ಇಂದಿನಿಂದ night Curfew ರಾತ್ರಿ ಕರ್ಫ್ಯೂ : ಫ್ಲೈಓವರ್ ಗಳು 9.50ರಿಂದಲೇ ಬಂದ್..!
ಬೆಂಗಳೂರು : ಇಂದಿನಿಂದ ರಾತ್ರಿ ಕರ್ಫ್ಯೂ ಜಾರಿ ಹಿನ್ನಲೆ, ಬೆಂಗಳೂರಿನ ಫ್ಲೈಓವರ್ ಗಳನ್ನು ಬಂದ್ ಮಾಡಲಿಕ್ಕೆ ಪೊಲೀಸ್ ಕಮಿಷನರ್ ಆದೇಶ ಹೊರಡೆಸಿದ್ಧಾರೆ.
ಈ ಹಿನ್ನೆಲೆ ರಾತ್ರಿ 9.50ಕ್ಕೆ ಸಂಚಾರಿ ಪೊಲೀಸ್ ಸಿಬ್ಬಂದಿಗಳು ಫ್ಲೈಓವರ್ ಗಳ ಬಂದ್ ಮಾಡಲಿದ್ದಾರೆ.
ರಿಯಾಯಿತಿ ಇರುವ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗ್ತಿದೆ. ದ್ವಿಮುಖ ರಸ್ತೆಯಲ್ಲಿ ಒಂದು ಮಾರ್ಗ ಬಂದ್ ಮಾಡಲಾಗುವುದು.
ಒಂದು ರಸ್ತೆಯಲ್ಲಿ ಮಾತ್ರ ಸಂಚಾರಕ್ಕೆ ಅನುವು. ವಿಡಿಯೋ ವಾಲ್ ಸಹ ಕೆಲಸ ಮಾಡುತ್ತಿರುತ್ತೆ..
ಸಿಸಿಟಿವಿ ಆಧರಿಸಿ ಸಂಚರಿಸಿದ ವಾಹನಗಳ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಂಚಾರಿ ಜಂಟಿ ಪೊಲೀಸ್ ಆಯುಕ್ತರಾದ ರವಿಕಾಂತೇಗೌಡ ಹೇಳಿದ್ದಾರೆ.









