೇ ಹಾವಳಿಯಿಂದಾಗಿ ಜನರು ಸಾಕಷ್ಟು ತೊಂದರೆಗಳನ್ನ ಅನುಭವಿಸುತ್ತಿದ್ದಾರೆ. ಬಹುತೇಕ ರಾಜ್ಯಗಳಲ್ಲಿ ಲಾಕ್ ಡೌನ್ ವಿಧಿಸಲಾಗಿದೆ.. ಆದ್ರೆ ಅಗತ್ಯ ವಸ್ತುಗಳ ಖರೀದಿಗೆ ಅನುಮತಿಸಲಾಗಿದೆ.. ಜೊತೆಗೆ ಜನರಿಗೆ ಪಡಿತರ ವಿರಣೆಗೂ ಅನುಮತಿ ಇದೆ.. ಆದ್ರೆ ಈ ರೀತಿ ಪಡಿತರ ತೆಗೆದುಕೊಳ್ಳಲು ದೇಶಾದ್ಯಂತ ಜನ ಗುಂಪು ಸೇರುವುದು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇರುವುದು ಸರ್ವೇ ಸಾಮಾನ್ಯವಾಗಿದೆ.
ಇದರ ವಿರುದ್ಧ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಧ್ವನಿ ಎತ್ತಿದ್ದು, ಕೇಂದ್ರ ಸರ್ಕಾರದ ಮುಂದೆ ಮನವಿಯೊಂದನ್ನ ಇಟ್ಟಿದ್ದಾರೆ. ಪಡಿತರ ಅಂಡಿಗಳು ಕೊರೊನಾ ಹಾಟ್ ಸ್ಪಾಟ್ ಆಗುತ್ತಿದ್ದು, ಸಾರ್ವಜನಿಕರ ಮನೆ ಬಾಗಿಲಿಗೆ ಪಡಿತರ ಪೂರೈಕೆ ಯೋಜನೆಯನ್ನು ಕೇಂದ್ರದಿಂದ ಸರ್ಕಾರದಿಂದ ಏಕೆ ಸ್ಥಗಿತಗೊಳಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ. ಜೊತೆಗೆ ರಾಷ್ಟ್ರೀಯ ಹಿತಾಸಕ್ತಿಯಿಂದ ಈ ಯೋಜನೆ ಅನುಷ್ಠಾನಕ್ಕೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.
ಕೋವಿಡ್-19 ಹಿನ್ನೆಲೆಯಲ್ಲಿ ಪಡಿತರ ಅಂಗಡಿಗಳು ಸೋಂಕು ಹರಡುವಿಕೆ ಕೇಂದ್ರವಾಗದಂತೆ ತಡೆಗಟ್ಟಲು ದೇಶಾದ್ಯಂತ ಈ ಯೋಜನೆಯನ್ನು ಅನುಷ್ಠಾನಗೊಳಿಸಬೇಕೆಂದು ಅವರು ಒತ್ತಾಯಿಸಿದ್ದಾರೆ. ಫಿಜ್ಜಾ, ಬರ್ಗರ್ಸ್, ಸ್ಮಾರ್ಟ್ ಫೋನ್ ಗಳು, ಬಟ್ಟೆಗಳು ಮನೆ ಬಾಗಿಲಿಗೆ ಪೂರೈಕೆ ಮಾಡುವಂತಾದರೆ, ಪಡಿತರವನ್ನು ಏಕೆ ಮನೆ ಬಾಗಿಲಿಗೆ ಪೂರೈಸಬಾರದು ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮಹಾರಾಷ್ಟ್ರ, ದೆಹಲಿ ಮತ್ತು ಜಾರ್ಕಂಡ್ ಸರ್ಕಾರ, ರೈತರು ಮತ್ತು ಲಕ್ಷದೀಪ ಜನರು ಒಳಗೊಂಡಂತೆ ಪ್ರತಿಯೊಂದು ವಿಚಾರದಲ್ಲೂ ಕೇಂದ್ರ ಸರ್ಕಾರದ ಜೊತೆಗೆ ಪೈಪೋಟಿ ನಡೆಸಬೇಕಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಪ್ರತಿಯೊಂದರಲ್ಲೂ ಕೇಂದ್ರ ಸರ್ಕಾರದ ಜೊತೆಗಿನ ಹೋರಾಟದಿಂದ ಜನರು ಬೇಸತಿದ್ದಾರೆ. ಈ ರೀತಿಯ ನಾವು ಹೋರಾಡುತ್ತಿದ್ದರೆ ಕೋವಿಡ್ ಹೇಗೆ ನಿಯಂತ್ರಣ ಮಾಡಲು ಸಾಧ್ಯ ಎಂದು ಅವರು ಆನ್ ಲೈನ್ ಭಾಷಣದಲ್ಲಿ ಹೇಳಿದ್ದಾರೆ. ಮನೆ ಬಾಗಿಲಿಗೆ ಪಡಿತರ ವಿತರಿಸುವ ಯೋಜನೆಗೆ ಕೇಂದ್ರ ಸರ್ಕಾರದ ಅನುಮೋದನೆ ಅಗತ್ಯವಿಲ್ಲ, ಆದರೆ, ಯಾವುದೇ ವಿವಾದವಾಗದಂತೆ ತಡೆಯಲು ಐದು ಬಾರಿ ಅನುಮತಿಯನ್ನು ಕೋರಲಾಗಿದೆ ಎಂದು ತಿಳಿಸಿದರು.