NewDehli : ಯುವತಿಗೆ ಕಾರು ಡಿಕ್ಕಿ : 12 ಕಿಮೀ ರಸ್ತೆಯಲ್ಲಿ ಎಳೆದೊಯ್ದ ಕಾರು
ಯುವತಿಗೆ ಕಾರು ಡಿಕ್ಕಿ : 12 ಕಿಮೀ ರಸ್ತೆಯಲ್ಲಿ ಎಳೆದೊಯ್ದ ಕಾರು
ಹೊಸ ವರ್ಷಾಚರಣೆ ಸಂದರ್ಭದಲ್ಲಿ ದೆಹಲಿಯಲ್ಲಿ ಘಟನೆ
ಅಮನ್ ವಿಹಾರ್ ನಿವಾಸಿ ಅಂಜಲಿ ( 20) ಮೃತ ಯುವತಿ
ಕುಡಿದು ಕಾರು ಚಲಾಯಿಸುತ್ತಿದ್ದ ಕಾರು ಸವಾರರು
ಯುವತಿಗೆ ಡಿಕ್ಕಿ – 12 ಕಿ. ಮಿ ವರೆಗೂ ಎಳೆದು ಹೋದ ಕಾರು
ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಯುವತಿಯೊಬ್ಬಳಿಗೆ ಕಾರ್ ಡಿಕ್ಕಿ ಹೊಡೆದು, ಆಕೆಯನ್ನು ಕಾರು 12 ಕಿ.ಮೀವರೆಗೂ ಎಳೆದೊಯ್ದಿದ್ದು, ಪರಿಣಾಮ ಯುವತಿ ಸಾವನ್ನಪ್ಪಿದ ಘಟನೆ ದೆಹಲಿಯಲ್ಲಿ ನಡೆದಿದೆ.
ಅಮನ್ ವಿಹಾರ್ ನಿವಾಸಿ 20 ವರ್ಷದ ಅಂಜಲಿ ಮೃತ ಯುವತಿಯಾಗಿದ್ದಾಳೆ. ದೆಹಲಿಯ ಸುಲ್ತಾನ್ ಪುರಿಯಲ್ಲಿ ಇಂದು ಬೆಳಗ್ಗೆ ಹೊಸ ವರ್ಷಾಚರಣೆ ಆರಂಭವಾದ ಕೆಲವೇ ಗಂಟೆಗಳಲ್ಲಿ ಈ ಘಟನೆ ನಡೆದಿದೆ.
ಅಂಜಲಿ ಚಲಿಸುತ್ತಿದ್ದ ಸ್ಕೂಟಿಯು ಕಾರಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಕಾರಿನ ಚಕ್ರಕ್ಕೆ ಆಕೆ ಸಿಕ್ಕಿ ಹಾಕಿಕೊಂಡಿದ್ದಾರೆ. ಆದರೂ ಕಾರು 10-12 ಕಿ.ಮೀ ದೂರ ಕ್ರಮಿಸಿದೆ.
ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ಕಾರೊಂದು ಶವವನ್ನು ಎಳೆದುಕೊಂಡು ಹೋಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಅದಾದ ಒಂದು ಗಂಟೆಯ ನಂತರ ರಸ್ತೆಯಲ್ಲಿ ಮಹಿಳೆಯ ಶವ ಬಿದ್ದಿರುವ ಬಗ್ಗೆ ಪೊಲೀಸರಿಗೆ ಮತ್ತೊಂದು ಕರೆ ಬಂದಿದೆ. ಅದಾದ ಬಳಿಕ ಪೊಲೀಸರು ಸ್ಥಳಕ್ಕೆ ನೀಡಿ ಪರಿಶೀಲನೆ ನಡೆಸಿದ್ದು, ವಾಹನಕ್ಕಾಗಿ ಹುಡುಕಾಟ ಪ್ರಾರಂಭಿಸಿದ್ದಾರೆ.
ಈ ವೇಳೆ ನೋಂದಾಯಿತ ಕಾರಿನ ಸಂಖ್ಯೆಯ ಆಧಾರದ ಮೇಲೆ ಆರೋಪಿಗಳನ್ನು ಪತ್ತೆ ಹಚ್ಚಿ, ಘಟನೆಗೆ ಸಂಬಂಧಿಸಿ ಮಾರುತಿ ಸುಜುಕಿ ಬಲೆನೊ ಕಾರಿನಲ್ಲಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಕಾರಿನಲ್ಲಿದ್ದ ಆರೋಪಿಗಳು ಕುಡಿದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕಿ.ಮೀಗಳವರೆಗೂ ಕ್ರಮಿಸಿದರೂ ಕಾರಿನ ಕೆಳಗೆ ಮಹಿಳೆ ಶವ ಇದೆ ಎನ್ನವುದು ತಿಳಿದಿರಲಿಲ್ಲ ಎಂದು ವಿಚಾರಣೆ ವೇಳೆ ತಿಳಿಸಿದ್ದಾರೆ.