ಮುಂದಿನ ’10 ದಿನ ಬೆಂಗಳೂರು ಲಾಕ್’ : ಖಡಕ್ ರೂಲ್ಸ್ ಘೋಷಣೆಗೆ ಕ್ಷಣಗಣನೆ
ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಅಬ್ಬರ ಊಹೆಗೂ ಮೀರಿ ಆರ್ಭಟಿಸುತ್ತಿದೆ.
ಪ್ರತಿ ದಿನ ನಗರದಲ್ಲಿ ಕೊರೊನಾ ಸ್ಫೋಟವಾಗುತ್ತಿದೆ. ನಿನ್ನೆ ನಗರದಲ್ಲಿ ಕೊರೊನಾ ಸುನಾಮಿ ಅಪ್ಪಳಿಸಿದ್ದು, ಬರೋಬರಿ 10 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ.
ಈ ಹಿನ್ನೆಲೆ ನಗರದಲ್ಲಿ ಕನಿಷ್ಠ 10 ದಿನ ಲಾಕ್ ಡೌನ್ ಮಾಡಲೇಬೇಕೆಂದು ತಜ್ಞರ ಸಮಿತಿ ತಿಳಿಸಿದೆ.
ಕೊರೊನಾ ಹೆಚ್ಚಳ ಹಿನ್ನೆಲೆ ಸಿಎಂ ಬಿಎಸ್ ಯಡಿಯೂರಪ್ಪ ಇಂದು ತುರ್ತು ಸಭೆ ನಡೆಸುತ್ತಿದ್ದಾರೆ.
ಸಭೆಯಲ್ಲಿ ತಜ್ಞರು ಬೆಂಗಳೂರಲ್ಲಿ ಕೊರೊನಾ ಸ್ಫೋಟದ ಬಗ್ಗೆ ಆತಂಕ ವ್ಯಕ್ತಪಡಿಸಿ, ಕೊರೊನಾ ಚೈನ್ ಕಟ್ ಮಾಡಲು ಕನಿಷ್ಠ 10 ದಿನ ಲಾಕ್ ಡೌನ್ ಮಾಡಿ ಎಂದು ಸಲಹೆ ನೀಡಿದ್ದಾರೆ.
ಇನ್ನೊಂದೆಡೆ ನಗರದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವುದು ಸರ್ಕಾರಕ್ಕೆ ತಲೆ ಬಿಸಿ ತಂದೊಡ್ಡಿದೆ.
ಈ ಹಿನ್ನಲೆ ಬೆಂಗಳೂರಿಗೆ ಖಡಕ್ ರೂಲ್ಸ್ ತರುವ ಬಗ್ಗೆ ಸಿಎಂ ಚರ್ಚೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.