ದೆಹಲಿಯಲ್ಲಿ ವಾಯು ಮಾಲಿನ್ಯ ಎಷ್ಟು ತೀವ್ರವಾಗಿದೆ ಅನ್ನೋ ವಿಚಾರ ಎಲ್ರಿಗೂ ಗೊತ್ತೇ ಇದೆ.
ವಾಯುಮಾಲಿನ್ಯ ತಡೆಗಟ್ಟಲು ಸರ್ಕಾರ ಸಾಕಷ್ಟು ಕಸರತ್ತುಗಳನ್ನ ನಡೆಸುತ್ತಿದೆ.
ಅಂತೆಯೇ ಪ್ರಮುಖ ಕ್ರಮ ಅಂದ್ರೆ ಪಟಾಕಿ ಹಚ್ಚುವುದಕ್ಕೆ ನಿಷೇಧ. ಹೌದು ಕಳೆದ ಬಾರಿ ದೀಪಾವಳಿ ಸಮಯದಲ್ಲಿ ದೆಹಲಿಯಲ್ಲಿ ಕೇಜ್ರಿವಾಲ್ ಸರ್ಕಾರ ಪಟಾಕಿ ಸಿಡಿಸುವುದಕ್ಕೆ ನಿಷೇಧವೇರಿತ್ತು.
ಈ ಬಾರಿಯೂ ಕೂಡ ಇದೇ ಕ್ರಮವನ್ನ ಅನುಸರಿಸುತ್ತಿದೆ. ಈ ವರ್ಷವೂ ಪಟಾಕಿ ಹಚ್ಚುವುದಕ್ಕೆ ನಿಷೇಧ ಹೇರಲಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕೇಜ್ರಿವಾಲ್, ಕಳೆದ ವರ್ಷದಂತೆಯೇ ಈ ವರ್ಷವೂ ಪಟಾಕಿಗಳ ಶೇಖರಣೆ, ಮಾರಾಟ ಹಾಗೂ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು ಎಂದು ಹೇಳಿದ್ದಾರೆ.
ಇನ್ನೂ ಈ ನಿರ್ಧಾರಕ್ಕೆ ವಾಯು ಮಾಲಿನ್ಯವೊಂದೇ ಕಾರಣವಲ್ಲ. ಕೊರೊನಾ ಹಾವಳಿಯ ನಡುವೆ ಪಟಾಕಿ ಸಿಡಿಸುವುದರಿಂದ ಕೊರೊನಾ ಕೇಸಸ್ ಹೆಚ್ಚಾಗುವ ಸಾಧ್ಯತೆ ಇದೆ.
ಆದ್ರೆ ದೆಹಲಿಯಲ್ಲಿ ಕಳೆದ 3ವರ್ಷಗಳಿಂದಲೂ ಪಟಾಕಿ ಸಿಡಿಸುವುದಕ್ಕೆ ನಿಷೇಧ ಹೇರಲಾಗಿದೆ.