ದೇಶದಲ್ಲಿ ಹೊಸದಾಗಿ 3 ಲಕ್ಷ ಕೊರೊನಾ ಪ್ರಕರಣಗಳು ಪತ್ತೆ Saaksha Tv
ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಏರುತ್ತಿದ್ದು ಕಳೆದ 24 ಗಂಟೆಗಯಲ್ಲಿ 3.17 ಲಕ್ಷಕ್ಕೂ ಹೆಚ್ಚು (3,17,532) ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಟಿಟ್ವ್ ಮಾಡಿದೆ.
ದೇಶದಲ್ಲಿ ಸಕ್ರಿಯ ಕೊರೊನಾ ಪ್ರಕರಣಗಳು 19,24,051 ರಷ್ಟಿದ್ದರೆ, ಚೇತರಿಕೆ ದರವು ಶೇಕಡಾ 93.69 ಪ್ರತಿಶತದಷ್ಟಿದೆ. ಕಳೆದ 24 ಗಂಟೆಯಲ್ಲಿ 2,23,990 ಜನ ಚೇತರಿಸಿಕೊಂಡಿದ್ದಾರೆ. ಒಟ್ಟಾರೆ ಚೇತರಿಸಿಕೊಂಡವರ ಸಂಖ್ಯೆ 3,58,07,029.
ಕಳೆದ 24 ಗಂಟೆಯಲ್ಲಿ ವರದಿಯಾದ ಓಮಿಕ್ರಾನ್ ಪ್ರಕರಣಗಳು 9,287, ಇದು ಶೇ 3.63 ರಷ್ಟು ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 491 ಜನ ಮರಣ ಹೊಂದಿದ್ದಾರೆ. ಪ್ರತಿದಿನದ ಕೊರೊನಾ ಏರಿಕೆ ಶೇ 16.41 ಮತ್ತು ವಾರದ ಕೊರೊನಾ ಏರಿಕೆ ಶೇ 16.06 ರಷ್ಟಿದೆ ಎಂದು ಸಚಿವಾಲಯ ತಿಳಿಸಿದೆ.








