ಇಂದಿನಿಂದ ನೈಟ್ ಕರ್ಫ್ಯೂ : ಯಾವುದಕ್ಕೆ ನಿರ್ಬಂಧ..?
ಬೆಂಗಳೂರು : ಹೊಸ ವರ್ಷ ಆಚರಣೆ ವೇಳೆ ಕೊರೊನಾ ಸೋಂಕು ಹರಡದಂತೆ ನೋಡಿಕೊಳ್ಳಲು ರಾಜ್ಯ ಸರ್ಕಾರ ಇಂದಿನಿಂದ ನೈಟ್ ಕರ್ಫ್ಯೂ ಜಾರಿ ಮಾಡಿದೆ.
ಇದು ಮುಂದಿನ ಜನವರಿ 7ನೇ ತಾರೀಕಿನ ವರೆಗೂ ಜಾರಿಯಲ್ಲಿ ಇರಲಿದೆ.
ಸರ್ಕಾರದ ನಿಯಮಾನುಸಾರ 144 ಸೆಕ್ಷನ್ ಜಾರಿಯಲ್ಲಿರಲಿದ್ದು, ನಿಯಮ ಉಲ್ಲಂಘಿಸಿದರೇ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತಿದೆ.
ಅಗತ್ಯ ಚಟುವಟಿಕೆಗಳನ್ನು ಬಿಟ್ಟು ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ಜನರ ಓಡಾಟಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ.
ಯಾವುದಕ್ಕೆ ನಿರ್ಬಂಧ ಇಲ್ಲ
ಆರೋಗ್ಯದ ವಿಚಾರವಾಗಿ ಓಡಾಟಕ್ಕೆ ತುರ್ತು ಅಗತ್ಯ ಸಂಚಾರಕ್ಕೆ ಅವಕಾಶ..
ನೈಟ್ ಶಿಫ್ಟ್ ಮಾಡುವವರು ಕಂಪನಿಯಿಂದ ಅನುಮತಿ ಪತ್ರ ತರಬೇಕು
ಮೆಡಿಕಲ್ , ವೈದ್ಯಕೀಯ, ತುರ್ತು ಮತ್ತು ಅಗತ್ಯ ಸೇವೆಗಳು ಹೊರತುಪಡಿಸಿ ಇತರ ವಾಣಿಜ್ಯ ಚಟುವಟಿಕೆಗಳು ನಿಷೇಧ.
ಸರಕುಗಳ ಸಾಗಣೆಗೆ ಯಾವುದೇ ನಿರ್ಬಂಧವಿಲ್ಲ
ಹೋಮ್ ಡೆಲಿವರಿ ಮತ್ತು ಇ-ಕಾಮರ್ಸ್ನ ಕಂಪನಿಗಳಿಗೆ ಅನುಮತಿ.
ಬಸ್ಗಳು, ರೈಲುಗಳು, ಮೆಟ್ರೋ ರೈಲು ಸೇವೆಗಳು ಮತ್ತು ವಿಮಾನ ಪ್ರಯಾಣಕ್ಕೂ ಅನುಮತಿಸಲಾಗಿದೆ. ಆದ್ರೆ ಟಿಕೆಟ್ ತೋರಿಸಬೇಕು.