Newz v Ind ODI Series : ನ್ಯೂಜಿಲ್ಯಾಂಡ್ ವಿರುದ್ಧ ಭಾರತಕ್ಕೆ 7 ವಿಕೆಟ್ಗಳ ಸೋಲು
ಮಧ್ಯಮ ಕ್ರಮಾಂಕದ ಆಟಗಾರ ಟಾಮ್ ಲೇಥಮ್(145*) ಹಾಗೂ ನಾಯಕ ಕೇನ್ ವಿಲಿಯಮ್ಸನ್(94*) ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದ ಭಾರತದ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ನ್ಯೂಜಿ಼ಲೆಂಡ್ 7 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ. ಆ ಮೂಲಕ ಮೂರು ಪಂದ್ಯಗಳ ODI ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಆಕ್ಲೆಂಡ್ನ ಸೆಡನ್ ಪಾರ್ಕ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿ಼ಲೆಂಡ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 306 ರನ್ಗಳ ಸವಾಲಿನ ಮೊತ್ತ ಕಲೆಹಾಕಿತು. ಆದರೆ ಟಾರ್ಗೆಟ್ ಬೆನ್ನತ್ತಿದ ನ್ಯೂಜಿ಼ಲೆಂಡ್ 47.1 ಓವರ್ಗಳಲ್ಲಿ ಕೇವಲ 3 ವಿಕೆಟ್ ನಷ್ಟಕ್ಕೆ 309 ರನ್ಗಳಿಸುವ ಮೂಲಕ 7 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು. ಕಿವೀಸ್ ಪರ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ವಿಕೆಟ್ ಕೀಪರ್ ಟಾಮ್ ಲೇಥಮ್(145*) ಹಾಗೂ ನಾಯಕ ಕೇನ್ ವಿಲಿಯಮ್ಸನ್ (94*) ತಂಡದ ಗೆಲುವಿನ ಹೀರೋಗಳಾಗಿ ಮಿಂಚಿದರು.
ಕೇನ್-ಲೇಥಮ್ ಜುಗಲ್ ಬಂದಿ
ಭಾರತ ನೀಡಿದ 307 ರನ್ಗಳ ಸವಾಲು ಬೆನ್ನತ್ತಿದ ನ್ಯೂಜಿ಼ಲೆಂಡ್ ಉತ್ತಮ ಆರಂಭ ಪಡೆಯಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದ ಫಿನ್ ಅಲೆನ್(22), ಡೆವೊನ್ ಕಾನ್ವೇ(24) ಹಾಗೂ ನಂತರದಲ್ಲಿ ಬಂದ ಡ್ಯಾರಿಲ್ ಮಿಚೆಲ್(11) ನಿರೀಕ್ಷಿತ ಆಟವಾಡಲಿಲ್ಲ. ಆದರೆ ನಂತರ ಜೊತೆಯಾದ ಕೇನ್ ವಿಲಿಯಮ್ದನ್(94* ರನ್ಗಳು, 98 ಬಾಲ್ಸ್, 7 ಬೌಂಡರಿ ಹಾಗೂ 1 ಸಿಕ್ಸ್) ಹಾಗೂ ಟಾಮ್ ಲೇಥಮ್ (145* ರನ್ಗಳು, 104 ಬಾಲ್ಸ್, 19 ಬೌಂಡರಿ ಹಾಗೂ 5 ಸಿಕ್ಸ್) ಟೀಂ ಇಂಡಿಯಾ ಬೌಲರ್ಗಳ ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸಿದರು. ಹಂತ ಹಂತವಾಗಿ ಇನ್ನಿಂಗ್ಸ್ ಕಟ್ಟಿದ ಈ ಇಬ್ಬರು 4ನೇ ವಿಕೆಟ್ಗೆ ಅಜೇಯ 221* ರನ್ಗಳ ಜೊತೆಯಾಟವಾಡಿ ಮಿಂಚಿದರು. ಭಾರತದ ಪರ ಉಮ್ರಾನ್ ಮಲ್ಲಿಕ್ 2 ವಿಕೆಟ್ ಪಡೆದರೆ, ಶಾರ್ದೂಲ್ ಥಾಕೂರ್ 1 ವಿಕೆಟ್ ಪಡೆದರು.
ಭಾರತದ ಪೈಪೋಟಿಯ ಮೊತ್ತ
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಭಾರತ 50 ಓವರ್ಗಳಲ್ಲಿ 7 ವಿಕೆಟ್ಗೆ 306 ರನ್ಗಳಿಸಿತು. ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕ ಶಿಖರ್ ಧವನ್(72) ಹಾಗೂ ಶುಭ್ಮನ್ ಗಿಲ್(51) ಮೊದಲ ವಿಕೆಟ್ಗೆ 124 ರನ್ಗಳಿಸಿದರು. ಆದರೆ ನಂತರದಲ್ಲಿ ಕಣಕ್ಕಿಳಿದ ರಿಷಬ್ ಪಂತ್(15) ಹಾಗೂ ಸೂರ್ಯಕುಮಾರ್ ಯಾದವ್(4) ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಆದರೆ 1ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶ್ರೇಯಸ್ ಅಯ್ಯರ್(80) ಜವಾಬ್ದಾರಿಯ ಬ್ಯಾಟಿಂಗ್ ಮೂಲಕ ತಂಡಕ್ಕೆ ಆಸರೆಯಾದರೆ. ಮಧ್ಯಮ ಕ್ರಮಾಂಕದಲ್ಲಿ ಸಂಜೂ ಸ್ಯಾಮ್ಸನ್(36) ಹಾಗೂ ವಾಷಿಂಗ್ಟನ್ ಸುಂದರ್(37*) ಬಿರುಸಿನ ಆಟವಾಡಿ ತಂಡದ ಮೊತ್ತ 306 ರನ್ಗಳಿಗೆ ಹೆಚ್ಚಿಸಿದರು. ಕಿವೀಸ್ ಪರ ಉತ್ತಮ ಫೆರ್ಗುಸನ್ 3/59 ಹಾಗೂ ಟಿಮ್ ಸೌಥಿ 3/73 ಉತ್ತಮ ಬೌಲಿಂಗ್ ದಾಳಿ ನಡೆಸಿದರು.
ಇಂದಿನ ಪಂದ್ಯದಲ್ಲಿ ಭಾರತದ ಪರ ಅರ್ಶದೀಪ್ ಸಿಂಗ್ ಹಾಗೂ ಉಮ್ರಾನ್ ಮಲ್ಲಿಕ್ ODI ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದರು. ಉಭಯ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯ ನ.27ರಂದು ಹ್ಯಾಮಿಲ್ಟನ್ ನಲ್ಲಿ ನಡೆಯಲಿದೆ.