ಪುಷ್ಪಾ ಚಿತ್ರದಂತೆ ಬ್ಲೇಡ್ ನಿಂದ ಗಂಡನ ಕತ್ತು ಸೀಳಿದ ಪತ್ನಿ….
ಅಲ್ಲು ಅರ್ಜುನ್ ನಟನೆಯ ಪುಷ್ಪ ಚಿತ್ರದ ದೃಶ್ಯವೊಂದು ತೆಲಂಗಾಣದಲ್ಲಿ ಯಥಾವತ್ತು ಪುನಾರಾವರ್ತನೆಯಾಗಿದೆ. ಸಿನಿಮಾದಲ್ಲಿ ದ್ರಾಕ್ಷಾಯಿಣಿ ಬ್ಲೇಡ್ ನಿಂದ ಗಂಡನ ಕತ್ತು ಸೀಳಿದಂತೆ ನವವಿವಾಹಿತೆಯೊಬ್ಬಳು ಗಂಡನ ಕತ್ತು ಸೀಳಿ ಕೊಲೆ ಮಾಡಲು ಯತ್ನಿಸಿರುವ ಘಟನೆ ತೆಲಂಗಾಣ ರಾಜ್ಯದಲ್ಲಿ ನಡೆದಿದೆ.
ತೆಲಂಗಾಣ ರಾಜ್ಯದ ಹನಮಕೊಂಡ ಜಿಲ್ಲೆಯ ದಾಮೆರಾ ಮಂಡಲದ ಪಸರಗೊಂಡ ಗ್ರಾಮದಲ್ಲಿ ನವವಿವಾಹಿತೆಯೊಬ್ಬಳು ನಸುಕಿನಲ್ಲಿ ತನ್ನ ಪತಿಯ ಕತ್ತನ್ನ ಬ್ಲೇಡ್ನಿಂದ ಕೊಯ್ದು ಕೊಲೆ ಮಾಡಲು ಯತ್ನಿಸಿರುವ ವಿಲಕ್ಷಣಕಾರಿ ಮತ್ತು ಆಘಾತಕಾರಿ ಘಟನೆ ನಡೆದಿದೆ. ಹಲ್ಲೆಗೊಳಗಾದ ಮಾದಿಶೆಟ್ಟಿ ರಾಜು (30) ಅವರನ್ನು ವಾರಂಗಲ್ನ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ರಾಜು ಕಳೆದ ಮಾರ್ಚ್ 25 ರಂದು ಅರ್ಚನಾಳನ್ನು ವಿವಾಹಗಿದ್ದ.
“ಬೆಳಿಗ್ಗೆ 2 ಗಂಟೆ ಸುಮಾರಿಗೆ, ಅವಳು ಬ್ಲೇಡ್ನಿಂದ ತನ್ನ ಗಂಡನ ಕತ್ತು ಸೀಳಿದಳು. ತೀವ್ರ ರಕ್ತಸ್ರಾವವಾಗುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದೇವೆ ಎಂದು ಸಂಬಂಧಿಕರೊಬ್ಬರು ತಿಳಿಸಿದರು. ದಾಮೆರ ಪೊಲೀಸರು ಮನೆ ಹಾಗೂ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.
Newly-wed woman attempts to kill husband by slitting his throat in Hanamkonda