NIA | ಕೊಪ್ಪಳ ಪಿಎಫ್ಐ ಅಧ್ಯಕ್ಷ ಅಬ್ದುಲ್ ಫಯಾಜ್ ಅರೆಸ್ಟ್
ಕೊಪ್ಪಳ : ರಾಜ್ಯದಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಸೋಷಿಯಲ್ ಡೆಮಾಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಚೇರಿ ಮತ್ತು ನಾಯಕರ ನಿವಾಸದ ಮೇಲೆ ರಾಷ್ಟ್ರೀಯ ತನಿಖಾ ದಳ ದಾಳಿ ನಡೆಸಿದೆ.
ಅದರಂತೆ ಕೊಪ್ಪಳದಲ್ಲೂ ಎನ್ ಎಐ ಅಧಿಕಾರಿಗಳು ದಾಳಿಸಿದ್ದು, ಕೊಪ್ಪಳ ಪಿಎಫ್ಐ ಅಧ್ಯಕ್ಷ ಅಬ್ದುಲ್ ಫಯಾಜ್ ಅರೆಸ್ಟ್ ಮಾಡಿದ್ದಾರೆ.
ಗಂಗಾವತಿ ನಗರದ ಮನೆಯಲ್ಲೇ ಫಯಾಜ್ ಬಂಧನವಾಗಿದೆ. ಎನ್ ಐಎ ಅಧಿಕಾರಿಗಳು ಫಯಾಜ್ ನನ್ನ ಬೆಂಗಳೂರಿಗೆ ಕರೆತರುತ್ತಿದ್ದಾರೆ.
ಬೆಂಗಳೂರಿನ ರಿಚ್ ಮಂಡ್ ಟೌನ್ ನಲ್ಲಿರುವ ಪಿಎಫ್ಐ ನ ನ್ಯಾಷನಲ್ ಸೆಕ್ರೆಟರಿ ಮೊಹಮ್ಮದ್ ಸಾಕಿಬ್ ನಿವಾಸದ ಮೇಲೆ ದಾಳಿ ನಡೆಸಿದೆ.
ಇದನ್ನ ಖಂಡಿಸಿ ಪಿಎಫ್ ಐ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸಿದ್ದಾರೆ. ಇದರಿಂದ ಸ್ಥಳದಲ್ಲಿ ಹೆಚ್ಚಿನ ಭದ್ರತೆ ಹಮ್ಮಿಕೊಳ್ಳಲಾಗಿದೆ.
ಇತ್ತ ಬೆಂಗಳೂರಿನ ಪಾದರಾಯನಪುರದಲ್ಲೂ ಎನ್ಐಎ ರೇಡ್ ಮಾಡಿದ್ದು, ಪಿಎಫ್ಐ ಕಾರ್ಯದರ್ಶಿ ಅಪ್ಸರ್ ಪಾಷಾ ಮನೆ ಮೇಲೆ ದಾಳಿ ನಡೆಸಲಾಗಿದೆ.