Nigeria | ನೈಜೀರಿಯಾದಲ್ಲಿ ಹಡಗು ಮುಳುಗಿ 10 ಜನ ಸಾವು
ಅಬುಜಾ : ಹಡಗೊಂದು ಮುಳುಗಿ ಕನಿಷ್ಟ 10 ಮಂದಿ ಮೃತಪಟ್ಟು, 60 ಜನರು ನಾಪತ್ತೆಯಾಗಿರುವ ಘಟನೆ ನೈಜೀರಿಯಾದ ಅನಂಬ್ರಾ ರಾಜ್ಯದಲ್ಲಿ ನಡೆದಿದೆ.
ಮೂಲಗಳ ಪ್ರಕಾರ ಈ ಹಡಗಿನಲ್ಲಿ 85 ಜನರಿದ್ದರಂತೆ. ಭಾರಿ ಅಲೆಗಳ ನಡುವೆ ಹಡಗು ಮುಳುಗಿದೆ.

ಘಟನೆಯಲ್ಲಿ 10 ಜನರು ಮೃತಪಟ್ಟಿದ್ದು, 60 ಜನ ನಾಪತ್ತೆಯಾಗಿದ್ದರು.
ಸದ್ಯ ನಾಪತ್ತೆಯಾದವರಿಗಾಗಿ ವಿಪತ್ತು ನಿರ್ವಹಣಾ ಘಟಕ ವತಿಯಿಂದ ಶೋಧಕಾರ್ಯ ಮುಂದುವರೆದಿದೆ.
ಈಗಾಗಲೇ 15 ಜನರನ್ನು ರಕ್ಷಿಸಲಾಗಿದೆ.