ದೇಶದಲ್ಲಿ ಹೊಸದಾಗಿ 30,757 ಕೊರೊನಾ ಪ್ರಕರಣಗಳು ಪತ್ತೆ Saaksha Tv
ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 30,757 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ದಿನದ ಕೊರೊನಾ ಏರಿಕೆ ಪ್ರಮಾಣವು 2.61 ರಷ್ಟಿದ್ದು, ವಾರದ ಏರಿಕೆ ಪ್ರಮಾಣವು 3.04 ರಷ್ಟಿದೆ. ಇನ್ನೂ ಕಳೆದ 24 ಗಂಟೆಯಲ್ಲಿ 67,538 ಜನರು ಗುಣಮುಖರಾಗಿದ್ದು, ಚೇತರಿಕೆ ಪ್ರಮಾಣವು ಶೇ 98.03 ರಷ್ಟಿದೆ. ಅಲ್ಲದೇ ದೇಶದಲ್ಲಿ ಸಕ್ರೀಯ ಪ್ರಕರಣಗಳು 3,32,918 ಲಕ್ಷ ಇದ್ದು, ಸಕ್ರೀಯ ಪ್ರಕರಣಗಳ ಪ್ರಮಾಣವು ಶೇ 0.78 ರಷ್ಟಿದೆ ಎಂದು ಸಚಿವಾಲಯ ತಿಳಿಸಿದೆ.
ಕಳೆದ 24 ಗಂಟೆಯಲ್ಲಿ 541 ಜನರು ಸೋಂಕಿಗೆ ಮರಣ ಹೊಂದಿದ್ದಾರೆ. ಅಲ್ಲದೇ 11,79,705 ಲಕ್ಷ ಕೊರೊನಾ ಪರೀಕ್ಷೆ ಮಾಡಲಾಗಿದೆ. ಇಲ್ಲಿವರಗೆ ದೇಶದಲ್ಲಿ 174.24 ಕೋಟಿ ಕೊರೊನಾ ಲಸಿಕೆ ನೀಡಲಾಗಿದೆ.









