ಪ್ರೇಯಸಿ ಜೊತೆ ಪರಾರಿಯಾದ ನವವಿವಾಹಿತೆ – ಪತಿಗೆ ಹೃದಯಾಘಾತ

1 min read

ಪ್ರೇಯಸಿ ಜೊತೆ ಪರಾರಿಯಾದ ನವವಿವಾಹಿತೆ – ಪತಿಗೆ ಹೃದಯಾಘಾತ

ಕೇರಳ : ಮದುವೆಯಾದ ಮರುದಿನವೇ ಮಧುಮಗಳು ತನ್ನ ಪ್ರೇಯಸಿ ಜೊತೆಗೆ ಪರಾರಿಯಾಗಿರುವ ವಿಲಕ್ಷಣ ಘಟನೆ ಕೇರಳದಲ್ಲಿ ನಡೆದಿದೆ. ಪತ್ನಿಯ ಕೃತ್ಯದಿಂದ ಆಘಾತಕ್ಕೆ ಒಳಗಾದ ಪತಿಗೆ ಹೃದಯಾಘಾತವಾಗಿದೆ.  ಆತನಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ. ತ್ರಿಶೂರ್‍ನ ಪಝುವಿಲ್ ನ 23 ವರ್ಷದ ಯುವತಿ  ಮದುವೆ ಮಾರನೇ ದಿನವೇ ತನ್ನ ಪ್ರಿಯತಮೆ ಜೊತೆಗೆ ಎಸ್ಕೇಪ್ ಆಗಿದ್ದಾಳೆ.

ಹೆಂಡತಿ ಪರಾರಿಯಾಗಿರುವ ಬಗ್ಗೆ ಆಕೆಯ ಗಂಡ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಆರಂಭಿಸಿದ ಪೊಲೀಸರಿಗೆ 6 ದಿನಗಳ ತನಿಖೆ ನಂತರ  ಆಕೆ ತನ್ನ ಗರ್ಲ್ ಫ್ರೆಂಡ್ ಜೊತೆಗೆ ಓಡಿ ಹೋಗಿರೋದಾಗಿ ತಿಳಿದುಬಂದಿದೆ.  ಮದುವೆಯಾದ ಮಾರನೇ ದಿನ ಬ್ಯಾಂಕ್‍ ಗೆ ಹೋಗಿದ್ದ ಆಕೆ, ಗಂಡನ ಮೊಬೈಲ್ ತೆಗೆದುಕೊಂಡು ನನ್ನ ಗೆಳತಿಯನ್ನು ಭೇಟಿ ಮಾಡಿ ವಾಪಾಸ್ ಬರುತ್ತೇನೆ ಎಂದು ಹೇಳಿ ಹೋಗಿದ್ದಳು. ಆದರೆ ಬೈಕ್‍ ನಲ್ಲಿ ಹೋದ ಆಕೆ ಮತ್ತೆ ವಾಪಾಸ್ ಬಂದಿಲ್ಲ. ಆಗ ಆಕೆಯ ಪತಿ ಪೊಲೀಸ್ ಠಾಣೆಯಲ್ಲಿ ತನ್ನ ಹೆಂಡತಿ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು.

ತ್ರಿಶೂರ್‍ನಿಂದ ತನ್ನ ಗೆಳತಿಯೊಂದಿಗೆ ಪರಾರಿಯಾಗುವುದಕ್ಕೆ ಆ ಮಹಿಳೆ ಚೆನ್ನೈಗೆ ರೈಲು ಟಿಕೆಟ್ ಬುಕ್ ಮಾಡಿದ್ದರು. ಆದರೆ ಸಿಕ್ಕಿ ಬೀಳುತ್ತೇವೆಂಬ ಭಯದಿಂದ ಅವರಿಬ್ಬರೂ ಬಸ್ ಮೂಲಕ ಕೊಟ್ಟಾಯಂಗೆ ಹೋಗಿ ಅಲ್ಲಿಂದ ಚೆನ್ನೈಗೆ ರೈಲಿನಲ್ಲಿ ಹೋಗಿದ್ದರು. ಅಲ್ಲಿಂದ ಹೋಟೆಲ್‍ನಲ್ಲಿ ರೂಂ ಬುಕ್ ಮಾಡಿಕೊಂಡು ಇದ್ದರು.

ಇನ್ನೂ ವಧುವಿನ ಗೆಳತಿಗೂ ಕೂಡ ಇತ್ತೀಚೆಗಷ್ಟೇ ಮದುವೆಯಾಗಿತ್ತು. ಆದ್ರೆ ಈ ಇಬ್ಬರೂ ಕೂಡ ಚಿನ್ನಾಭರಣಗಳ ಜೊತೆಗೆ ಮನೆಗಳಿಂದ ಎಸ್ಕೇಪ್ ಆಗಿ ಬಂದಿದ್ದರು ಎಂಬುದನ್ನ ತನಿಖೆ ವೇಳೆ ಪೊಲೀಸರು ಪತ್ತೆ ಮಾಡಿದ್ದಾರೆ.  ಇಬ್ಬರೂ ಮಹಿಳೆಯರನ್ನ ಪತ್ತೆ ಮಾಡಿರುವ ಪೊಲೀಸರು ಅವರರ ಗಂಡಂದಿರ ಮನೆಗೆ ಕಳುಹಿಸಿರುವುದಾಗಿ ತಿಳಿದುಬಂದಿದೆ.

ನೋ ಪಟಾಕಿ ಎಂದವರಿಗೆ 3 ದಿನ ಕಾರ್ ಬಳಸದೇ ನಡೆದುಕೊಂಡು ಹೋಗಿ ಎಂದ ಕಂಗನಾ..!  

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd