Nigeria : ಹದಿನಾರು ಜನರನ್ನ ಗುಂಡಿಕ್ಕಿ ಹತ್ಯೆ ಮಾಡಿದ ಫುಲಾನಿ ಜನಾಂಗ…
ವಾಯುವ್ಯ ನೈಜೀರಿಯಾದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ದುಷ್ಕರ್ಮಿಗಳು ಕನಿಷ್ಠ 16 ಜನರನ್ನ ಹತ್ಯೆ ಮಾಡಿದ್ದಾರೆ ಎಂದು ಅಲ್ಲಿನ ಸರ್ಕಾರ ಭಾನುವಾರ ತಿಳಿಸಿದೆ.
ಬಂದೂಕು ಮತ್ತು ಆಯುಧಗಳನ್ನ ಹೊಂದಿದ್ದ ದಾಳಿಕೋರರು ಕಡುನಾ ರಾಜ್ಯದ ಝಾಂಗೋನ್ ಕಟಾಫ್ ಸರ್ಕಾರಿ ಪ್ರದೇಶಕ್ಕೆ ನುಗ್ಗಿ ಚೆಕ್ ಪಾಯಿಂಟ್ ನಲ್ಲಿ ಪೊಲೀಸರೊಂದಿಗೆ ಘರ್ಷಣೆಯ ನಂತರ ಶನಿವಾರ ಗುಂಡು ಹಾರಿಸಿದ್ದಾರೆ ಎಂದು ಸ್ಥಳೀಯ ಸರ್ಕಾರದ ವಕ್ತಾರ ಯಾಬೋ ಎಫ್ರೈಮ್ ಅಸೋಸಿಯೇಟೆಡ್ ಪ್ರೆಸ್ಗೆ ತಿಳಿಸಿದರು.
ದಾಳಿಯ ನಂತರ ಅಧಿಕಾರಿಗಳು ಕರ್ಫ್ಯೂ ವಿಧಿಸಿದ್ದಾರೆ. ದಾಳಿಕೋರರು ಫುಲಾನಿ ಜನಾಂಗದವರಾಗಿದ್ದು, ಹೆಚ್ಚಾಗಿ ಅಲೆಮಾರಿ ಪಶುಪಾಲಕರಾಗಿದ್ದಾರೆ. ನೀರು ಮತ್ತು ಭೂಮಿಗೆ ಸೀಮಿತ ಪ್ರವೇಶಕ್ಕಾಗಿ ರೈತರೊಂದಿಗೆ ಸುದೀರ್ಘ ಸಂಘರ್ಷದಲ್ಲಿ ಸಿಲುಕಿದ್ದಾರೆ ಎಂದು ಎಫ್ರೇಮ್ ಹೇಳಿದ್ದಾರೆ.
ಕೆಲವು ಗ್ರಾಮಸ್ಥರು ಮತ್ತು ಫುಲಾನಿ ಸಣ್ಣ ಗುಂಪಿನ ನಡುವೆ ಮಾರಾಮಾರಿ ನಡೆದಿತ್ತು. ನಂತರ ಸ್ಥಳ ತೊರೆದಿದ್ದವರು. ಬಂದೂಕು ಮತ್ತು ಆಯುಧಗಳೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಹಲ್ಲೆ ನಡೆಸಿದ್ದಾರೆ. ಮನೆಗಳಲ್ಲಿ ಅಡಗಿಕೊಂಡಿದ್ದವರನ್ನೂ ಹುಡುಕಿ ಹತ್ಯೆ ಮಾಡಿದ್ದಾರೆ. ನೈಜೀರಿಯಾದಲ್ಲಿ, ವಿಶೇಷವಾಗಿ ದೇಶದ ಉತ್ತರ ಭಾಗದಲ್ಲಿ ಇಂತಹ ದಾಳಿಗಳು ಸಾಮಾನ್ಯವಾಗಿವೆ.
Nigeria: Sixteen people were shot and killed by the Fulani tribe…