ಬೆಂಗಳೂರು: ಅನುಮಾನಾಸ್ಪದ ರೀತಿಯಲ್ಲಿ ನವವಿವಾಹಿತೆಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಇಲ್ಲಿಯ ಮಹದೇವಪುರದ ಪೊಲೀಸ್ ಠಾಣಾ ವ್ಯಾಪ್ತಿಯ ಸಿಂಗಯ್ಯಪಾಳ್ಯದಲ್ಲಿ ಈ ಘಟನೆ ನಡೆದಿದೆ. ಅನುಷಾ (23) ಸಾವನ್ನಪ್ಪಿದ ಮಹಿಳೆ. ಎರಡು ತಿಂಗಳ ಹಿಂದೆಯಷ್ಟೇ ಮಂಡ್ಯ (Mandya) ಜಿಲ್ಲೆಯ ಮಳವಳ್ಳಿ ಮೂಲದ ಪ್ರವೀಣ್ ಎಂಬ ವ್ಯಕ್ತಿ ಅನುಷಾರನ್ನು ಪ್ರೀತಿಸಿ ಮದುವೆಯಾಗಿದ್ದರು.
ಈ ದಂಪತಿ ಸಿಂಗಯ್ಯಪಾಳ್ಯದಲ್ಲಿ ವಾಸವಿದ್ದರು. ವರದಕ್ಷಿಣೆ ತರುವಂತೆ ಅತ್ತೆ ನಾಗಮ್ಮ ಮತ್ತು ಸೋದರ ಮಾವ ರಾಜೇಶ್ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ. ಮೃತಳ ಪೋಷಕರು ನೀಡಿದ ದೂರಿನ ಅನ್ವಯ ಮಹದೇವಪುರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.